ಗ್ಯಾರಂಟಿ ಮರು ಪರಿಷ್ಕರಣೆಯಿಂದ 200 ಯುನಿಟ್ ಉಚಿತ ವಿದ್ಯುತ್ ನೀಡಿ: ಕೆಂಗನಾಳ ಆಗ್ರಹ
Give 200 units of free electricity through guarantee revision: Kenganal demands
ವಿಜಯಪುರ 24 : ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಿದ ನಂತರ ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೆ ಮಾಡುವಲ್ಲಿ ಮಿನಾಮೇಷ ಎಣಿಸಿದ್ದಲ್ಲದೇ ಸದ್ಯ ಗ್ಯಾರಂಟಿಗಳನ್ನು ಮರುಪರೀಶೀಲನೆಗೆ ಮುಂದಾಗಿರುವುದು ಕಾಂಗ್ರೆಸ್ ಘೋಷಿಸಿದ್ದ ಪ್ರಣಾಳಿಕೆಯ ಮೇಲಿನ ಜನರು ನಂಬಿಕೆ ಕಳೆದುಕೊಂಡಿರುವುದು ಗ್ಯಾರಂಟಿಯಾಗಿದೆ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಲೇವಡಿ ಮಾಡಿದ್ದಾರೆ.ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, 2023ರಲ್ಲಿ ಕಾಂಗ್ರೆಸ್ ಸರ್ಕಾರ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿ ಜಾರಿಗೆ ತರುವಾಗ ಗ್ರಾಹಕರು ಕಳೆದ ವರ್ಷ ಬಳಸಿದ ಸರಾಸರಿ ಆಧಾರದ ಮೇಲೆ ಯುನಿಟ್ ನಿಗದಿ ಮಾಡಿ ಅದಕ್ಕೆ ಶೇ.10 ರಷ್ಟು ಹೆಚ್ಚುವರಿ ಯುನಿಟ್ ನೀಡುತ್ತೇನೆಂದು ಅದರಂತೆ ಮಾತ್ರ ಉಚಿತ ವಿದ್ಯುತ್ ನೀಡುತ್ತಿದೆ. ಘೋಷಣೆಯಂತೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಿ ಇಲ್ಲವೇ ವಾರ್ಷಿಕ ಆಧಾರದ ಮೇಲೆ ನೀಡಿದ ಶೇ.10 ರಷ್ಟು ಹೆಚ್ಚಿನ ಯುನಿಟ್ನ್ನು ಪ್ರತಿವರ್ಷವೂ ಹೆಚ್ಚಿಸಿ. 200 ಯುನಿಟ್ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡದೇ ಪೂರ್ಣಪ್ರಮಾಣದ ಹಣ ಕಟ್ಟಿಸಿಕೊಳ್ಳುತ್ತಿರುವುದು 200 ಯುನಿಟ್ ಉಚಿತ್ ವಿದ್ಯುತ್ ಗ್ಯಾರಂಟಿ ಘೋಷಣೆಗೆ ಏನೂ ಅರ್ಥ ಎಂದು ಕಿಡಿಕಾರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 