ಗಂಗಾವತಿ ಪ್ರಾಣೇಶ ತಂಡವದವರ ಹಾಸ್ಯ ಸಂಜೆಯಲ್ಲಿ ಮುಳುಗಿದ ಜನತೆ

Gangavati Pranesh Thanadava's comedy evening engrossed the crowd

ಗಂಗಾವತಿ ಪ್ರಾಣೇಶ ತಂಡವದವರ ಹಾಸ್ಯ ಸಂಜೆಯಲ್ಲಿ  ಮುಳುಗಿದ ಜನತೆ   

ಗದಗ 09: ಮೋಬೈಲ್, ಟಿವಿ ಬಂದನಂತರ  ಎಲ್ಲರೂ ನಗುವದನ್ನು ಕಡಿಮೆ ಮಾಡಿದ್ದಾರೆ. ನಗುವದರಿಂದ ದೇಹವು ಸದೃಢ ವಾಗಿರುತ್ತದೆ  ಅವಕಾಶ ಸಿಕ್ಕಾಗಲೆಲ್ಲ ನಗುವನ್ನು ಅಸ್ವಾಧಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ  ಫಕ್ಕೀರ​‍್ಪ ಹೆಬಸೂರ ಅವರು ಹೇಳಿದರು. 

ನಗರದ ಬಯಲು ಅಂಜನೇಯ ದೇವಸ್ಥಾನದ ಆವರಣದಲ್ಲಿ ರಾಕೇಶ ಸಿದ್ದರಾಮಯ್ಯ ಟ್ರಸ್ಟ್‌ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ  ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕುರುಬರ ಸಮಾಜದ   ಜೋಡೆತ್ತುಗಳಾದ  ಕನಕಭವನ ಹಾಗೂ  ಡಿ. ದೇವರಾಜ ಅರಸು ವಸತಿ ನಿಲಯ ಕಳೆದ 15 ವರ್ಷಗಳಿಂದ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮತ್ತು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 2001 ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ  ಸ್ಪೂರ್ತಿಯಾಗಿ ನಿಂತವರು  ಮುಖ್ಯಮಂತ್ರಿ  ಸಿದ್ದರಾಮಯ್ಯನವರು.  

ಈ ಸಂಸ್ಥೆ ವತಿಯಿಂದ ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗಾಗಿ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ ವೃತ್ತಿಪರ ವಸತಿ ನಿಲಯಗಳನ್ನು ಮುನ್ನಡೆಸುತ್ತಾ ಬಂದಿದೆ. ಕೌಶಲ್ಯ ತರಬೇತಿ ಕೇಂದ್ರವನ್ನು ಮುನ್ನಡೆಸಿ ಸುಮಾರು 500 ಕ್ಕು ಹೆಚ್ಚು ನಿರುದ್ಯೋಗ ಯುವಕ-ಯುವತಿಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಲಾಗಿದೆ.  ಈ ಸಂಸ್ಥೆ ವತಿಯಿಂದ ಪೂರ್ವ ಪ್ರಾಥಮಿಕ, ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಹಾಗೂ ಐಟಿಐ ಕಾಲೇಜು ಕಳೆದ 6 ವರ್ಷಗಳಿಂದ ನಡೆಸಲಾಗುತ್ತಿದೆ.  

