ಜೂಜಾಟ: ನಾಲ್ವರ ಬಂಧನ
Gambling: Four arrested: APMC
ಜೂಜಾಟ ಆಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಹಾಂತೇಶ ನಗರದ ನಿವಾಸಿ ಮಹಾಂತೇಶ ಹಣಮಂತಪ್ಪ ಲಮಾಣಿ, ಬಿ.ಕೆ. ಕಂಗ್ರಾಳಿ ನಿವಾಸಿ ಪರಶುರಾಮ ಬಾಬು ಕರಿಕಟ್ಟಿ, ಬಾಕ್ಸೈಟ್ ರೋಡ್ ಭರತ ನಗರ ನಿವಾಸಿ ದೀಪಕ ಸೋನಪ್ಪ ಸಗಟಸಾ, ಕಲಕಾಂಬ ನಿವಾಸಿ ಬಾಳೇಶ ಯಲ್ಲಪ್ಪ ನಾಯಕ ಬಂಧಿತ ಆರೋಪಿಗಳಾಗಿದ್ದಾರೆ. ಎಪಿಎಂಸಿ ಆಣೆಯ ಪಿಎಸ್ ಐ ಸಂತೋಷ ದಳವಾಯಿ ಹಾಗೂ ಸಿಬ್ಬಂದಿ ಅವರು ದಾಳಿ ನಡೆಸಿ ಆರೋಪಿಗಳಿಂದ ಒಟ್ಟು ನಗದು ರೂ. 4300, ಹಾಗೂ ಇಸ್ಪೀಟ್ ಎಲೆಗಳನನು ಜಪ್ತ ಮಾಡಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇಂತಹ ಚಟುವಟಿಕೆಗಳು ನಿಮ್ಮ ದುಡಿತ ಮತ್ತು ಶ್ರಮವನ್ನಲ್ಲದೆ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಹಾನಿ ಮಾಡುವಂತಹದ್ದಾಗಿದ್ದು, ಸಾರ್ವಜನಿಕರು ಇಂತಹ ದುಶ್ಚಟಗಳಿಂದ ದೂರವಿರಬೇಕೆಂದು ತಿಳಿಸಿದೆ.
ಮೇಲಿನ ಎರಡು ಪ್ರಕರಣಗಳಲ್ಲಿ ಒಟ್ಟು 84,300 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಕೈಗೊಂಡ ಸಂಬಂಧಪಟ್ಟ ಠಾಣೆಯ ಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ಅವರುಗಳು ಶ್ಲಾಘಿಸಿರುತ್ತಾರೆ.
ಬೆಳಗಾವಿ ನಗರದಲ್ಲಿ ಇಂಥ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟು ಯುವ ಪೀಳಿಗೆಯನ್ನು ಇಂಥ ದುಶ್ಚಟಗಳಿಗೆ ದಾಸರಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮಿಂಚಿನ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಈ ಕಾರ್ಯಾಚರಣೆಗಳು ಜಾರಿಯಲ್ಲಿದ್ದು, ಇನ್ನು ಹೆಚ್ಚಿ ದಾಳಿಗಳನ್ನು ಕೈಗೊಂಡು ನಗರದಲ್ಲಿ ಅಕ್ರಮ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತೊಗೆಯಲು ಬೆಳಗಾವಿ ನಗರ ಪೊಲೀಸರ ಅವಿರತ ಪ್ರಯತ್ನ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಗೆ ತಿಳಿಸಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 