ಮೊದಲು ಕುಟುಂಬದಲ್ಲಿ ಲಿಂಗ ತಾರತಮ್ಯ ನಿಲ್ಲಬೇಕು: ಪಾಟೀಲ

ಮೊದಲು ಕುಟುಂಬದಲ್ಲಿ ಲಿಂಗ ತಾರತಮ್ಯ ನಿಲ್ಲಬೇಕು: ಪಾಟೀಲ Gender discrimination in the family must stop first: Patil

ಸಿಂದಗಿ 04: ಮೊದಲು ಕುಟುಂಬದಲ್ಲಿ ಲಿಂಗ ತಾರತಮ್ಯ ನಿಲ್ಲಬೇಕು. ಕುಟುಂಬದಿಂದ ನಿವಾರಣೆಯಾದರೆ ಸಮಾಜದಲ್ಲೂ ಲಿಂಗ ತಾರತಮ್ಯ ಕಡಿಮೆಯಾಗಲಿದೆ ಎಂದು ಅಜೀಮ ಪ್ರೇಮಜೀ ಪೌಂಡೇಶನ್ ತಾಲೂಕು ಸಂಯೋಜಕ ಲಕ್ಷ್ಮಣ ಪಾಟೀಲ ಅಭಿಪ್ರಾಯಪಟ್ಟರು. 

ಪಟ್ಟಣದ ಶ್ರೀಪದ್ಮರಾಜ ಕಾಲೇಜಿನಲ್ಲಿ ಅಜೀಂ ಪ್ರೇಮಜೀ ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಲಿಂಗ ತಾರತಮ್ಯ ಅರಿವು ಕಾರ್ಯಕ್ರಮದಲ್ಲಿ ಅರಿವು ಜಾಗೃತಿ ಮೂಡಿಸಿ ಮಾತನಾಡಿದ ಅವರು, ತಂದೆ-ತಾಯಿಗಳು ಗಂಡು ಮಕ್ಕಳಿಗೆ ತೋರಿದಷ್ಟು ಕಾಳಜಿ ಹೆಣ್ಣು ಮಗುವಿಗೆ ನೀಡುವುದಿಲ್ಲ. ಮಹಿಳೆಯರು ತಮಗೆ ಆದ ಅನ್ಯಾಯವನ್ನು ಸಹಿಸಿಕೊಂಡ ಸುಮ್ಮನೆ ಕುಳಿತುಕೊಳ್ಳಬಾರದು. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ತರ ಕುಟುಂಬದಲ್ಲಿ ಸಮಾಜದಲ್ಲಿ ಸಮಾನ ಗೌರವ ಸ್ಥಾನಮಾನ ಸಿಗಬೇಕಾದರೆ ಹೆಣ್ಣು ಮಕ್ಕಳೂ ಕೂಡ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯಬೇಕು ಹಾಗೂ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದರು. 

ತಿಪ್ಪಣ್ಣ ತಳಗೇರಿ, ಪರಮೇಶ್ವರ ಜಂಬಗಿ ಮಾತನಾಡಿ, ಬದುಕಿನಲ್ಲಿ ಹೆಣ್ಣು-ಗಂಡು ಸಮಾಜದ ಅವಿಭಾಜ್ಯ ಅಂಗ. ಅನೇಕ ಮಹಿಳೆಯರು ಕುಟುಂಬದಲ್ಲಿನ ಪುರುಷರ ಬೆಂಬಲದಿಂದ ಸಾಧನೆ ಮಾಡಿರುವುದನ್ನು ಮರೆಯಬಾರದು. ಮನೆಯಿಂದಲೇ ಪ್ರಾರಂಭವಾಗುವ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸಮಾನತೆ ಬೆಳೆಸಬೇಕು. ಮಹಿಳೆಯರು ಧೃತಿಗೆಡದೆ ಮೌಢ್ಯಗಳಿಂದ ಹೊರಬರಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ಬದುಕು ನಿರ್ವಹಣೆ ಮಾಡಲು ಧೈರ್ಯದಿಂದ ಮುನ್ನುಗುತ್ತಿದ್ದಾರೆ. ಮಹಿಳೆಯರಿಗೆ ಕಾನೂನು ಬೆನ್ನೆಲುವಾಗಿದೆ. ಮಹಿಳೆಯರು ಭಾವನಾತ್ಮಕ, ಋಣಾತ್ಮಕ ಮತ್ತು ಮಾನಸಿಕವಾಗಿ ಎದೆಗುಂದಬಾರದು ಎಂದು ಸಲಹೆ ನೀಡಿದರು. 

ಪ್ರಾಚಾರ್ಯ ಎಸ್‌.ಎಂ.ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಸಿಬ್ಬಂದಿಗಳಾದ ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಅನಿಲಕುಮಾರ ರಜಪೂತ, ಗೀರೀಶ ಕುಲಕರ್ಣಿ, ಜಿ.ವಿ.ಪಾಟೀಲ, ಮುರ್ತುಜಬಿಬೇಗಂ ಬಿರಾದಾರ, ಹೇಮಾ ಹಿರೇಮಠ, ನೀಲಮ್ಮ ಬಿರಾದಾರ, ಭಾಗ್ಯ ಬಬಲೇಶ್ವರ, ಎಸ್‌.ಎಸ್‌.ಕಲಶೆಟ್ಟಿ, ಎಸ್‌.ಸಿ.ದುದ್ದಗಿ, ಮಂಗಳಾ ಈಳಗೇರ, ಡಿ.ಎಮ್‌.ಪಾಟೀಲ್, ಮಮತಾ ಹರನಾಳ, ಶಿವಶಂಕರ ಕುಂಬಾರ, ವಿಜಯಲಕ್ಷ್ಮೀ ಭಜಂತ್ರಿ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಇದ್ದರು. ವಿದ್ಯಾರ್ಥಿ ಭಾಗ್ಯಶ್ರೀ ಅಲ್ಲಾಪೂರ ಪ್ರಾರ್ಥಿಸಿದರು. ಪ್ರೀತಿ ಪಾಟೀಲ ನಿರೂಪಿಸಿ ವಂದಿಸಿದರು.