ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳಿಂದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

ಯಲ್ಲಾಪುರ 02ಶ್ರೀರಾಮನ ನಡೆ ಮತ್ತು ಶ್ರೀಕೃಷ್ಣನ ನುಡಿ ನಮಗೆಲ್ಲರಿಗೂ ಆದರ್ಶ. ರಾಮನ ನಡೆ, ಕೃಷ್ಣನ ನುಡಿ ನಮಗೆ ಆದರ್ಶ ಪ್ರಾಯವಾಗಿದೆ. ಧರ್ಮದ ದಾರಿಯಲ್ಲಿ ಹೇಗೆ ಸಾಗಬೇಕೆನ್ನುವುದನ್ನು ರಾಮ ತೋರಿಸಿಕೊಟ್ಟಿದ್ದಾನೆ.

                ಆದರೆ ಅನೇಕರು ಕೃಷ್ಣನ ಆದರ್ಶಗಳು ನಮಗೆ ಆದರ್ಶ ಎಂದು ಆತನ ಮಹಿಮೆಯ ಸಾಧನೆಗಳನ್ನು ಬಾಲಿಶವಾಗಿ ಅರ್ಥ ಮಾಡಿಕೊಂಡು ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು ನುಡಿದರು.

           ಅವರು ಗುರುವಾರ.ಸಂಜೆ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದ ಆವಾರದ ಶಾರದಾಂಬಾ ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ ಕೆ.ಎಸ್.ನಾರಾಯಣಾಚಾರ್ಯರರ ರಾಮಾಯಣ ಉಪನ್ಯಾಸ ವೇದಿಕೆಯಲ್ಲಿ ಭಗವದ್ಗೀತ ಅಭಿಯಾನಕ್ಕೆ ಚಾಲನೆ ನೀಡಿ, ಆಚಾರ್ಯರು ರಚಿಸಿದ "ರಾಮಾಯಣ ಪಾತ್ರ ಪ್ರಪಂಚ" ಮತ್ತು ನಾಟೀ ವೈದ್ಯರೇ ಸಂಗ್ರಹಿಸಿದ "ಗ್ರಾಮ ವೈದ್ಯ ಪುಸ್ತಕ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡುತ್ತಿದ್ದರು.  18 ಕ್ಕೆ ಗೆಲುವು ಎಂಬ ಅರ್ಥವನ್ನು ಮಾಡಬಹುದು. ಗೀತೆ 18 ಅಧ್ಯಾಯವನ್ನು ಹೊಂದಿದೆ. ಇಲ್ಲಿ 18 ದಿನಗಳ ಕಾಲ ರಾಮಾಯಣ ಪ್ರವಚನ ನಡೆಯುತ್ತಿದೆ. ವರ್ಷದ ಗೀತಾ ಜಯಂತಿ 18 ಕ್ಕೇ ಬಂದಿದೆ. ಎಂದ ಶ್ರೀಗಳು ಆಚಾರ್ಯರು ಬಹುಭಾಷಾ ವಿದ್ವಾಂಸರು ಸತ್ಯವನ್ನೇ ಪ್ರತಿಪಾದಿಸಬಲ್ಲ ಕಠಿಣ ವ್ಯಕ್ತಿತ್ವ ಹೊಂದಿದವರು.

                ಅಂತಹ ಮೇರು ವ್ಯಕ್ತಿತ್ವದವರಿಂದ ನಿಮಗೆ ಇಲ್ಲಿ ರಾಮಾಯಣದ ಕುರಿತಾಗಿ ಜ್ಞಾನ ಗಂಗೆ ದೊರೆಯುತ್ತಿದೆ. ಕಳೆದ 11 ವರ್ಷಗಳಿಂದ ನಾಡಿನಾದ್ಯಂತ ಗೀತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಪ್ರಸಕ್ತ 12 ನೇ ವರ್ಷದಲ್ಲಿ 8 ನೇ ಅಧ್ಯಾಯವನ್ನು ನಿಗದಿಗೊಳಿಸಲಾಗಿದ್ದು, ಡಿಸೆಂಬರ್ 18 ಮತ್ತು 19 ಗೀತಾ ಜಯಂತಿ ಬಂದಿರುವುದರಿಂದ 18 ರಂದು ನಾಡಿನ ಎಲ್ಲೆಡೆ ಗೀತೆಯ 18 ಅಧ್ಯಾಯದ ಪಾರಾಯಣ ನಡೆಸುವಂತಾಗಬೇಕು. 19 ರಂದು ಹುಬ್ಬಳ್ಳಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಜನರನ್ನು ಸೇರಿಸಿ, ಗೀತಾಭಿಯಾನದ ಮಹಾ ಸಮರ್ಪಣೆಯನ್ನು ನಡೆಸಲು ಉದ್ದೇಶಿಸಲಾಗಿದೆ. .9 ರಿಂದ ನಾಲ್ಕು ಹಂತದಲ್ಲಿ ಪ್ರತಿ ಶ್ಲೋಕ ಕೇಂದ್ರಗಳಲ್ಲಿ 8 ನೇ ಅಧ್ಯಾಯದ ಶ್ಲೋಕ ಪಾರಾಯಣ, ಪ್ರವಚನ, ಉಪನ್ಯಾಸ ನಡೆಯಬೇಕು. ಇದರಿಂದ ಸಂಕಷ್ಟದಲ್ಲಿರುವ ಜನರಿಗೆ ಮಾನಸಿಕ ನೆಮ್ಮದಿ ಆರೋಗ್ಯ ಲಭಿಸುತ್ತದೆ ಎಂದರು.

