ಗರ್ಭ ಸಂಸ್ಕಾರ: ವಿಶೇಷ ಜಾಗೃತಿ ಕಾರ್ಯಕ್ರಮ
Garbha Sanskar: Special awareness program
ಲೋಕದರ್ಶನ ವರದಿ
ಬೆಳಗಾವಿ 07: ಗರ್ಭಾವಸ್ಥೆಯಲ್ಲಿ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವು ಭವಿಷ್ಯದ ಮಗುವಿನ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಸಾತ್ವಿಕ ಆಹಾರ, ಯೋಗಾಭ್ಯಾಸ, ಧ್ಯಾನ ಹಾಗೂ ಸದಾ ಸಕಾರಾತ್ಮಕ ಚಿಂತನೆಗಳನ್ನು ಪಾಲಿಸಬೇಕೆಂದು ಕೆಎಲ್‌ಇ ಆಸ್ಪತ್ರೆಯ ಪ್ರಸೂತಿ ವಿಭಾಗದ ವೈದ್ಯ ಡಾ. ಅರವಿಂದ ಮಿಣಚೆ ಅವರು ಸಲಹೆ ಹೇಳಿದರು.
ಕೆ ಎಲ್ ಇ ಆಯುರ್ವೇದ ಆಸ್ಪತ್ರೆಯಲ್ಲಿ ಗರ್ಭಿಣಿಯರ ಆರೋಗ್ಯ ಮತ್ತು ಉತ್ತಮ ಸಂತಾನದ ಬೆಳವಣಿಗೆಗೆ ಸಹಕಾರಿ ಆಗುವ ಗರ್ಭ ಸಂಸ್ಕಾರ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ ಕಿರಣ ಮುತ್ನಾಳಿ ಮಾತನಾಡುತ್ತಾ ಗರ್ಭಾವಸ್ಥೆಯ ಆರೈಕೆ, ಪೌಷ್ಟಿಕ ಆಹಾರ, ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಜೀವನ ಶೈಲಿಯ ಮಹತ್ವದ ಬಗ್ಗೆ ಗರ್ಭಿಣಿಯರಿಗೆ ಯೋಗ ಆಸನ, ಸಂಗೀತ ಚಿಕಿತ್ಸೆ ಮತ್ತು ಮಂತ್ರ ಚಿಕಿತ್ಸೆಯನ್ನು ಮತ್ತು ಪ್ರಾಣಾಯಾಮದ ಬಗ್ಗೆ ಹೇಳಿದರು.
ಸ್ರೀರೋಗ ಪ್ರಸೂತಿ ವೈದ್ಯರಾದ ಡಾ.ಅನಘಾ ಮತ್ತು ಡಾ. ಬಾಹುಬಲಿ ಮಹಾಜನ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 