ಸಂವಿಧಾನ ನಮ್ಮನ್ನು ಕಾಪಾಡಿದ ಮಹಾನ್ ಗ್ರಂಥ - ನಾಗರಾಜ್ ಹರಪನಹಳ್ಳಿ

ಕಾರವಾರ ಕಸಾಪ ವತಿಯಿಂದ ಕನ್ನಡ ಭವನದ ಬಳಿ ಗಣರಾಜ್ಯೋತ್ಸವ

ಸಂವಿಧಾನ ನಮ್ಮನ್ನು ಕಾಪಾಡಿದ ಮಹಾನ್ ಗ್ರಂಥ - ನಾಗರಾಜ್ ಹರಪನಹಳ್ಳಿ

ಕಾರವಾರ: ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸೌಂದರ್ಯ ಇರುವುದು ಸಂವಿಧಾನದಲ್ಲಿ. ಅದನ್ನು ಕಟ್ಟಿಕೊಟ್ಟ ಅಂಬೇಡ್ಕರ್ ಗಣರಾಜ್ಯೋತ್ಸವದ ದಿನದಂದು ಸ್ಮರಿಸಬೇಕಾದ ಮಹಾನ್ ಚೇತನ ರಂದು ಕಾರವಾರ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜ್ ಹರಪನಹಳ್ಳಿ ಹೇಳಿದರು.ಕನ್ನಡ ಭವನದ ಬಳಿ ಸಾಹಿತ್ಯ ಪರಿಷತ್ತು ವತಿಯಿಂದ ರಾಷ್ಟ್ರಧ್ವಜಾರೋಹಣ ಮಾಡಿ ಅವರು ಮಾತನಾಡಿದರು‌.ಸಂವಿಧಾನ ಅಂಗೀಕಾರವಾದ ದಿನ. ಹಾಗೂ ಭಾರತ ಗಣರಾಜ್ಯವಾಗಿ ಘೋಷಣೆಯಾದ ದಿನ .ಅನೇಕ ಸುಮುದಾಯ, ವೈವಿಧ್ಯಮಯ ಜನಾಂಗಕ್ಕೆ ಸಮಾನ ಅವಕಾಶ ಕಲ್ಪಿಸಿದ್ದು ಸಂವಿಧಾನ. ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿ ಸಮುದಾಯ ಹಾಗೂ  ಯುವಜನತೆ ಮತ್ತು ದೇಶದ ಪ್ರತಿಯೊಬ್ಬನಿಗೆ ತಿಳಿಸುವ ಕಾರ್ಯ ತಡವಾಗಿಯಾದರೂ ಆಗುತ್ತಿದೆ. ಮಹಿಳೆ ಮತ್ತು ಸರ್ವಧರ್ಮ , ವೈವಿಧ್ಯಮಯ ಸಮುದಾಯ ,ಜನಾಂಗಳಿಗೆ ಸಮಾನ ಅವಕಾಶ ಕಲ್ಪಿಸುವ‌ ಸಂವಿಧಾನ ಪವಿತ್ರ ಗ್ರಂಥವೂ ಹೌದು. ಅಂಬೇಡ್ಕರ್ ತಮ್ಮ ಜ್ಞಾನವನ್ನು ಎರಡು ವರ್ಷಗಳಿಗೂ ಹೆಚ್ಚು ಸಮಯ ನೀಡಿ ಶ್ರದ್ಧೆಯಿಂದ ಸಂವಿಧಾನ ರೂಪಿಸಿದರು. ಅದರ ಫಲವಾಗಿ ಮಹಿಳೆಯರನ್ನು ಉನ್ನತ ಸ್ಥಾನಗಳಲ್ಲಿ ನಾವಿಂದು ಕಾಣುತ್ತಿದ್ದೇವೆ ಎಂದು ಕಸಾಪ ಅಧ್ಯಕ್ಷರು ಹೇಳಿದರು. ಸಂವಿಧಾನದ ಆಶಯಗಳನ್ನು ಕಾಳಜಿಯಿಂದ ರಕ್ಷಿಸಬೇಕಿದೆ. ಸಂವಿಧಾನಕ್ಕೆ ಧಕ್ಕೆಯಾದರೆ ಅದು ಮಾನವ ಹಕ್ಕುಗಳಿಗೆ ಧಕ್ಕೆಯಾದಂತೆ ಎಂದು ಹರಪನಹಳ್ಳಿ ಹೇಳಿದರು. ಮನುಷ್ಯ ಗೌರವ ಘನತೆಯನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದರು. ಗಾಂಧಿ ಭಾರತದ ಒಳ ಚೌಕಟ್ಟು ಸರಿ ಪಡಿಸಿದರೆ, ಅಂಬೇಡ್ಕರ್ ಈ ದೇಶವನ್ನು ಹೊರ ಚೌಕಟ್ಟುನ್ನು ರೂಪಿಸಿದರು . ಇಲ್ಲಿನ ಲೋಪದೋಷ‌ ತಿದ್ದಿದರು. ಹಾಗಾಗಿ ಅಂಬೇಡ್ಕರ್ ಬೆಳಕು ‌ನೀಡಿದ ಸೂರ್ಯ ಎಂದು ನಾಗರಾಜ್ ಹರಪನಹಳ್ಳಿ ಅಭಿಪ್ರಾಯಪಟ್ಟರು. ಕನ್ನಡ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ  ಕಸಾಪ ಅಜೀವ ಸದಸ್ಯರಾದ ನಜೀರ್ ಅಹಮ್ಮದ್ ಯು ಶೇಖ್,‌ಎಂ.ಖಲೀಲುಲ್ಲಾ, ಕಾರ್ಯದರ್ಶಿ ಗಜಾ ಸುರಂಗೇಕರ್,  ಹಿರಿಯ ವರದಿಗಾರ, ಕಡಲವಾಣಿ ಸಂಪಾದಕರಾದ  ದೀಪಕ್  ಕುಮಾರ್ ಶೆಣ್ವಿ,  ಗಿರೀಶ್ ನಾಯ್ಕ ಬಾಡ, ಅರವಿಂದ ನಾಯಕ, ಪ್ರೊ. ಎಸ್.ಡಿ. ನಾಯ್ಕ, ಶಂಕರ ಚಾಪೋಲಿಕರ್, ರಂಗಭೂಮಿ ಕಲಾವಿದ ಮಾರುತಿ ಬಾಡಕರ್ ಹಾಗೂ ಇತರರು ಉಪಸ್ಥಿತರಿದ್ದರು.‌