ಸಂತೋಷ ಲಾಡ ಸಚಿವ ಇರುವರೆಗೂ ಕ್ಷೌರಿಕರ ಬೆಡಿಕೆಗೆ ಮನವಿ ಸಲ್ಲಿಸಲ್ಲ
Gadag News- 17-07
ಗದಗ 17: ಸಂತೋಷ ಲಾಡ ಅವರು ಕಾರ್ಮಿಕ ಸಚೀವ ಆಗಿರೋವ ತನಕ ನಮ್ಮ ಸವಿತಾ ಸಮಾಜದ ಕ್ಷೌರಿಕ ಬಾಂಧವರಿಗೆ ಅಗತ್ಯ ಭದ್ರತೆ ಮತ್ತು ಸೌಲಭ್ಯ ಕುರಿತು ಹಾಗೂ ಇಲಾಖೆಯಿಂದ ಬೇಕು ಬೆಡಿಕೆಗಳ ಇಡೆರಿಕೆಗಾಗಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಮನವಿ ಅವರಿಗೆ ಸಲ್ಲಿಸುವುದಿಲ್ಲ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಹೇಳಿದರು.
ಅವರು ಕಾಂಗ್ರೇಸ್ ಮುಖಂಡರಾದ ಅಬ್ದುಲಮುನಾಫ ಮುಲ್ಲಾ ಅವರು ಸಮಾಜದ ಜಿಲ್ಲಾ ಕಾರ್ಯಾಲಯಕ್ಕೆ ಬೇಟಿ ಕೊಟ್ಟ ಸಂದರ್ಭದಲ್ಲಿ ಅವರಿಗೆ ಸಮಾಜದ ಪ್ರೀತಿಯ ಸನ್ಮಾನ ಸಲ್ಲಿಸಿ ಗೌರವಿಸಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿ ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತಿಚೆಗೆ ಕಾರ್ಮಿಕ ಸಚೀವರಾದ ಸತೋಷ ಲಾಡ ಅವರು ಗದಗ ಜಿಲ್ಲಾ ಉಸ್ತುವಾರಿ ಸಚೀವರಾದ ಎಚ್ ಕೆ ಪಾಟೀಲಜಿ ಅವರ ಘನ ಉಪಸ್ತಿತಿಯಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ನಿಯೋಗದೊಂದಿಗೆ ಬಾಗವಹಿಸಿ ಕಾರ್ಮಿಕ ಸಚೀವರಿಗೆ ಸವಿತಾ ಸಮಾಜದ ಪ್ರಮುಖ ಮುರು ಬೆಡಿಕೆಗಳನ್ನು ಇಡೆರಿಸಲು ಮುಂದಾದಾಗ ರಾಜ್ಯ ಕಂಡ ಅತ್ಯಂತ ದಕ್ಷ ಹಾಗೂ ಸಮರ್ಥ ಕಾರ್ಮಿಕ ಸಚೀವರೇಂದೇ ಹೆಗ್ಗಳಿಕೆಗೆ ಪಾತ್ರರಾದ ಸನ್ಮಾನ್ಯ ಸಂತೋಷ ಲಾಡ್ ಸಾಹೇಬರು ನಮ್ಮ ಸವಿತಾ ಸಮಾಜದ ಮನವಿ ಸ್ವಿಕರಿಸದೆ ಮಾತನಾಡಿ ತಮ್ಮ ಕ್ಷೌರಿಕ ವೃತ್ತಿಯಿಂದ ಸರಕಾರಕ್ಕೆ (ಸೋರ್ಸು) ಎನೂ ಲಾಭವೇ ಇಲ್ಲ ಹಾಗಾಗಿ ನಿಮಗೆ ನಾವೇಲ್ಲಿಂದ ನಿಮ್ಮ ಬೆಡಿಕೆ ಇಡೆರಿಸೊದು ಕೇಂದ್ರ ಸರಕಾರದಿಂದ ಎನಾದರು ವಿಷೇಶ ಅನುಧಾನ ಬಂದಾಗ ನೊಡೋಣ ಎಂದು ರಾಜ್ಯದ 20 ಲಕ್ಷ ಕ್ಷೌರಿಕರ ನೊವಿನ ಬಗ್ಗೆ ಸರಕಾರದಿಂದ ಸಾದ್ಯವಾದಸ್ಟು ಅನಕೂಲ ಮಾಡಿಕೊಡುತ್ತೆನೆ ಎಂದು ಬರವಸೆ ಹಾಗೂ ದರ್ಯ ಹೆಳದೆ ಸ್ವಲ್ಪವುಕೂಡಾ ಕಳಕಳಿ ತೊರದೆ ಉದ್ದೇಶಪೂರ್ವಕವಾಗಿ ನಮ್ಮ ಹೋರಾಟ ಮತ್ತು ಪ್ರಯತ್ನ ಹತ್ತಿಕುವ ಕೆಟ್ಟ ವುದ್ದೇಶವೆನಿತ್ತೋ ಗೊತ್ತಿಲ್ಲ ಮತ್ತು ನಮ್ಮ ಸಮಾಜದ ಮನವಿ ಪತ್ರ ಸಹ ಸ್ವಿಕರಿಸದೆ ನಮ್ಮ ಸವಿತಾ ಸಮಾಜ ಮತ್ತು ಕ್ಷೌರಿಕ ಕಾರ್ಮಿಕರ ಮನ ನೋವಿಸಿ ಅವಮಾನ ಮಾಡಿದ್ದಾರೆ ಆದ್ದರಿಂದ ನಾವು ಅವರ ಬಳಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸಂತೋಷ ಲಾಡ ಅವರು ಕಾರ್ಮಿಕ ಸಚೀವ ಆಗಿರುವವರೇಗೂ ಗದಗ ಜಿಲ್ಲಾ ಸವಿತಾ ಸಮಾಜದಿಂದ ಕ್ಷೌರಿಕರ ಭಹು ದಿನಗಳ ಮುರು ಬೆಡಿಕೆಗಳು ಇಡೇರಿಸಿ ಕೊಡಿ ಎಂದು ಕೇಳುವುದಿಲ್ಲ ಮತ್ತು ಮನವಿ ಸಹ ಅವರಿಗೆ ಸಲ್ಲಿಸಲ್ಲ ಎಂದು ಕೃಷ್ಣಾ ಹಡಪದ ಆಕ್ರೋಶದ ಮಾತು ಹೇಳಿದರಲ್ಲದೆ ನಮ್ಮ ಸಮಾಜಕ್ಕೆ ಸದಾ ಆಸರೆಯಾಗಿರುವ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರು ಮತ್ತು ಹಿರಿಯರಾದ ಡಿ.ಆರ್.ಪಾಟೀಲಜಿ ಅವರು ನಮ್ಮ ಸವಿತಾ ಕ್ಷೌರಿಕ ಸಮಾಜದ ಮೇಲೆ ಇರುವ ಅವರ ಅಪಾರ ಪ್ರೀತಿ ಮತ್ತು ಅಭಿಮಾನದ ಸಲುವಾಗಿ ಮತ್ತು ಕಾರ್ಮಿಕ ಇಲಾಖೆ ಹಾಗೂ ಪ್ರಾಮಾಣಿಕ ಅಧೀಕಾರಿಗಳ ಸಲುವಾಗಿ ದಿ.18-7-2025 ರಂದು ಗದಗದಲ್ಲಿ ಕಾರ್ಮಿಕ ಇಲಾಖೆಯಿಂದ ಜರುಗುತ್ತಿರುವ ಸಮಾರಂಭದಲ್ಲಿ ಗದಗ ಬೆಟಗೇರಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಸವಿತಾ ಕ್ಷೌರಿಕ ಸಮಾಜದ ಸೂಮಾರು 250 ಜನ ಕ್ಷೌರಿಕ ಬಾಂಧವರು ಭಾಗವಹಿಸುತ್ತೆವೆ ಎಂದು ಹೆಳಿದರು ಕಾಂಗ್ರೇಸ ಮುಖಂಡರಾದ ಅಬ್ದುಲಮುನಾಫ ಮುಲ್ಲಾ ಅವರು ಸವಿತಾ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ವಿಕಾಸ ಕ್ಷೀರಸಾಗರ ಸಹ ಮಾತನಾಡಿ ಕಾರ್ಮಿಕ ಸಚೀವರು ನಡೆದು ಕೊಂಡ ರೀತಿಯನ್ನು ಬೇಸರ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ರಾಂಪೂರ ಜಂಮ್ಮಣ್ಣ ಕಡಮೂರ ಹೇಮಂತ ವಡ್ಡೆಪಲ್ಲಿ ಶ್ರೀನಿವಾಸ ಕೊಟೇಕಲ್ಲ ಕೀರಣ ರಾಂಪೂರ ಸುರೇಶ ಬುದೂರ ಜಿಲ್ಲಾ ಖಜಾಂಚಿಗಳಾದ ಅರೂಣ ರಾಂಪೂರ ಯುವನಾಯಕರಾದ ಸುನೀಲ ರಾಯಚೂರ ಕೃಷ್ಣಾ ಬುದೂರ ವಿನಾಯಕ ರಾಯಚೂರ ವೆಂಕಟೇಶ ಕೊಟೇಕಲ್ಲ ಹಾಗೂ ಸಮಾಜದ ಅನೇಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 