ಸಾಮಾಜಿಕ ಪಿಡುಗುಗಳ ವಿರುದ್ಧ ಗರ್ಲ್ ಐಕಾನ್ ಪೌಂಡೇಶನ್ ಕೆಲಸ ಮಾಡುತ್ತಿದೆ: ಪೂಜಾ ಗಡಗಿ
Girl Icon Foundation is working against social evils: Pooja Gadgi
ಗದಗ:25: ರಾಜ್ಯದ 12 ಜಿಲ್ಲೆಗಳಲ್ಲಿ ನಮ್ಮ ಗರ್ಲ್ ಐಕಾನ್ ಪೌಂಡೇಶನ್ ಕೆಲಸ ಮಾಡುತ್ತಿದ್ದು, ಹುಬ್ಬಳ್ಳಿಯಲ್ಲಿ ಮುಖ್ಯ ಕಛೇರಿ ಇದೆ. ಸಾಮಾಜಿಕ ಪಿಡುಗುಗಳ ವಿರುದ್ಧ ನಮ್ಮ ಸಂಸ್ಥೆಯ ಕೆಲಸ. ಪ್ರತಿ ಹಳ್ಳಿಗಳಲ್ಲಿ ಈ ಕಾರ್ಯಕ್ರಮದ ಯೋಜನೆ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಶಿಕ್ಷಣದಿಂದ ವಂಚಿತರಾದ ಹಾಗೂ ಶಿಕ್ಷಣ ಅಪೂರ್ಣ ಗೊಳಿಸಿದ ಯುವತಿಯರು ಬಾಲ್ಯ ವಿವಾಹ ಆಗಲು ಮುಖ್ಯ ಕಾರಣ ಅಂತ ಮಿಲಾನ ಪ್ರೊಗ್ರಾಂ ಕೋಆರ್ಡಿನೇಟರ್ ಪೂಜಾ ಗಡಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಿಲಾನ್ ಸಂಸ್ಥೆಯು ಕಳೆದ 7 ವರ್ಷಗಳಿಂದ 14 ರಿಂದ 18 ರ ವಯೋಮಿತಿಯ ಹುಡುಗಿಯರನ್ನು ಆಯ್ಕೆ ಮಾಡಿ ಅವರಿಗೆ ನಾಯಕತ್ವದ ತರಬೇತಿಯನ್ನು ನೀಡುತ್ತಿದೆ. ಹೀಗೆ ಆಯ್ಕೆಯಾದ ಬಾಲಕಿಯರನ್ನು ’ಗರ್ಲ್ ಐಕಾನ್’ ಎಂದು ಗುರುತಿಸಲಾಗುತ್ತದೆ.
ಈ ’ಗರ್ಲ್ ಐಕಾನ್’ಗಳ ಮೂಲಕ ಅವರದ್ದೇ ಸಮುದಾಯದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಅವರಿಂದಲೇ ಪರಿಹಾರಗಳನ್ನು ಕಂಡುಕೊಳ್ಳಲು ’ಮಿಲಾನ್ ಸಂಸ್ಥೆ’ ಶ್ರಮಿಸುತ್ತಿದೆ. ಪುತಿಯೊಬ್ಬ ’ಗರ್ಲ್ ಐಕಾನ್’ 20 ಜನ ಸಮಾನ ವಯಸ್ಕ ಬಾಲಕಿಯರ ಗುಂಪನ್ನು ಕಟ್ಟಿಕೊಂಡು ಸಮುದಾಯದಲ್ಲಿ ತೊಡಗಿಸಿಕೊಂಡು ತಾವು ಪಡೆದ ತರಬೇತಿಯನ್ನು ಇತರರಿಗೂ ತಲುಪಿಸುತ್ತಾರೆ. ಈ ಗುಂಪುಗಳ ಮೂಲ ಉದ್ದೇಶವು ಸಮಾಜದಲ್ಲಿ ಕಂಡು ಬರುವಂತಹ ಸಾಮಾಜಿಕ ಪಿಡುಗು ಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಜಾತಿಭೇದ, ವರದಕ್ಷಿಣೆ, ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದಾಗಿದೆ. ಕರ್ನಾಟಕದಲ್ಲಿ ’ಮಿಲಾನ್ ಸಂಸ್ಥೆ’ಯು ಪ್ರಸ್ತುತ ಸುಮಾರು 1500 ಕ್ಕೂ ಹೆಚ್ಚು ಬಾಲಕಿಯರನ್ನು ’ಗರ್ಲ್ ಐಕಾನ್’ ಮತ್ತು ’ಗರ್ಲ್ ಐಕಾನ್ ಸ್ವಯಂ ಸೇವಕ’ರನ್ನು ಹೊಂದಿದೆ.
ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ’ಮಿಲಾನ್ ಸಂಸ್ಥೆ’ಯ ಉದ್ದೇಶಗಳನ್ನು ಇನ್ನಿತರ ಬಾಲಕಿಯರು ಹಾಗೂ ಪೋಷಕರು ಅರ್ಥ ಮಾಡಿಕೊಂಡು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಹಾಯಕ ಪ್ರೊಗ್ರಾಂ ಕೋಆರ್ಡಿನೇಟರ್ ರೂಪಾ ಮರಿಗೌಡ್ರ, ಎಂಇಎಲ್ ಕೋಆರ್ಡಿನೇಟರ್ ಸಿಮ್ರಿನ್ ಉದಗಟ್ಟಿ, ಪ್ರೊಜೆಕ್ಟ್ ಅಸಿಸ್ಟಂಟ್ ಪಾರ್ವತಿ ಬೆಳಗಲ, ಗರ್ಲ್ಸ ಐಕಾನ್ ಸಂಜನಾ ಭಜಂತ್ರಿ ಸೇರಿದಂತೆ ಇತರರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 