ಸಾರ್ವತ್ರಿಕ ಮುಷ್ಕರ: ಇಂಡಿಯಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆಲೋಕದರ್ಶನ ವರದಿ
General strike: Massive protest blocking road in Indi
ಇಂಡಿ 09: ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಬಿಸಿ ಊಟ ನೌಕರರ ಸಂಘ ಹಾಗೂ ಸಿಐಟಿಯು ಸಂಯೋಜಿತ ಇಂಡಿ ಮತ್ತು ಚಡಚಣ ತಾಲೂಕು ಸಮಿತಿ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ಇಂಡಿ ನಗರದ ಮಾಹಾವೀರ ವೃತ್ತ ಅಂಬೇಡ್ಕರ್ ವೃತ್ತ ಮೂಲಕ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿ ಊಟ ನೌಕರರು ಸೇರಿ ಬಸವೇಶ್ವರ ವೃತ್ತದ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಲಾಯಿತು.
ಪ್ರಾಂತ್ಯ ರೈತ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಬಡ ಕೂಲಿ ಕಾರ್ಮಿಕರ ರಕ್ಷಣೆ ಮಾಡುವಲ್ಲಿ ತುಂಬಾ ವಿಫಲವಾಗಿವೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಭಾರತಿ ವಾಲಿ ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ಎಫ್ ಆರ್ ಎಸ್ ಕಡ್ಡಾಯ ಮಾಡಬಾರದು, ಅಂಗನವಾಡಿ ಮತ್ತು ಬಿಸಿ ಊಟ ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರಿಗೂ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಬೇಕು, ನೌಕರನನ್ನು ಖಾಯಂ ಗೊಳಿಸಬೇಕು, ಬಿಸಿ ಊಟ ನೌಕರರಿಗೆ ನಿವೃತ್ತಿ ಪರಿಹಾರ ಕೊಡಬೇಕು, ಗುಜರಾತ್ ಹೈಕೋರ್ಟ್ ತೀರ್ಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಿ ಎಲ್ ಓ ಕೆಲಸದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಚಡಚಣ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಅಶ್ವಿನಿ ತಳವಾರ, ಶೋಭಾ ಕಬಾಡೆ, ಗೋಪಾಲ್ ಶಿವಗದ್ದಗೆ ಮಾಹಾನಂದ ಚವ್ಹಾಣ, ಕಾಳಮ್ಮ ಬಡಿಗೇರ ಸೇರಿದಂತೆ ಅನೇಕರು ಮಾತನಾಡಿದರು. ಈ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಇಂಡಿ ಗ್ರೇಡ್-2 ತಹಶೀಲ್ದಾರ ಧನಪಾಲ್ ಶೆಟ್ಟಿ ದೇವೂರ ಅವರು ಮನಮಿಯನ್ನು ಸ್ವೀಕರಿಸಿದರು.ಗಿರಿಜಾ ಸಕ್ರಿ, ಸುಜಾತಾ ಬಿರಾದಾರ, ಶಾರದಾ ತಾಂಬೆ, ಭಾಗೀರಥಿ ತಳವಾರ, ಪಾರ್ವತಿ ದಾರೆಕಾರ, ಶೇಂಕ್ರಮ್ಮ ಪುಟಾಣಿ, ಕಾಶಿಬಾಯಿ ಸೊಡ್ಡಿ, ಫರಜಾನ ಬೇಗಂ, ಮಾದೇವಿ ಮಠಪತಿ, ಕಲಾವತಿ ಮದರಿ, ಮಾದೇವಿ ಡೊಂಬರ, ರಾಜಶ್ರೀ ಬಿಳಿಜಾಡರ, ಶೋಭಾ ಹೊಟಗಾರ, ಸುನೀತಾ ಡೊಂಬರ, ಸುರೇಖಾ ಡೊಂಬರ ಪದ್ಮಾವತಿ ಬಿರಾದಾರ, ಗೋದಾವರಿ ಪಾಟೀಲ, ಶಿಲಾ ಲಾಳಸಂಗಿ, ನೀಲಮ್ಮ ವಿಜಾಪುರ, ಭವಾನಿ ಕಲ್ಲೂರ, ಸುನಂದಾ ಶಿವೂರ ಸೇರಿದಂತೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಬಿಸಿ ಊಟ ನೌಕರರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 