                      ರಾಮನ ರಾಮಾಯಣ, ಕೃಷ್ಣನ ಭಗವದ್ಗೀತೆಗೆ ಅವಿನಾಭಾವ ಸಂಬಂಧವಿದೆ. ರಾಮನ ಜೀವನಾದರ್ಶ ನಮಗೆ ಮೌಲಿಕವಾದದ್ದು. ಅತಿ ಮಾನವರಾದ ಕೃಷ್ಣನ ನುಡಿ, ನಮ್ಮನ್ನು ಉತ್ತುಂಗಕ್ಕೇರಿಸುತ್ತದೆ. ಈರ್ವರ ನಡೆ-ನುಡಿಗಳಿಂದ ಧರ್ಮದ ಹಾದಿಯಲ್ಲಿ ಸಾಗುವುದಕ್ಕೆ ದಾರಿ ದೀಪವಾಗಿದೆ ಎಂದರು.

                 ಪುರಾಣಾಚಾರ್ಯರಾದ ಕೆ.ಎಸ್.ನಾರಾಯಣಾಚಾರ್ಯ ಮಾತನಾಡಿ, ಸಮಾಜದಲ್ಲಿಂದು ದೊಡ್ಡವರ ಆಶೀವರ್ಾದಕ್ಕೆ ಮಾತಿಗೆ, ಬೆಲೆ ದೊರೆಯುತ್ತಿಲ್ಲ. ಆದರೆ, ಪರರಿಗೆ ಆಶೀವರ್ಾದ ಮಾಡುವವರು ಶುದ್ಧ ಚಾರಿತ್ರ್ಯವಂತರಾಗಿ ತಪೋಬಲ ಹೊಂದಿ, ನಿಷ್ಟೆ, ಜ್ಞಾನ ಪಡೆದು ಶ್ರೇಷ್ಟತ್ವ ಗಳಿಸಿದ ಮಹಾತ್ಮರು ತೀರಾ ವಿರಳರಾಗಿದ್ದಾರೆ. ಶ್ರೀಗಳು ರಾಮ-ಕೃಷ್ಣರ ಕುರಿತಾಗಿ ವಿವರಿಸಿದ್ದಾರೆ.

                ರಾಮನ ಕೌಟುಂಬಿಕ ಬದುಕು ರಾಷ್ಟ್ರಾಧಾರಿತ ಪರಿಕಲ್ಪನೆ ನೀಡುತ್ತದೆ. ಕಾಮ, ಕ್ರೋಧಗಳು ನಮ್ಮನ್ನು ಆಕ್ರಮಿಸಿ, ಜ್ಞಾನೇಂದ್ರಿಯವನ್ನು ಆವರಿಸಿ, ತಪ್ಪು ದಾರಿಗೆ ನೂಕುತ್ತದೆ. ಅಧರ್ಮದಲ್ಲಿ ಸಾಗಿದವರನ್ನು ಭಗವಾನ್ ಕೃಷ್ಣ ತಂತ್ರಗಾರಿಕೆಯಿಂದಲೇ ನಾಶ ಮಾಡಿದ್ದಾನೆ. ದೃಷ್ಟಿಯಿಂದ ಪೂಜ್ಯ ಶ್ರೀಗಳು ಹಳ್ಳಿ, ಹಳ್ಳಿಗಳಿಗೆ ಹೋಗಿ ಗೀತಾ ಯಜ್ಞವನ್ನು ನಡೆಸಿದ್ದಾನೆ. ಇದರಲ್ಲಿ ದೇಶದ ಮುಸ್ಲಿಂ, ಕ್ರೈಸ್ತರು ಸೇರಿಕೊಂಡು ತಮ್ಮ ಜೀವನವನ್ನು ಸಾರ್ಥಕ್ಯಗೊಳಿಸಿಕೊಳ್ಳುತ್ತಿದ್ದಾರೆ. ಆದರೆ ಇಂದು ವೈದೀಕತ್ವ ತಮ್ಮ ತನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿ ಮೌಲ್ಯವನ್ನು ಬಿಟ್ಟು ನಡೆಯುತ್ತಿರುವುದು ಸಮಾಜದಲ್ಲಿ ಕ್ಷೊಭೆಗಳು ಹೆಚ್ಚುತ್ತಿವೆ. ಇದು ಗಂಭೀರವಾದ ಚಿಂತನಾರ್ಹ ವಿಷಯವಾಗಿದೆ ಎಂದರು.

                ಮಾತೃ ಮಂಡಳಿಯ ಮಾತೆಯರಿಂದ ಗೀತಾಪಠಣ, ವೇದ ವಿದ್ವಾಂಸರಿಂದ ವೇದಘೋಷ, ಪುರಾಣ ಪ್ರವಚನ ಸ್ವಾಗತ ಸಮಿತಿಯ ಸಂಚಾಲಕ ಎಸ್.ಎಲ್.ಭಟ್ಟ ಸ್ವಾಗತಿಸಿದರು. ಸಮೀತಿಯ ಅಧ್ಯಕ್ಷ ಡಿ.ಶಂಕರ ಭಟ್ಟ ಪ್ರಾಸ್ತಾವಿಕ ಮಾತನಾಡಿದರು.