ರೇಲ್ವೆ ಹೋರಾಟ ಸಮಿತಿಯಿಂದ ಗದಗ ಜಿಲ್ಲಾ ಹುಟ್ಟು ಹಬ್ಬ ಆಚರಣೆ

ರೇಲ್ವೆ ಹೋರಾಟ ಸಮಿತಿಯಿಂದ ಗದಗ ಜಿಲ್ಲಾ ಹುಟ್ಟು ಹಬ್ಬ ಆಚರಣೆ Gadag District Foundation Day celebration by the Betageri Railway Struggle Committee.

ಲೋಕದರ್ಶನ ವರದಿ

ಬೆಟಗೇರಿ ೨೩ : ಗದಗ ಜಿಲ್ಲೆಯಾಗಿ ೨೪-೮-೧೯೯೭ ರಂದು ಉದಯವಾಗಿ ೨೯ ವರ್ಷಗಳಾಗಿದ್ದು ಅದರ ಅಂಗವಾಗಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ೨೪ ರಂದು ಸೋಮವಾರ ಮುಂಜಾನೆ ೧೦ ಗಂಟೆಗೆ ಬೆಟಗೇರಿ ಕೆ.ಸಿ. ಪಾರ್ಕದಲ್ಲಿ ೩೦ನೇ ಹುಟ್ಟು ಹಬ್ಬ ಆಚರಿಸಲಾಯಿತು ಹುಟ್ಟು ಹಬ್ಬವನ್ನು ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅಧ್ಯಕ್ಷತೆಯಲ್ಲಿ ಸದಸ್ಯರು ಸಿಹಿ ವಿನಿಮಯ ಮಾಡಿಕೊಂಡು ಸಂತಸ ವ್ಯಕ್ತಪಡಿಸುವದರೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ  ಎಂ.ಟಿ. ಕಬ್ಬಿನ, ಮನ್ಸೂಖಲಾಲ ಪುಣೇಕರ, ಆಂಜನೇಯ ಗುಂತಕಲ್ಲ, ಭೋಜಪ್ಪ ಹೆಗ್ಗಡಿ, ಅಶೋಕ ಅಂಗಡಿ, ಅರ್ಜುನಸಾ ಮೇರವಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.