ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಉತ್ತಮ ಶಿಕ್ಷಣ ಕೊಡಿಸಿ : ಶಾಸಕ ಗಣೇಶ

ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಉತ್ತಮ ಶಿಕ್ಷಣ ಕೊಡಿಸಿ : ಶಾಸಕ ಗಣೇಶ Give children a good education with literacy: MLA Ganesh

                 ಕಂಪ್ಲಿ  28: ಅಕ್ಷರಾಭ್ಯಾಸದಿಂದ ಮಕ್ಕಳಲ್ಲಿ ಜ್ಞಾರ್ನಾನೆ ವೃದ್ಧಿಸುವ ಮೂಲಕ ಉತ್ತಮ ಪ್ರಜೆಯಾಗಿ ಹೊರ ಹೊಮ್ಮಲು ಸಾಧ್ಯ ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.  ತಾಲೂಕಿನ ಎಮ್ಮಿಗನೂರು ಗ್ರಾಮದ ಜಡೆಶಿದ್ದ ಶಿವಯೋಗಿಗಳ ಮಠದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಶಾರದದೇವಿ ಪೂಜೆ ಹಾಗೂ ಅಕ್ಷರಾಭ್ಯಾಸ ಮತ್ತು ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿ ಮಾತನಾಡಿ, ಪೂಜೆ, ಪುನಸ್ಕಾರದ ಜೊತೆಗೆ ಶಿಕ್ಷಣ ಇದ್ದರೆ, ಮನುಷ್ಯನ ಬದುಕು ಉಜ್ವಲವಾಗಿರುತ್ತದೆ ಎಂದರು. ಶಾಸಕ ಜೆ.ಎನ್‌.ಗಣೇಶ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಜಾಗೃತಿವಹಿಸಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಶಿಕ್ಷಣದ ಆಸ್ತಿಯನ್ನಾಗಿ ಮಾಡಬೇಕು. ಮತ್ತು ಶಿಕ್ಷಣದ ಜೊತೆಗೆ ನಾಡಿನ ಸಂಸ್ಕೃತಿ, ಸಂಸ್ಕಾರ ಬೆಳೆಸಿದರೆ,

              ಜೀವನ ಉತ್ತಮವಾಗಿರುತ್ತದೆ. ಮನುಷ್ಯನ ಜೀವನುದ್ದಕ್ಕೂ ಆಧ್ಯಾತ್ಮಕ ಚಿಂತನೆ ಜೊತೆಗೆ ಶಿಕ್ಷಣವೂ ಅಗತ್ಯವಾಗಿದೆ. ಇದರಿಂದ ಬದುಕು ಸುಂದರವಾಗಿರಲು ಸಾಧ್ಯ. ಧರ್ಮಸ್ಥಳ ಸಂಘವೂ ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಹೆಚ್‌.ವೀರಾಪುರದ ಜ್ಞಾನ ಜ್ಯೋತಿ ಜಡೇಶ ಶಿವಲಿಂಗ ಮಂದಿರದ ಶ್ರೀ ಜಡೇಶ್ ತಾತ ದಿವ್ಯಸಾನಿಧ್ಯವಹಿಸಿದ್ದರು. ಶಾರಾದದೇವಿ ಪೂಜೆ ಅಧ್ಯಕ್ಷ ಕನಕಪ್ಪ ಸುಣಗಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಿರಣ ರಾಮಜೀ ಇವರು ಆಶಯ ನುಡಿಗಳನ್ನು ನುಡಿದರು. ವೇದಿಕೆ ಕಾರ್ಯಕ್ರಮ ಮುಂಚಿತವಾಗಿ ಶಾರದಾದೇವಿ ಪೂಜೆ, ಅಕ್ಷರಭ್ಯಾಸ ಸೇರಿದಂತೆ ನಾನಾ ಪೂಜಾ ಕಾರ್ಯಕ್ರಮಗಳು ಶ್ರದ್ಧೆಯಿಂದ ನೆರವೇರಿದವು. ಈ ಸಂದರ್ಭದಲ್ಲಿ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಎಲ್, ಗ್ರಾಪಂ ಅಧ್ಯಕ್ಷರಾದ ಹೆಚ್‌.ಜೆ.ಶಾರದಾ ಜಡಿಮೂರ್ತಿ, ಜಯಮ್ಮ ರಾಮಾಂಜನೇಯಲು, ಮುಖಂಡರಾದ ಕೆ.ಶ್ರೀನಿವಾಸರಾವ್, ಎಂ.ಸುದೀರ್, ಬಿ.ಸದಾಶಿವಪ್ಪ, ಗಾದ್ಲಿ ನಾಗರೆಡ್ಡಿ, ಯಮನೂರ​‍್ಪ ಬಳ್ಳಾರಿ, ಕೆ.ಈರಣ್ಣ, ಎ.ಬಸಪ್ಪ, ಸಣ್ಣ ಜಡೆಪ್ಪ, ಮದಿಯಪ್ಪ, ಶರಣ ಬಸವಗೌಡ, ಧರ್ಮಸ್ಥಳ ಸಂಘದ ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಖಾ, ಕೃಷಿ ಅಧಿಕಾರಿ ಎಸ್‌.ಡಿ.ಸಂಜೀವಕುಮಾರ, ಮೇಲ್ವಾಚರಕರಾದ ಮಂಜಣ್ಣ, ಶ್ರೀಶೈಲಾ, ಮಂಜುಳಾ, ಚೇತನ್ ಸೇರಿದಂತೆ ಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.