 ನೂತನವಾಗಿ 100 ಸಂಖ್ಯಾಬಲದ ವಿಧ್ಯಾರ್ಥಿನಿಯರ ವಸತಿ ನಿಲಯ ಪ್ರಾರಂಭಿಸಲಾಗಿದೆ. ಈ ಸಂಸ್ಥೆಯ ಏಳ್ಗೆಗಾಗಿ  ಶಶಿಧರ ರೊಳ್ಳಿ, ನಿಂಬನಾಯ್ಕರ, ಭಾವಿಕಟ್ಟಿ,  ಶಿಂಗಟಾಲಕೇರಿ,  ಬಾನಾಪೂರ,  ಜಡದೇಲಿ ಹಾಗೂ  ಸ್ಥಳೀಯರಾದ  ಮ್ಯಾಗೇರಿ,  ಆದಪ್ಪಗೌಡರ, ಅಕ್ಕಿ ಸೇರಿದಂತೆ  ಮುಂತಾದವರು ಸಹಕರಿಸಿದ್ದಾರೆ ಎಂದು ಹೇಳಿದರು.ಡಿಡಿಪಿಐ ಅರ್‌.ಎಸ್‌.ಬುರಡಿ  ಅವರು ಮಾತನಾಡಿ, ಗಂಗಾವತಿ ಪ್ರಾಣೇಶ ತಂಡದ ಹಾಸ್ಯ ಸಂಜೆ ಎಂದರೆ ಅದು ಹಾಸ್ಯದ ಹಬ್ಬವಾಗಿರುತ್ತದೆ. ಅವರ ಭಾಷಣದ ವಸ್ತುಗಳನ್ನು ಮಕ್ಕಳಿಗೆ ಪ್ರೇರಣಾತ್ಮಾಕವಾಗಿ ಹೇಳಲಾಗುತ್ತದೆ ಇದರಿಂದ ಸಾಕಷ್ಟು ಮಕ್ಕಳು ಉತ್ತೇಜನಗೊಂಡಿದ್ದಾರೆ ಎಂದು ಹೇಳಿದರು.   


ಉದ್ಯಮಿ ಪ್ರಕಾಶ ಕರಿ  ಅವರು ಮಾತನಾಡಿ, ಕುರುಬರ ಸಂಘದ ಅಡಿಯಲ್ಲಿ  ರಾಕೇಶ್ ಸಿದ್ದರಾಮಯ್ಯ ಟ್ರಸ್ಟ ವತಿಯಿಂದ  ಸಾಕಷ್ಟು   ಉತ್ತಮ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಇಂದಿನ ದಿನಗಳಲ್ಲಿ ಎಲ್ಲರಲ್ಲಿ ನಗು ಮರೆಯಾಗುತ್ತಿದೆ ಒತ್ತಡದ ಬದುಕಿನಿಂದ ದೂರಾಗಿ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಸವಿಯಬೇಕು ಎಂದು  ಹೇಳಿದರು.  


 ಈ ಸಂದರ್ಭದಲ್ಲಿ ಶಶಿಧರ ರೊಳ್ಳಿ, ಎಸ್‌.ಕೆ.ಮ್ಯಾಗೇರಿ, ಬೆಟಗೇರಿ ಪಿಎಸ್‌ಐ ಲಕ್ಷ್ಮಣ ಅರಿ, ರೋಣ ಪಿಎಸ್‌ಐ ಪ್ರಕಾಶ ಬಣಕಾರ, ಟ್ರಾಪೀಕ್ ಪಿಎಸ್‌ಐ ಶಕುಂತಲಾ ನಾಯಕ,  ನಿವೃತ್ತ ಮುಖ್ಯ ಗುರುಗಳಾದ ಬಿ.ಎಚ್‌.ಹ್ಯಾಟಿ,  ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಬಿ.ಬಾವಿಕಟ್ಟಿ, ಬಸವರಾಜ ಮಲ್ಲೂರ,  ಗುತ್ತಿಗೆದಾರರಾದ ನಾಗರಾಜ ಮಾಗಡಿ, ಎಸ್‌.ಕೆ.ಮಾಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  

ನಂತರ  ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ,  ಬಸವರಾಜ ಮಹಾಮನಿ ಅವರಿಂದ  ಹಾಸ್ಯ ಸಂಜೆ ಜರುಗಿತು. ವೈ.ಬಿ.ಬಾಣಾಪೂರ ಅವರು ಸ್ವಾಗತಿಸಿದರು. ವೈ.ಬಿ.ಜಡದೆಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋ.ಬಸವರಾಜ ಲದ್ದಿ ನಿರೂಪಿಸಿದರು. ಪ್ರಾಚಾರ್ಯ ರಮೇಶ ವಡವಿ ವಂದಿಸಿದರು.