ಮೆಕ್ಸಿಕೋದಲ್ಲಿ ಗ್ಯಾಂಗ್‌ ವಾರ್, 19 ಮಂದಿ ಸಾವು

ಮೆಕ್ಸಿಕೊ ನಗರ, ಎಪ್ರಿಲ್ 5, ಮೆಕ್ಸಿಕೊದ ಉತ್ತರ ರಾಜ್ಯ ಚಿಹೋವಾದಲ್ಲಿ ಎರಡು  ಗ್ಯಾಂಗ್ ಗಳ ನಡುವೆ  ಸಂಭವಿಸಿದ ಶೂಟೌಟ್ ನಲ್ಲಿ  ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ರಾಜ್ಯ ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.ಕಚೇರಿಯ ಪ್ರಕಾರ, ಪಶ್ಚಿಮ ಚಿಹೋವಾದಲ್ಲಿನ ಮಡೆರಾ ಪುರಸಭೆಯ ಚುಹುಚುಪ ಪಟ್ಟಣದಲ್ಲಿ  ಶುಕ್ರವಾರ  ಶೂಟೌಟ್ ವರದಿಯಾಗಿದೆ. ಸುದ್ಇ ತಿಳಿದ ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಭದ್ರತಾ ಸೇವೆಗಳು 18 ನಾಗರಿಕರ ಶವಗಳನ್ನು ಪತ್ತೆ ಮಾಡಿವೆ  ಎಂದು ಮೆಕ್ಸಿಕನ್ ಮಿಲೆನಿಯೊ ಪತ್ರಿಕೆ ಅಟಾರ್ನಿ ಜನರಲ್ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ . ಗಾಯಗೊಂಡ ಇಬ್ಬರನ್ನು ಕುವ್ಟೆಮೋಕ್ ಪುರಸಭೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ 18  ಬಂದೂಕುಗಳು, ಎರಡು ಗ್ರೆನೇಡ್‌ಗಳು ಮತ್ತು ಎರಡು ಕಾರು  ವಶಪಡಿಸಿಕೊಳ್ಳಲಾಗಿದೆ, ರಾಜ್ಯ ಅಟಾರ್ನಿ ಜನರಲ್ ಕಚೇರಿಯ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