ಧಾರವಾಡ, 23 : ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ವತಿಯಿಂದ 'ಗಾಂಧೀಜಿ-150 : ಕುಂಚ ನಮನ' ಶೀರ್ಷಿಕೆಯಡಿ ಸರಕಾರಿ ಚಿತ್ರಕಲಾ ಕಾಲೇಜಿನ ಆರ್ಟ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಪೇಂಟಿಂಗ್ ಕಾರ್ಯಾಗಾರ ಇತ್ತೀಚೆಗೆ ಸಮಾರೋಪಗೊಂಡಿತು.
ಬೆಳಗಾವಿ ವಿಭಾಗದ 9 ಜಿಲ್ಲೆಗಳ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರು ಮಹಾತ್ಮಾ ಗಾಂಧೀಜಿಯವರ ಕುಟುಂಬ, ಬಾಲ್ಯ, ಬದುಕು, ನಿತ್ಯದ ದಿನಚರಿ, ಸ್ವಾತಂತ್ರ್ಯ ಹೋರಾಟ, ಚಿಂತನೆ ಮುಂತಾದ ಅಂಶಗಳನ್ನು ಕೇಂದ್ರೀಕರಿಸಿ ಒಟ್ಟು 150 ಕಲಾಕೃತಿಗಳನ್ನು ಚಿತ್ರಿಸಿದರು. ಚಿತ್ರಕಲಾ ಶಿಕ್ಷಕರ ಕುಂಚಗಳಲ್ಲಿ ಅರಳಿದ ಈ ಸುಂದರ ಬಹುವರ್ಣ ಕಲಾಕೃತಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ಆಯುಕ್ತರ ಕಛೇರಿಯ ಉಪನಿರ್ದೇಶಕ ಆರ್.ಎಸ್. ಮುಳ್ಳೂರ, ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ, ಹಿರಿಯ ಚಿತ್ರಕಲಾವಿದ ಎಂ.ಆರ್. ಬಾಳಿಕಾಯಿ, ನಿವೃತ್ತ ಚಿತ್ರಕಲಾ ಉಪನ್ಯಾಸಕ ಸಿ.ಎಲ್. ಕೋಲಕಾರ, ಸರಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಬಸವರಾಜ ಕುರಿ, ವೀಕ್ಷಿಸಿ ಮೆಚ್ಚಿಗೆ ವ್ಯಕ್ತಪಡಿಸಿದರು.
'ಗಾಂಧೀಜಿ-150 : ಕುಂಚ ನಮನ' ಕಾರ್ಯಾಗಾರದ ನೋಡಲ್ ಅಧಿಕಾರಿ ಪಿ.ಆರ್. ಬಾರಕೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಕಿರಿಯ ಸಂಶೋಧನಾ ಅಧಿಕಾರಿ ಮಹಾದೇವಿ ಮಾಡಲಗೇರಿ, ಇ-ಆಡಳಿತ ಕಾರ್ಯಕ್ರಮ ಅಧಿಕಾರಿ ಶಾಂತಾ ಮೀಸಿ ಹಾಗೂ ವಿವಿಧ ಚಿತ್ರಕಲಾ ಶಿಕ್ಷಕ-ಶಿಕ್ಷಕಿಯರು ಪೇಂಟಿಂಗ್ ಕಾರ್ಯಾಗಾರ ಕುರಿತು ಅಭಿಪ್ರಾಯ ಹಂಚಿಕೊಂಡರು.
ಧಾರವಾಡದ ಸರಕಾರಿ ಚಿತ್ರಕಲಾ ಕಾಲೇಜಿನ ಆರ್ಟ ಗ್ಯಾಲರಿಯಲ್ಲಿ ಸಾ.ಶಿ. ಇಲಾಖೆಯ ಆಯುಕ್ತರ ಕಛೇರಿಯ ವತಿಯಿಂದ ಆಯೋಜಿಸಿದ್ದ 'ಗಾಂಧೀಜಿ-150 : ಕುಂಚ ನಮನ' ಶೀಷಿಕೆಯ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಪೇಂಟಿಂಗ್ ಕಾಯರ್ಾಗಾರದ ಸಮಾರೋಪದ ಸಂದರ್ಭದಲ್ಲಿ ಗುಂಪುಚಿತ್ರದಲ್ಲಿ ಚಿತ್ರಕಲಾ ಶಿಕ್ಷಕ-ಶಿಕ್ಷಕಿಯರು.