ಸರಳವಾಗಿ ಸಂಪನ್ನ ಗೊಂಡ ಸಾರ್ವಜನಿಕನ ಗಣೇಶ ಉತ್ಸವ :
ಎಲ್ಲೆಲ್ಲೂ ಶಿಸ್ತಿಗೆ ಒತ್ತು - ದರ್ಶನಕ್ಕೆ ವಿರಳಾತಿ ವಿರಳ ಜನ
ಕಾರವಾರ : ನಗರದಲ್ಲಿ ಸೇರಿದಂತೆ ಜಿಲ್ಲೆಯಲ್ಲಿ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಮನೆಗಳಲ್ಲಿನ ಗಣೇಶ ಹಬ್ಬ ಹಿಂದಿನ ವರ್ಷಗಳಂತೆಯೇ ಇತ್ತು. ಆದರೆ ಸಾರ್ವಜನಿಕ ಗಣೇ ಉತ್ಸವಕ್ಕೆ ಮಾತ್ರ ಹಿಂದಿನ ವರ್ಷಗಳ ಕಳೆ ಕಟ್ಟಲಿಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಹ ಸಾರ್ವಜನಿಕ ಉತ್ಸವ ಸರಳವಾಗಿತ್ತ. ಪಟಾಕಿಯ ಅಬ್ಬರವಿರಲಿಲ್ಲ. ಸಾರ್ವಜನಿಕರು ಸಹ ಗಣೇಶ ಮೂರ್ತಿ ವೀಕ್ಷಿಸಲು ಬಂದದ್ದು ತೀರಾ ವಿರಳ. ಕೋವಿಡ್ ಭೀತಿ ಮತ್ತು ಮಳೆ ಜನರನ್ನು ನಗರದ ಬೀದಿಗಳಿಗೆ ಬರದಂತೆ ತಡೆದಿತ್ತು.
ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ಇಲ್ಲ ಎಂದು ಸರ್ಕಾರ ಹೇಳಿದ ಕಾರಣ ಸಾರ್ವಜನಿಕ ಗಣೇಶ ಉತ್ಸವಗಳ ಸಮಿತಿಗಳ ಸಿದ್ಧತೆ ಸಹ ಇರಲಿಲ್ಲ. ಕೊನೆಯ ಕ್ಷಣದಲ್ಲಿ ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಎರಡು ದಿನ ಮಾತ್ರ ಅವಕಾಶ ನೀಡಿದ ಕಾರಣ ಕಾರವಾರ ಸೇರಿದಂತೆ ಎಲ್ಲೆಡೆ ಎರಡು ಅಡಿ ಮತ್ತು ಮೂರು ಅಡಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಸರಳವಾಗಿ ಸಾರ್ವಜನಿಕ ಗಣೇಶ ಉತ್ಸವ ಆಚರಿಸಲಾಯಿತು. ನಗರದಲ್ಲಿ ವಿವಿದೆಡೆ ಸಾರ್ವಜನಿಕ ಗಣೇಶ ವಿಗ್ರಹ ಸ್ಥಾಪಿಸಿದ್ದು ಕಂಡು ಬಂತು. ಬಹುತೇಕ ಕಡೆ ಗಣೇಶ ಉತ್ಸವ ಕೈಬಿಡಲಾಗಿತ್ತು. ನಂದನಗದ್ದಾ, ಕಾಜೂಭಾಗ,ಪೋಲೀಸ್ ಗ್ರೌಂಡ್, ಆಟೋರಿಕ್ಷಾ ಗಣೇಶ ಉತ್ಸವ ಸಮಿತಿಗಳು ಗಣೇಶ್ ವಿಗ್ರಹವನ್ನು ಶನಿವಾರ ಪ್ರತಿಷ್ಠಾಪಿಸಿ, ರವಿವಾರ ಗಣೇಶನನ್ನು ಬಿಳ್ಕೊಟ್ಟರು. ನಗರದ ವಿವಿಧ ಭಾಗಗಳಲ್ಲಿ ಸಂಪ್ರದಾಯವನ್ನು ಬಿಡದೆ ಸಾರ್ವಜನಿಕ ಗಣೇಶ ವಿಗ್ರಹ ಸ್ಥಾಪಿಸಲಾಗಿತ್ತು. ಎಲ್ಲೆಡೆ ಅತೀ ಚಿಕ್ಕ ವಿಗ್ರಹಗಳು ಕಂಡು ಬಂದವು. ಗಣೇಶ ಮಂಟಪಗಳ ಅಲಂಕಾರ ಸಹ ಸರಳವಾಗಿತ್ತು. ಸದ್ದು ಗದ್ದಲವಿಲ್ಲದೇ, ಭಾಜಭಜಂತ್ರಿಯ ಸದ್ದಿಲ್ಲದೇ ಗಣೇಶೋತ್ಸವ ಎರಡು ದಿನಗಳಿಗೆ ಮುಕ್ತಾಯವಾಯಿತು.
...........