ಎಸ್ಟಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ : ಶಾಸಕ ಜಾರಕಿಹೋಳಿ


ಬೆಳಗಾವಿ : ಖಾನಾಪುರ, ಹುಕ್ಕೇರಿ ಹಾಗೂ ಬೆಳಗಾವಿ ತಾಲೂಕುಗಳಲ್ಲಿ 2005 ರ ಮುಂಚೆಯಿಂದ ಅರಣ್ಯ ಇಲಾಖೆಗೆ ಸೇರಿದ ಜಾಗೆಯಲ್ಲಿ  ಜಮೀನು ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೀಘ್ರ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೋಳ್ಳುವಂತೆ ಶಾಸಕ ಸತೀಶ ಜಾರಕಿಹೋಳಿ ಅರಣ್ಯ ಅಧಿಕಾರಿಗಳಿಗೆ ತಿಳಸಿದರು. 

ನಗರದ ಅರಣ್ಯ ಇಲಾಖೆ ಕಛೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹಕ್ಕೇರಿ  ಖಾನಾಪುರ ಹಾಗೂ ಬೆಳಗಾವಿ ತಾಲೂಕಾ ವ್ಯಾಪ್ತಿ ಬರುವ ಪಿಡಿಓ ಹಾಗೂ ತಲಾಟಿಗಳಿಗೆ ಖುದ್ದಾಗಿ ಬೇಟಿ ನೀಡಿಫಲಾನುಭವಿಗಳನ್ನು ಪರಿಶೀಲಿಸಿ ಗ್ರಾಮ ಪಂಚಾಯತಿಲ್ಲಿ ಆ . 15 ರಂದು ಸಭೆ ನಡೆಸಿ ವರದಿ ವರದಿ ಸಲ್ಲಿಸುವಂತೆ  ಸೂಚಿಸಿದರು. 

ದಂಡ ಪಾವತಿ ಇಲ್ಲದಕ್ಕೆ ಕೆಲವು ಅಧಿಕಾರಿಗಳು ಅಜರ್ಿಯನ್ನು ತಿರಸ್ಕರಿಸುತ್ತದ್ದಾರೆ. ಅಲ್ಲದೇ ಹುಕೇರಿ  ವ್ಯಾಪ್ತಿಯಲ್ಲಿ ಕೆಲವು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ್ದರು ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಹಸ್ತಾಂತರಿಸದೆ ಮೀನಾಮೇಷ ಎನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. 

ಹಕ್ಕು ಪತ್ರ ವಿತರಿಸಿದ ಫಲಾನುಭವಿಗಳಿಗೆ ಜಮೀನು ಹಸ್ತಾಂತರ ಮಾಡುವದಕ್ಕೆ ವಿಳಂಬ ಮಾಡುತ್ತಿರುವ ಅರಣ್ಯ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡು ಶೀಘ್ರ ಬಗೆಹರಿಸುಂತೆ ಹೇಳಿದರು. 

ಅಧಿಕಾರಿಗಳು ದಂಡ ಪಾವತಿ ಇಲ್ಲದಕ್ಕೆ ಫಲಾನುಭವಿಗಳ ಅಜರ್ಿಯನ್ನು ತಿರಸ್ಕರಿಸಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆ  ಕಾಯ್ದೆ ಪ್ರಕಾರ ಫಲಾನುಭವಿಗಳು 13 ಸಾಕ್ಷ್ಯಗಳಲ್ಲಿ 3 ರಿಂದ 4 ಸಾಕ್ಷ್ಯಗಳನ್ನು ಒದಗಿಸಿದರೆ ಸಾಕು ಅಂತಹ ಅಜರ್ಿಗಳನ್ನು ತಿರಸ್ಕರಿಸದಂತೆ ಸೂಚಿಸಿದರು.

ಫಲಾನುಭವಿಗಳು ಹಲವು ವರ್ಷಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಸಾಕ್ಷಿಗಳಿರುತ್ತವೆ. ಬಾವಿ ತೆಂಗು ಮರ , ಮಾವಿನ ಮರ , ಒಡ್ಡುಗಳನ್ನು ನಿಮರ್ಿಸಿದ್ದಾರೆ. ಹಿರಿಯರ ಹೇಳಿಕೆಯನ್ನು ಪರಿಗಣಿಸಿ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

40 ರಿಂದ 50 ವರ್ಷ ದಿಂದ  ಅರಣ್ಯ ಇಲಾಖೆ ವ್ಯಾಪ್ತಯಲ್ಲಿ ಮನೆ ನಿಮರ್ಿಸಿದ ಫಲಾನುಭವಿಗಳಿಗೂ ಸಕ್ರಮಗೊಳಿಸಿ ಹಕ್ಕು ಪತ್ರ ನೀಡುವಂತೆ ಅಧಿಕಾರಿಗಲಿಗೆ ಹೇಳಿದರು.

ಸಭೆಯಲ್ಲಿ ಆಎಫ್ ಒ ಅಮರನಾಥೆಡಿ ಶಾಲಿನಿಗೌಡ, ಆರ್ ಎಫ್ ಒ ಸಹಾಯಕ ನಿದರ್ೇಶಕ ಕೋಳಿವಾಡ, ಹುಕ್ಕೇರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ. ಆರ್ ನಾಗನೂರ, ಮಹಾಂತೇಶ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಖಾನಾಪುರ, ಹುಕ್ಕೇರಿ, ಬೆಳಗಾವಿ ತಾಲೂಕಿನ ಪಿಡಿಒ ಮತ್ತು ತಲಾಟಿಗಳು ಬಾಗಿಯಾಗಿದ್ದರು.