ಸರ್ಕಾರದ ನಿಯಮ ಪಾಲಿಸುವಂತೆ ಜನತೆಗೆ ಗೌತಮ್ ಗಂಭೀರ್ ಮನವಿ

ನವದೆಹಲಿ, ಮಾ 23,ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿವಿಧ ಸರ್ಕಾರಗಳು ಘೋಷಿಸಿದ ಲಾಕ್‌ಡೌನ್ (ಕ್ವಾರಂಟೈನ್) ಮಧ್ಯೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್  ಸೋಮವಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ದೇಶದ ನಾನಾ ಭಾಗಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಲಾಕ್ ಡೌನ್ ಘೋಷಿಸಲಾಗಿದೆ. ಆದಾಗ್ಯೂ ಹಲವರು ಮುಕ್ತವಾಗಿ ಓಡಾಡುವ ಜತೆಗೆ ಅಂಗಡಿ -ಮುಂಗಟ್ಟುಗಳನ್ನು ತೆರೆದು ಸರಕಾರದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.'' ಪ್ರತ್ಯೇಕವಾಸ ಅಥವಾ ಜೈಲಿಗೆ  ನೀವು ಸಹ ಹೋಗಿ ನಿಮ್ಮ ಕುಟುಂಬವನ್ನು ಕರೆದೊಯ್ಯರಿ,  ಇಡೀ ಸಮಾಜಕ್ಕೆ ಆತಂಕವನ್ನುಂಟು ಮಾಡಬೇಡಿ ಮತ್ತು ಮನೆಯಲ್ಲಿಯೇ ಇರಿ! ಈ ಹೋರಾಟವು ಉದ್ಯೋಗಗಳು ಮತ್ತು ವ್ಯವಹಾರದೊಂದಿಗೆ ಅಲ್ಲ, ಆದರೆ ಜೀವನದೊಂದಿಗೆ! ಅಗತ್ಯ ಸೇವೆಗಳನ್ನು ಒದಗಿಸುವವರಿಗೆ ತೊಂದರೆಯಾಗಬಾರದು. ಲಾಕ್‌ಡೌನ್ ಅನುಸರಿಸಿ ! ಜೈ ಹಿಂದ್, '' ಗಂಭೀರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ತೀವ್ರಗೊಳ್ಳುತ್ತಿರುವ ಜತೆಗೆ ಈಗಾಗಲೇ ದೇಶದಲ್ಲಿ 7 ಮಂದಿ ಮೃತಪಟ್ಟಿದ್ದು, 400ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿನಾನಾ ನಗರಗಳನ್ನು ಲಾಕ್ ಡೌನ್ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಇದಲ್ಲದೆ ಕಾನೂನು ನಿಯಮ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಕೇಂದ್ರ ರಾಜ್ಯಗಳಿಗೆ ಸಲಹೆ ನೀಡಿದೆ.