ಗದಗ ಉತ್ಸವ-2026 : ಹಿರಿಯ ಉದ್ಯಮಿ ವೀರಣ್ಣ ಪವಾಡ ಅವರಿಗೆ ‘ಶ್ರೇಷ್ಠ ಉದ್ಯಮಿ ಪ್ರಶಸ್ತಿ’

ಗದಗ ಉತ್ಸವ-2026 : ಹಿರಿಯ ಉದ್ಯಮಿ ವೀರಣ್ಣ ಪವಾಡ ಅವರಿಗೆ ‘ಶ್ರೇಷ್ಠ ಉದ್ಯಮಿ ಪ್ರಶಸ್ತಿ’  Gadag Utsav-2026: ‘Best Entrepreneur Award’ for veteran entrepreneur Veeranna Pavada


ಗದಗ 17 :  ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಹಾಗೂ ಸಣ್ಣ ಉದ್ಯಮ ವಿಭಾಗ ಮತ್ತು ಗದಗ ಜಿಲ್ಲಾ ಪಂಚಾಯತ್ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗದಗ ಗದಗ ಉತ್ಸವ-2026ರ ಸಮಾರಂಭದಲ್ಲಿ ಶಿಗ್ಲಿ ಗ್ರಾಮದ ಹಿರಿಯ ಉದ್ಯಮಿ ವೀರಣ್ಣ ಪವಾಡ ಅವರಿಗೆ ‘ಶ್ರೇಷ್ಠ ಉದ್ಯಮಿ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ಕೊಟ್ಟೂರು ಬಸವೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಗ್ರಾಮೀಣ ಹಾಗೂ ಸಣ್ಣ ಉದ್ಯಮ ವಿಭಾಗ ಮತ್ತು ಗದಗ ಜಿಲ್ಲಾ ಪಂಚಾಯತ್ನ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.  ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಹಾಗೂ ಸಣ್ಣ ಉದ್ಯಮಗಳ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ವೀರಣ್ಣ ಪವಾಡ ಅವರನ್ನು ಗೌರವಿಸಲಾಯಿತು.