ಚೈತನ್ಯ ಐಟಿಐಯಲ್ಲಿ ಅಂತಿಮ ವರ್ಷದ ತರಬೇತಿದಾರರಿಗೆ ಬೀಳ್ಕೊಡುಗೆ ಸಮಾರಂಭ
Farewell ceremony for final year trainees at Chaitanya ITI
ಲೋಕದರ್ಶನ ವರದಿ
ಮೂಡಲಗಿ 26 : ಪಟ್ಟಣದ ಚೈತನ್ಯ ಸೋಶಿಯಲ್ ವೆಲ್ಫೇರ್ ಸೊಸಾಯಿಟಿ ಅಧೀನದ ಚೈತನ್ಯ ಐಟಿಐ ಕಾಲೇಜಿನಲ್ಲಿ ಅಂತಿಮ ವರ್ಷದ ತರಬೇತಿದಾರರ ಬೀಳ್ಕೊಡುವ ಸಮಾರಂಭವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಮುಕ್ತಾ ಕಿಣಗಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ, ಗಣ್ಯರು ಸಂಸ್ಥೆಯ ಸಂಸ್ಥಾಪಕ ಹಾಗೂ ದಿವಂಗತ ಶಿಕ್ಷಣ ಪ್ರೇಮಿ ಸಿದ್ದಣ್ಣ ಎಸ್. ಹೊರಟ್ಟಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಗೌರವ ಸಲ್ಲಿಸಿದರು.
ಸಂಸ್ಥೆಯ ಸಾಧನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಎಸ್. ಬಿ. ಕುಳ್ಳೋಳಿ ಅವರು, ಕಳೆದ ಆರು ವರ್ಷಗಳಿಂದ ಕೇಂದ್ರ ಸರ್ಕಾರದ ಅಖಿಲಭಾರತ ವೃತ್ತಿ ಪರೀಕ್ಷೆಗಳಲ್ಲಿ ಸಂಸ್ಥೆಯು ಸತತವಾಗಿ ಶೇಕಡಾ 100 ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಾಯಬಾಗ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಸ್. ಎಸ್. ನಿಡಗುಂದಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಅವರು ವಿದ್ಯಾರ್ಥಿಗಳಿಗೆ ಐಟಿಐ ನಂತರದ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.
ಇದೇ ವೇದಿಕೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಇಲೆಕ್ಟ್ರೀಷಿಯನ್ ವಿಭಾಗದ ಆದಿತ್ಯ ಪೂಜೇರಿ, ಫಿಟ್ಟರ್ ವಿಭಾಗದ ಕುಮಾರ ಶಿವರಾಜ ಬಡಿಗೇರ, ಮೋಟಾರ್ ಮೆಕ್ಯಾನಿಕ್ ವೆಹಿಕಲ್ ವಿಭಾಗದ ಕುಮಾರ ಮನೋಜ ಬಡಿಗೇರ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಯಶಸ್ವಿ ಸ್ವಾವಲಂಬಿ ಉದ್ಯೋಗಿ ಉಮೇಶ ಹಡಗಿನಾಳ ಅವರನ್ನು ಪ್ರಮಾಣಪತ್ರ ನೀಡಿ ವಿಶೇಷವಾಗಿ ಗೌರವಿಸಲಾಯಿತು. ಇದರೊಂದಿಗೆ ಉತ್ತಮ ಹಾಜರಾತಿ, ಶಿಸ್ತು ಮತ್ತು ಶೈಕ್ಷಣಿಕ ಸಾಧನೆ ತೋರಿದ ಹಿರಿಯ ವಿಭಾಗದ ಅಭಿಷೇಕ ಶಿವಾಪೂರ, ಲಕ್ಷ್ಮಣ ಪಾಗದ, ಗಂಗಾರಾಮ ಗದಗೈಗೋಳ ಹಾಗೂ ಕಿರಿಯ ವಿಭಾಗದ ಸೃಜನ ಮುಸಳಿ, ಶ್ರೀಶೈಲ ಕಂಕಣವಾಡಿ ಮತ್ತು ಸುಶಾಂತ ಅರಭಾವಿ ಅವರಿಗೆ "ಉತ್ತಮ ತರಬೇತಿದಾರ" ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ಕೃತಜ್ಞತೆಗಳನ್ನು ಹಂಚಿಕೊಳ್ಳುತ್ತಾ, ಸಂಸ್ಥೆಯು ತಮ್ಮ ಬದುಕಿಗೆ ಭದ್ರ ಅಡಿಪಾಯ ಹಾಕಿಕೊಟ್ಟಿದೆ ಎಂದು ಭಾವನಾತ್ಮಕವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಎಂ. ಕಮದಾಳ ಅವರು ಮಾತನಾಡಿ, ವೃತ್ತಿಪರ ಶಿಕ್ಷಣವು ಯುವಕರಿಗೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಇಲ್ಲಿ ಕಲಿತ ಕೌಶಲ್ಯವನ್ನು ಸಮಾಜದ ಪ್ರಗತಿಗಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಉದಯಕುಮಾರ ಆರ್. ಜೋಕಿ, ತಮ್ಮಣ್ಣ ಬಿ. ಕೆಂಚರಡ್ಡಿ, ವಿಜಯ ಎಸ್. ಹೊರಟ್ಟಿ, ವೈ. ಬಿ. ಪಾಟೀಲ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆರ್. ವೈ. ನಾಯಿಕ್ ಸ್ವಾಗತ ಕೋರಿದರೆ, ಟಿ. ಆರ್. ಝಾರೆ, ಶಿವಾನಂದ ಪೂಜೇರಿ ಮತ್ತು ದೀಪಾ ಕಲ್ಯಾಣಿ ಸಮರ್ಥವಾಗಿ ಕಾರ್ಯಕ್ರಮ ನಿರೂಪಿಸಿದರು. ಜಿತೇಂದ್ರ ಎಸ್. ಸಮಾಜೆ ವಂದನಾರೆ್ಣ ಮಾಡಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 