ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ವಿಜೃಂಭಣೆಯ ಶ್ರೀ ರಾಮನವಮಿ ಆಚರಣೆ
Gadag District Patanjali Yoga Committee celebrates Sri Ram Navami with great enthusiasm
ಲೋಕದರ್ಶನ ವರದಿ
ಗದಗ 27: ನಗರದ ಮುನಸಿಪಲ್ ಮೈದಾನದಲ್ಲಿ ನಡೆಯುವ ನಿರಂತರ ಯೋಗ ಕಕ್ಷೆಯಲ್ಲಿ ಇಂದು ಶ್ರೀ ರಾಮನವಮಿ ಹಾಗೂ ಅಂತರರಾಷ್ಟ್ರೀಯ ಯೋಗ ಗುರು ಬಾಬಾ ರಾಮದೇವ ಗುರೂಜಿಯವರ ಸನ್ಯಾಸ ದೀಕ್ಷಾ ದಿನದ ನಿಮಿತ್ತ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ, ಕಿಸಾನ ಪಂಚಾಯತ, ಯುವಭಾರತ, ಸೋಶಿಯಲ್ ಮಿಡಿಯಾ ಈ 6 ಸಂಘಟನೆಗಳ ಆಶ್ರಯದಲ್ಲಿ ಆಚರಿಸಲಾಯಿತು. ಅತಿಥಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿಗಳಾದ ಗಿರಿಯಪ್ಪ ಮಡಿವಾಳರ ಮಾತನಾಡಿ ರಾಮದೇವ ಗುರೂಜಿಯವರು ಚಿಕ್ಕಂದಿನಲ್ಲಿಯೇ ಯೋಗದ ಬಗ್ಗೆ ಆಸಕ್ತಿಯನ್ನು ಹೊಂದಿ ಮುಂದೆ ಹಂತಹಂತವಾಗಿ ಯೋಗವನ್ನು ಪ್ರತಿಯೊಬ್ಬರಿಗೂ ಕಲಿಸಿ, ಯೋಗವನ್ನು ಮನೆಮನೆಗೂ ಮುಟ್ಟಿಸಿ ಎಲ್ಲರಿಗೂ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮಾಡಿ ಅಂತರಾಷ್ಟ್ರೀಯ ಯೋಗ ಗುರು ಆದ ವಿಷಯವನ್ನು ಮನಮುಟ್ಟುವಂತೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿಗಳಾದ ಶೋಭಾ ಗುಗ್ಗರಿಯವರು ಮಾತನಾಡಿ ರಾಮನವಮಿಯಂದೇ ದೀಕ್ಷೆ ಪಡೆದ ಗುರುಗಳು ಯೋಗಕ್ಕಾಗಿ, ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ನುಡಿದರು ಎಲ್ಲರಿಗೂ ರಾಮ ಭಜನೆಯನ್ನು ಮಾಡಿಸಿದರು.
ಅತಿಥಿಗಳಾಗಿದ್ದ ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿ ಸಹಪ್ರಭಾರಿಗಳು ಹಾಗೂ ಯೋಗ ವಿಸ್ತಾರಕರಾದ ಆಂಜನೇಶ ಮಾನೆ ಇವರು ಮಾತನಾಡಿ ರಾಮದೇವ ಗುರುಗಳು ಯೋಗಕ್ಕೆ ನೀಡಿದಷ್ಟೇ ಸೇವೆಯನ್ನು ಆಚಾರ್ಯ ಬಾಲಕೃಷ್ಣರವರು ಆಯುರ್ವೇದಕ್ಕೆ ನೀಡಿದ್ದಾರೆ. ಈ ಇಬ್ಬರು ಬಾಲ್ಯದ ಗೆಳೆಯರು ಒಬ್ಬರು ಯೋಗದ ಹರಿಕಾರ ಆದರೆ ಒಬ್ಬರು ಆಯುರ್ವೇದದ ಹರಿಕಾರರು. ಇವರು ಪ್ರತಿ ರಾಜ್ಯದಲ್ಲಿ, ಜಿಲ್ಲೆಯಲ್ಲಿ, ಗ್ರಾಮಗಳಲ್ಲಿ ಚಿಕಿತ್ಸಾಲಯವನ್ನು ವೆಲ್ನೆಸ್ ಸೆಂಟರ್‌ಗಳನ್ನು, ಮಾಡಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುತ್ತಿರುವುದು ಸಂತಸದ ವಿಚಾರವೆಂದರು.
