ಕುಡಿತದಿಂದ ಹೊರಬಂದು ನವಜೀವನ ಸಾಗಿಸಿ: ನ್ಯಾ. ದಾನೇಶ ಅವಟಿ
Get rid of alcoholism and lead a new life: Justice Danesh Avati
ವಿಜಯಪುರ 21: ಸಾಮಾಜಿಕ ಪಿಡುಗಾದ ಕುಡಿತದ ವ್ಯಸನದಿಂದ ವೆಸನಾದೀನರು ವ್ಯಸನದಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಆಶ್ರಮ ಹತ್ತಿರ. ಕಾಳಿಕಾ ನಗರದ ಶ್ರೀ ಮೌನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ. 1953 ನೇ ಮದ್ಯವರ್ಜನ ಶಿಬಿರದ ಪ್ರಮುಖ ಉಪನ್ಯಾಸಕರಾಗಿ ಮಾತನಾಡಿದ ಅವರು. ಸಪ್ತವ್ಯೆಸನಗಳಲ್ಲಿ ಒಂದಾದ ಮದ್ಯಪಾನವು ಮಾನವ ಕುಲಕ್ಕೆ ಅಂಟಿದ ಬಹುದೊಡ್ಡ ಮಹಾಶಾಪ. ಮದ್ಯಪಾನದಿಂದ ವ್ಯಸನಕ್ಕೀಡಾದ ವ್ಯಕ್ತಿಯ ಆರೋಗ್ಯ ಕುಟುಂಬ ಆರ್ಥಿಕ ಸಾಮಾಜಿಕ ಜೀವನದಲ್ಲಿ ವ್ಯತ್ಯಾಸವಾಗುವದಲ್ಲದೆ ಸಮಾಜ ಆತನನ್ನು ಆತನ ಕುಟುಂಬವನ್ನು ಕೀಳು ದೃಷ್ಟಿಯಿಂದ ನೋಡುತ್ತದೆ. ಮೋಜಿಗಾಗಿ, ಹವ್ಯಾಸಕ್ಕಾಗಿ, ನೋವು ಮರೆಯಲು, ಸಂತೋಷಕ್ಕಾಗಿ, ಮಾನಸಿಕ ನೆಮ್ಮದಿಗಾಗಿ ಕುಡಿಯುತ್ತೇವೆ ಎಂಬ ಕುಂಟು ನೆಪಗಳನ್ನು ಮುಂದು ಮಾಡಿ ಕುಡಿಯುವ ಜನರು ಕೂಡಲೇ ಎಚ್ಚೆತ್ತುಕೊಂಡು ಕುಡಿತದ ವಿಷವರ್ತುಲದಿಂದ ಹೊರಬರಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಅಸಂಘಟಿತ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಸ್ಥೆಯ ರಾಜ್ಯಾದ್ಯಕ್ಷ ಪ್ರಕಾಶ ರಜಪೂತ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಕುಡಿತವೆಂಬುದು ಫ್ಯಾಶನ ಆಗಿದ್ದು. ಕುಡಿಯಲಾರದ ಮತ್ತು ಯಾವುದೇ ವ್ಯೆಸನಗಳನ್ನು ಮಾಡದ ವ್ಯಕ್ತಿಯನ್ನು ಕೆಲವು ಜನರು ನೋಡುವ ದೃಷ್ಟಿಕೋನವೇ ಬದಲಾಗಿದೆ. ಒಂದು ಕಾಲದಲ್ಲಿ ಮದ್ಯಪಾನ, ಕುಡಿತ, ಅಪರಾದ, ಅಪಚಾರ ಎಂಬ ಭಾವನೆ ಹೋಗಿ ಇಂದು ಯಾವುದೇ ಒಂದು ಕಾರ್ಯಕ್ರಮ ಕುಡಿತದಿಂದ ಪ್ರಾರಂಭವಾಗಿ ಕುಡಿತದಿಂದಲೆ ಕೊನೆಗೊಳ್ಳುತ್ತವೆ. ಸರ್ಕಾರ ಕೂಡ ತನ್ನ ಬೊಕ್ಕಸವನ್ನು ತುಂಬಿಸುವ ಈ ಮದ್ಯಪಾನವನ್ನು ಸಾರ್ವಜನಿಕರ ಬದುಕು ಮೂರಾಬಟ್ಟೆಯಾಗುತ್ತಿದ್ದರು. ಮದ್ಯಪಾನ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಳ್ಳುತ್ತಿಲ್ಲ.ಈ ಸಂದರ್ಭದಲ್ಲಿ ಸಮೂಹ ಮಾದ್ಯಮಗಳು, ಸಂಘ ಸಂಸ್ಥೆಗಳು, ಸಮಾಜಸೇವಕರ ಪಾತ್ರ ಹಿರಿದಾಗಿದ್ದು ಶ್ರೀ ಧರ್ಮಸ್ಥಳ ಗ್ರಾಮಾಭಿವದ್ಧಿ ಟ್ರಸ್ಟ್ ಮದ್ಯವರ್ಜನ ಶಿಬಿರಗಳನ್ನು ಏರಿ್ಡಸಿ ಲಕ್ಷಾಂತರ ಕುಟುಂಬಗಳ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ನಿವೃತ್ತ ಅಧಿಕಾರಿಗಳು ಕಾಳಿಕಾ ನಗರದ ಹಿರಿಯ ಸಮಾಜ ಸೇವಕರಾದ ಬಿ.ಸಿ.ಸಾರವಾಡ, ಶಿಬಿರದ ಸಂಘಟಕ ದಿನೇಶ ಮರಾಠಿ ಬೆಳ್ತಂಗಡಿ, ಸಾಂದರ್ಭಿಕವಾಗಿ ಮಾತನಾಡಿದರು. ಗಣ್ಯ ಉದ್ಯಮಿ ಶಿವಾನಂದ.ಜಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಗಂಗಾ ದೊಡ್ದುರು, ದೀಪಿಕಾ ಪ್ರಾರ್ಥಿಸಿದರು. ಕಲ್ಲಪ್ಪ ಕದಂ ನಿರೂಪಿಸಿದರು. ಸಿ.ಜಿ.ಮಹೇಶ ವಂದಿಸಿದರು. ಮದ್ಯವರ್ಜನ ಸಂಕಲ್ಪಗೀತೆ, ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 