ಮ.ಗಾಂಧೀಜಿ ಸಂದೇಶಗಳು ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ'

ಧಾರವಾಡ  12: ಪ್ರಸ್ತುತ ಹವಾಮಾನ ವೈಪರಿತ್ಯ, ಭೂ ತಾಪಮಾನ ಮತ್ತು ಆರ್ಥಿ ಕ ಕುಸಿದಂತಹ ಸಮಸ್ಯೆಗಳಿಗೆ ಮಹಾತ್ಮಾ ಗಾಂಧೀಜಿ ಅವರು ತಮ್ಮ ಜೀವನದ ಸಂದೇಶದ ಮೂಲಕ ಸೂಕ್ತ ಪರಿಹಾರಗಳನ್ನು ನೀಡಿದ್ದಾರೆ ಎಂದು ಧಾರವಾಡ ಖ್ಯಾತ ವೈದ್ಯರಾದ ಡಾ. ಸಂಜೀವ ಕುಲಕರ್ಣಿ  ಅಭಿಪ್ರಾಯಪಟ್ಟರು. 

ಅವರು ಕರ್ನಾ ಟಕ ಮಹಾವಿದ್ಯಾಲಯದ ಡಾ. ವಿ.ಕೃ.ಗೋಕಾಕ್ ಗ್ರಂಥಾಲಯದ ಸಭಾಂಗಣದಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ವರ್ಷಾ ಚರಣೆಯ ಅಂಗವಾಗಿ ಆಯೋಜಿಸಿದ 'ಗಾಂಧೀ ಮತ್ತು ಯೋಗ ಶಿಕ್ಷಣ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಭಾರತ ಅಲ್ಲದೇ ವಿಶ್ವದಲ್ಲಿ ಕಾಳ್ಗಿಚ್ಚು, ಹವಾಮಾನದ ವೈಪರಿತ್ಯ ಮತ್ತು ಋತುಮಾನಗಳಲ್ಲಿ ಬದಲಾವಣೆ ಹಾಗೂ ಫಲವತ್ತಾದ ಮಣ್ಣಿನ ಸವೇತ ಸೇರಿದಂತೆ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದಕ್ಕೆ ಮನುಷ್ಯ ಬದಲಾವಣೆಯ ಹೆಸರಿನಲ್ಲಿ ನಿಸರ್ಗದ ಮೇಲೆ ನಡೆಸುತ್ತಿರುವ ದಾಳಿಯೇ ಕಾರಣ ಎಂದರು. ಗಾಂಧೀಜಿ ಅವರು ಯೋಗದ ಜೊತೆ ಗುರುತಿಸಿಕೊಳ್ಳದೆ ಇದ್ದರು ಕೂಡ ಅವರು ಯೋಗದ ಮೂಲ ತತ್ವಗಳಾದ ಸತ್ಯ ಮತ್ತು ಅಹಿಂಸೆಯನ್ನು ತಮ್ಮ ಬದುಕಿನ ಉದ್ದಕ್ಕೂ ಅಳವಡಿಸಿಕೊಂಡು ಇಡಿ ಜಗತ್ತಿಗೆ ಅಹಿಂಸೆ, ಸತ್ಯದ ಮಾರ್ಗವನ್ನು ಹೇಳಿದ್ದ ಅವರು ತಮ್ಮ ಅನೇಕ ಸಂದೇಶಗಳು ಇಂದಿನ ಪ್ರಸ್ತುತ ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದರು ಎಂದರು.