ಅತಿಥಿಗಳಾಗಿದ್ದ ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಖಜಾಂಚಿಗಳಾದ ಕಂಠೆಪ್ಪ ಗುಗ್ಗರಿಯವರು ಮಾತನಾಡಿ ಬಾಬಾ ರಾಮದೇವ ಗುರೂಜಿಯವರು ಸನ್ಯಾಸವನ್ನು ಸ್ವೀಕರಿಸಿದ ದಿನ ನಮಗೆಲ್ಲ ಹಬ್ಬದ ದಿನ. ಬಾಬರಾಮದೇವ ಗುರೂಜಿಯವರ ಯೋಗದ ಸೇವೆ, ಹರಿದ್ವಾರದ ವಿವರಣೆಯನ್ನು ಮಾರ್ಮಿಕವಗಿ ಮತನಾಡಿದರು.
ಹಿರಿಯ ಯೋಗ ಸಾಧಕರಾದ ಸದಾನಂದ ಕಾಮತ ಇವರು ರಾಮನವಮಿ ಕುರಿತು ಮಾತನಾಡಿ ರಾಮನವಮಿಯೊಂದಿಗೆ ಬಾಬಾ ರಾಮದೇವ ಗುರೂಜಿಯವರು ಸನ್ಯಾಸ ದೀಕ್ಷೆ ಪಡೆದದ್ದು ವಿಶೇಷವೆಂದು, ನಾವೆಲ್ಲರೂ ಯೋಗವನ್ನು ಮುಂದುವರೆಸಿಕೊಂಡು ಹೋಗೋಣವೆಂದು ನುಡಿದರು.
ಹಿರಿಯ ಯೋಗ ಸಾಧಕರಾದ ವೆಂಕಟೇಶ ಮೆರವಾಡೆ ಇವರು ರಾಮನವಮಿ ಹಾಗೂ ಬಾಬಾರಾಮದೇವರ ಕುರಿತು ಮಾತನಾಡಿದರು.
ಪ್ರಾರಂಭದಲ್ಲಿ 6 ಸಂಘಟಣೆ ಆಶ್ರಯದಲ್ಲಿ ಅಗ್ನಿಹೋತ್ರವನ್ನು ಮಾಡಲಾಯಿತು. ಜಾನಕಿ ರಂಗಪೂರ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯದಲ್ಲಿ ಭಾರತ ಸ್ವಾಭಿಮಾನ ಟ್ರಸ್ಟನ ಜಿಲ್ಲಾ ಸಹಪ್ರಭಾರಿಗಳಾದ ಬಸವರಾಜ ಹಿರೇಮಠ ಸರ್ವರನ್ನು ಸ್ವಾಗತಿಸಿದರು. ತ್ರಿವೇಣಿ ಖಾನಾಪೂರ ಇವರು ಭಜನೆಯನ್ನು ಹಾಡಿದರು. ಹಿರಿಯ ಯೋಗ ಸಾಧಕಿ ನಾಗರತ್ನಾ ಬಡಿಗಣ್ಣವರ ಹರಿದ್ವಾರದಲ್ಲಿ ಯೋಗ ಪೀಠದ ಸ್ಥಾಪನೆಗೆ ಕಾರಣವೇನೆವೆಂಬುದನ್ನು ಎಲ್ಲರಿಗೂ ತಿಳಿಸಿ, ಬಾಬಾ ರಾಮದೇವ ಗುರೂಜಿ ಹಾಗೂ ಆಚಾರ್ಯ ಬಾಲಕೃಷ್ಣಜಿಯವರ ಸ್ನೇಹ ಕೃಷ್ಣ-ಸುಧಾಮರಂತೆ ಎಂದು ನುಡಿದು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಕಕ್ಷೆ, ಬಸವೆಶ್ವರ ನಗರದ ವೀರಭದ್ರೇಶ್ವರ ಕಕ್ಸೆ, ಸರಕಾರಿ ಪ್ರಾಥಮಿಕ ಶಾಲಾ ನಂ.:4 ರ ಕಕ್ಷೆಯ ಹಾಗೂ ಎಲ್ಲ ಯೋಗ ಸಾಧಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 