ನ. 7 ರಂದು ಗಂಗಾವತಿ ಪ್ರಾಣೇಶ ನಗೆ ಹಬ್ಬ
Gangavathi Pranesh Laughter Festival on Nov. 7
ಬೆಳಗಾವಿ 06: ಇಲ್ಲಿಯ ಶಾಹುನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ಪ್ರಯುಕ್ತ ಮೂರು ದಿನಗಳ ಕಾಲ ಕರ್ನಾಟಕ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳನ್ನು ಶಾಹುನಗರ ಶಿವಬಸವ ಮಾರ್ಗದಲ್ಲಿ ಏರಿ್ಡಸಲಾಗಿದೆ.
ನ. 7 ರಂದು ಸಂಜೆ 5:30 ಕ್ಕೆ ಉಪನ್ಯಾಸ, ಹಾಡುಗಳು, ನೃತ್ಯ ಮುಂತಾದ ಮನೋರಂಜನಾ ಕಾರ್ಯಕ್ರಮ ಮತ್ತು ಜೂನಿಯರ್ ಶಿವರಾಜ್ ಕುಮಾರ್ (ಇಸ್ಮಾಯಿಲ್) ಕಲಾತಂಡದಿಂದ ಹಾಡು, ನೃತ್ಯ, ಮಿಮಿಕ್ರಿ ನಡೆಯಲಿದೆ.
ನ. 8 ರಂದು ಶನಿವಾರ ಸಂಜೆ 5:30 ಕ್ಕೆ ರಾಜ್ಯಮಟ್ಟದ "ಯುವ ಗಂಧರ್ವ" ಕರೋಕೆ ಹಾಡುವ ಸ್ಪರ್ಧೆ, ನ. 9 ರಂದು ಸಂಜೆ 5:30 ಕ್ಕೆ ಸಾಮಾಜಿಕ ಕಾರ್ಯಕರ್ತ ವೀರೇಶ ಕಿವಡಣ್ಣವರ ಪ್ರಾಯೋಜಕತ್ವದಲ್ಲಿ ಗಂಗಾವತಿ ಪ್ರಾಣೇಶ ಹಾಗೂ ಅವರ ತಂಡದಿಂದ ನಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಈಶ್ವರ ಗಾಣಿಗೇರ ಮತ್ತು ಕಾರ್ಯದರ್ಶಿ ಬಸವರಾಜ ಹಪ್ಪಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 