ಬೆಂಗಳೂರು, ಅ 1: ಬೆಂಗಳೂರು ನಗರದ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಇದರಿಂದ ನಾಲ್ಕು ವರ್ಷಗಳ ನಂತರ ಬಿಜೆಪಿ ಬಿಬಿಎಂಪಿಯ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಗೌತಮ್ ಕುಮಾರ್ 129 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಮತ್ತು ಚುನಾವಣಾಧಿಕಾರಿ ಹರ್ಷಗುಪ್ತ ಘೋಷಿಸಿದರು.
ಚಲಾವಣೆಯಾದ ಒಟ್ಟು 249 ಮತಗಳ ಪೈಕಿ ಗೌತಮ್ ಕುಮಾರ್ ಪರವಾಗಿ 129 ಹಾಗೂ ವಿರುದ್ಧವಾಗಿ 110 ಮತಗಳು ಚಲಾವಣೆಯಾದವು. ಪ್ರತಿಸ್ಪಧರ್ಿ ಕಾಂಗ್ರೆಸ್ ನ ಆರ್.ಎಸ್.ಸತ್ಯನಾರಾಯಣ ಪರವಾಗಿ 112 ಹಾಗೂ ವಿರುದ್ಧವಾಗಿ 129 ಮತಗಳು ಚಲಾವಣೆಯಾದವು. ಬಿಜೆಪಿ ಅಭ್ಯಥರ್ಿ ವಿರುದ್ಧ ಮತ ಚಲಾಯಿಸುವಲ್ಲಿ ಮಿತ್ರ ಪಕ್ಷಗಳ ಇಬ್ಬರು ಸದಸ್ಯರು ತಟಸ್ಥರಾಗಿದ್ದರು. ಜೊತೆಗೆ, ಕಳೆದ ನಾಲ್ಕು ವರ್ಷಗಳಿಂದ ಮೈತ್ರಿಕೂಟದ ಅಭ್ಯಥರ್ಿಯನ್ನು ಬೆಂಬಲಿಸುತ್ತಿದ್ದ ಪಕ್ಷೇತರರು ಈ ಬಾರಿ ಬಿಜೆಪಿ ಕಡೆಗೆ ವಾಲಿದ್ದಾರೆ.
ಇದಕ್ಕೂ ಮುನ್ನ ಲಗ್ಗೆರೆ ವಾಡರ್್ ನ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮತ್ತು ಎಂ.ದೇವದಾಸ್ ಮತದಾನ ಬಹಿಷ್ಕರಿಸಿ ಹೊರನಡೆದರು. ಇವರಿಬ್ಬರೂ ಕಳೆದ ಮೇಯರ್ ಚುನಾವಣೆ ಸಂದರ್ಭದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಮತದಾನದ ಹಕ್ಕು ಪಡೆದಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಭಾ ಸದಸ್ಯರಾದ ಜೈರಾಮ್ ರಮೇಶ್, ಕೆ.ಸಿ.ರಾಮಮೂತರ್ಿ, ಸಂಸದ ಡಿ.ಕೆ.ಸುರೇಶ್, ವಿಧಾನಸಪರಿಷತ್ ಸದಸ್ಯ ರಘು ಆಚಾರ್ , ಜೆಡಿಎಸ್ ಶಾಸಕ ಆರ್. ಮಂಜುನಾಥ್ ಗೈರು ಹಾಜರಾಗಿದ್ದರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿಯ ಸಂಸದರು,ಶಾಸಕರು ಸೇರಿದಂತೆ ಪಾಲಿಕೆ ಸದಸ್ಯರು ಗೌತಮ್ ಗೆ ಅಭಿನಂದನೆ ಸಲ್ಲಿಸಿ, ಸಂಭ್ರಮಿಸಿದರು.
ಸಂಸದ ಪಿ.ಸಿ.ಮೋಹನ್ ಅವರು ಗೌತಮ್ ನನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು. ಮೇಯರ್ ಪರಿಚಯ: ಜೋಗುಪಾಳ್ಯ ವಾಡರ್್ ಸಂಖ್ಯೆ 89ರ ಸದಸ್ಯ ಬಿಜೆಪಿಯ ಗೌತಮ್ ಕುಮಾರ್ ಜೈನ್ ಬಿ.ಕಾಂ ಪದವೀಧರ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದಶರ್ಿಯಾಗಿ, ರಾಜ್ಯ ಯುವ ಮೋಚರ್ಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ.
ಬಿಜೆಪಿ ಬೆಂಗಳೂರು ಕಾರ್ಯದಶರ್ಿಯಾಗಿದ್ದ ಗೌತಮ್ ಜೈನ್, 2013-14ರಲ್ಲಿ ಬಿಬಿಎಂಪಿ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆರ್.ಎಸ್.ಎಸ್. ಹಿನ್ನೆಲೆ ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವರು ಎರಡು ಬಾರಿ ಕಾರ್ಪರೇಟರ್ ಆಗಿ ಆಯ್ಕೆಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬೆಂಗಳೂರು ಅಭಿವೃದ್ಧಿ ನನ್ನ ಆದ್ಯತೆ; ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೌತಮ್, ತಮ್ಮ ಪಕ್ಷ ಬಿಜೆಪಿ ರಾಷ್ಟ್ರ ಮೊದಲು ಎಂಬ ಧ್ಯೇಯದಲ್ಲಿ ನಂಬಿಕೆಯಿಟ್ಟಿದೆ. ಅಭಿವೃದ್ಧಿಯೇ ನಮ್ಮ ಮಂತ್ರ. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಕನಸು ನನಸಾಗಿಸುವತ್ತ ಪ್ರಯತ್ನ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರ ನಾಯಕರ ಸಲಹೆ ಮೇರೆಗೆ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ನಗರದ ಅಗತ್ಯಗಳು, ಹಣಕಾಸು ಸ್ಥಿತಿಗತಿ ಪರಿಶೀಲಿಸಿ ಜನಪರ ಬಜೆಟ್ ಮಂಡಿಸಲಾಗುವುದು ಎಂದರು.