ಇಂದು ಭಾರತದಲ್ಲಿ 2019ರ ಅಂಕಿ ಅಂಶಗಳ ಪ್ರಕಾರ ಕೇವಲ ಪ್ರತಿಶತ 10 ರಷ್ಟು ಮಾತ್ರ ಅರಣ್ಯವನ್ನು ಹೊಂದಿದ್ದು, ಇದು ಆತಂಕದ ವಿಷಯವಾಗಿದ್ದು, ಜೀವ ಸಂಕಲುದ ರಕ್ಷಣೆಗಾಗಿ ಪ್ರತಿ ಒಂದು ಹೆಕ್ಟರ್ಗೆ 100 ಮರಗಳನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದ ಅವರು ಇಂದು ಶೇಕಡಾ 75 ರಷ್ಟು ಫಲವಾತ್ತಾದ ಮಣ್ಣಿನ ಸವಕಳಿ ಮತ್ತು ಹವಾಮಾನ ವೈಪರಿತ್ಯದಿಂದ ಜೀವ ಸಂಕುಲಕ್ಕೆ ಧಕ್ಕೆ ಆಗುತ್ತಿರುವದಕ್ಕೆ ಮನುಷ್ಯನ ಅತಿ ಆಸೆ ಕಾರಣವಾಗಿದೆ ಎಂದರು. ಯೋಗವು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದ್ದು,  ಇಂದು ಯೋಗದ ಮಹತ್ವ ಯೋಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಆದರೆ 100 ರಷ್ಟು ಯೋಗದಲ್ಲಿ ಕೇವಲ ಶೇಕಡಾ 15ರಷ್ಟು ಮಾತ್ರ ಯೋಗವನ್ನು ಹೇಳಿಕೊಡಲಾಗುತ್ತಿರುವದು  ದುರದೃಷ್ಟಕರ ಸಂಗತಿ ಎಂದ ಅವರು ಮನಸ್ಸಿನ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಡಲು ಅಷ್ಟಾಂಗ ಯೋಗ ಬಹಳ ಸಹಕಾರಿಯಾಗಿದೆ ಎಂದರು.

ಕರ್ನಾ ಟಕ ಕಲಾ ಮಹಾವಿದ್ಯಾಲಯದ ಮರಾಠಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಅಮೃತ್ ಯಾರ್ದಿ  ಮಾತನಾಡಿ ಇಂದಿನ ವಿದ್ಯಾಥರ್ಿಗಳು ಮಹಾತ್ಮಾ ಗಾಂಧೀಜಿ ಅವರನ್ನು ಅಧ್ಯಯನ ಮಾಡುವದು ಅತಿ ಅವಶ್ಯಕವಾಗಿದೆ ಎಂದರು. 

ಅವರು ಭಾರತ ಸರಕಾರವು ಪ್ರಕಟಿಸಿದ ಮಹಾತ್ಮಾ ಗಾಂಧೀಜಿ ಅವರ ಜೀವನದ ಸಮಗ್ರ 100 ಸಂಪುಟಗಳನ್ನು ಕೆಸಿಡಿಯ ಡಾ.ವಿ.ಕೃ.ಗೋಕಾಕ್ ಗ್ರಂಥಾಲಯಕ್ಕೆ ಕೂಡಗೆ ನೀಡುವುದರ ಮೂಲಕ ಪ್ರಾಚಾರ್ಯರಿಗೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಡಾ.ವಿ.ಕೃ.ಗೋಕಾಕ್ ಗ್ರಂಥಾಲಯದ ವತಿಯಿಂದ ಡಾ. ಅಮೃತ್ ಯಾರ್ದಿ  ಅವರನ್ನು ಸನ್ಮಾನಿಸಲಾಯಿತು.

ಕೆಡಿಸಿ ಕಾಲೇಜಿನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಸಿಡಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಫ್.ಮೂಲಿಮನಿ, ಸಹಾಯಕ ಗ್ರಂಥಪಾಲಕ ಅಶೋಕ ಆಲದಕಟ್ಟಿ, ಡಾ. ಆರ್.ಎಲ್.ಜಾಡರ್, ಡಾ. ಎಸ್.ಜಿ.ಜಾಧವ್, ಡಾ. ಅರುಣಾ ಹಳ್ಳಿಕೇರಿ, ಡಾ. ಮುಕುಂದ ಲಮಾಣಿ, ಡಾ.ಎ.ಸಿ.ಕುರಹಟ್ಟಿ, ಡಾ. ವಾಯ್.ಎಸ್. ರಾವುತ್, ಡಾ.ಚಂದ್ರು ಲಮಾಣಿ, ಡಾ. ಪ್ರಭಾಕರ ಕಾಂಬಳೆ ಸೇರಿದಂತೆ ವಿದ್ಯಾಥರ್ಿಗಳು ಹಾಜರಿದ್ದರು.