ಗದಗ ಜಿಲ್ಲಾ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಸಮಾವೇಶ

ಗದಗ ಜಿಲ್ಲಾ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಸಮಾವೇಶ  Gadag District First Literary Cultural Educational Conference

ಗದಗ 09: ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ರಿ ಬೆಂಗಳೂರು, ಜಿಲ್ಲಾ ಘಟಕ ಗದಗ ಇವರ ಆಶ್ರಯದಲ್ಲಿ ನಗರದ  ಡಾ. ಬಿ.ಆರ್ ಅಂಬೇಡ್ಕರ್ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ ಗದಗದಲ್ಲಿ ಇತ್ತೀಚೆಗೆ ಗದಗ ಜಿಲ್ಲಾ ಪ್ರಥಮ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು.  

ವಿಧಾನ ಪರಿಷತ್ ಸದಸ್ಯರಾದ ಪ್ರೊ.ಎಸ್ ವಿ ಸಂಕನೂರ ರವರು    ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಗಳು ಒಂದಕ್ಕೊಂದು ಬೆಸೆದುಕೊಂಡಿರುವ ಅವಿಭಾಜ್ಯ ಅಂಗಗಳಾಗಿವೆ. ಸಾಹಿತ್ಯವು ಸಮಾಜದ ಕನ್ನಡಿಯಾಗಿದ್ದು, ಇತಿಹಾಸ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಹಿತ್ಯದ ಪಾಠಗಳು ಮೌಲ್ಯವರ್ಧನೆ ಮತ್ತು ಸಾಂಸ್ಕೃತಿಕ ಅರಿವನ್ನು ಮೂಡಿಸುತ್ತವೆ. ಇಂತಹ ಅಧ್ಬುತ ಕಾರ್ಯಕ್ರಮ ಆಯೋಜಿಸಿರುವ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಕಾರ್ಯವು ಮಾದರಿ ಮತ್ತು ಶ್ಲಾಘನೀಯವಾಗಿದೆ ಎಂದು ನುಡಿದರು.  

ಸಂಘಟನಾ ಸಂಚಾಲಕರಾದ ಪಾಂಡು ಚವ್ಹಾಣ ರವರು ಮಾತನಾಡಿ ಬಾಬೂಜಿ" ಎಂದೇ ಜನಪ್ರಿಯರಾಗಿದ್ದ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುದಾರಕ  ಹಸಿರು ಕ್ರಾಂತಿಯ ಹರಿಕಾರ ಶ್ರೀ ಬಾಬು ಜಗಜೀವನ ರಾಮ ರವರ ಜಯಂತಿ  ನಿಮಿತ್ಯ ಹಾಗೂ ನಡೆದಾಡುವ ದೇವರುಸಿದ್ದೇಶ್ವರ ಶ್ರೀ ಗಳಿಗೆ ನುಡಿನಮನ  ಅರ​‍್ಿಸುವ ಪ್ರಯುಕ್ತ ಇಂದು ಗದಗ ಜಿಲ್ಲಾ ಪ್ರಥಮ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಸಮ್ಮೇಳನ ಆಯೋಜಿಸಲಾಗಿದೆ.     

ಹೆಣ್ಣುಮಕ್ಕಳ ಸರ್ವೋತ್ತೋಮುಕ ಏಳ್ಗೆಗಾಗಿ ಅವರಲ್ಲಿ ಆತ್ಮಸ್ಥರ್ಯವನ್ನು ಹೆಚ್ಚಿಸಲು ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ನಾಡಿನಾದ್ಯಂತ ಸರ್ಕಾರಿ ಸೇವೆ, ಕಲೆ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ  ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಿ ಅವರ  ಘನತೆ ಗೌರವ  ಹೆಚ್ಚಿಸುವ ಕಾರ್ಯವನ್ನು ಇಂದು ಪರಿಷತ್ ವತಿಯಿಂದ ನೆರವರೆಸಲಾಗುತ್ತಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯು ಪ್ರಕೃತಿಪ್ರೇಮ, ಮಾನವೀಯತೆ, ಮತ್ತು ಸಾಮಾಜಿಕ ಸುಧಾರಣೆಯನ್ನು ಎತ್ತಿಹಿಡಿಯುವ ಮೂಲಕ ಸಮಾಜಕ್ಕೆ ನಿರಂತರ ಮಾರ್ಗದರ್ಶನ ನೀಡುತ್ತಿದೆ. ಆಳವಾದ ಸಂಸ್ಕೃತಿ,  ಕಲೆ ,ಇತಿಹಾಸ ಪರಂಪರೆಯುಳ್ಳ ಕನ್ನಡ ಸಾಹಿತ್ಯವನ್ನು  ಹಾಗೂ ನಾಡಿನ ಸಂಸ್ಕೃತಿ ಉಳಿಸಲು ಈ ಸಮಾವೇಶ  ನಲ್ಲಿ ಕವಿಗೋಷ್ಠಿ  ಹಾಗೂ ಭಾವ ಬಿಂದು ಕಾವ್ಯ ಸಿಂಧು ಕವನ ಸಂಕಲನ  ಲೋಕಾರೆ​‍್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ವಿದ್ಯಾರ್ಥಿ,  ಯುವಜನತೆಗೆ ಪ್ರೇರಕದಾಯಕವಾದದ್ದು ಎಂದು ಪರಿಷತ್ ಕಾರ್ಯಗಳ ಕುರಿತು ಪ್ರಾಸ್ತಾವಿಕವಾಗಿ ನುಡಿದರು.   

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆರ್ ಎಸ್ ಬುರಡಿ ಮಾತನಾಡಿ ಹೆಣ್ಣು ಅಬಲೆಯಲ್ಲ, ಸಬಲೆ". ಇತಿಹಾಸದುದ್ದಕ್ಕೂ ಮಹಿಳೆಯರು ತಮ್ಮ ದೃಢಸಂಕಲ್ಪ ಮತ್ತು ಶಕ್ತಿಯಿಂದ ಸಮಾಜವನ್ನು ರೂಪಿಸುತ್ತಾ ಬಂದಿದ್ದಾರೆ. ಇಂದು ಶಿಕ್ಷಣ, ವ್ಯಾಪಾರ, ವಿಜ್ಞಾನ, ಕಲೆ, ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿದ್ದಾರೆ. ಮಹಿಳೆಯರ ಸಾಧನೆಯನ್ನು ಗುರುತಿಸಿ ರಾಜ್ಯ ಮಟ್ಟದ ಸಾಧಕ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಪರಿಷತ್ ಕಾರ್ಯ ಅಭಿನಂದಿಸುವಂತದ್ದು  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.    

ಮುಖ್ಯ ಅತಿಥಿಯಾಗಿ   ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ನಂದಾ ಹನಬರಟ್ಟಿ ಅವರು ಸಾಹಿತ್ಯವು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತದೆ. ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕ ಕಳಕಳಿ, ಮತ್ತು ಪ್ರಕೃತಿ ವಾತ್ಸಲ್ಯತೆಯ  ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿವೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯು ಬಲವಾದ ಐತಿಹಾಸಿಕ ಅಡಿಪಾಯದ ಮೇಲೆ ನಿಂತಿದ್ದು, ಇದು ನಿರಂತರವಾಗಿ ಬೆಳೆಯುತ್ತಿದೆ. ಇಂತಹ ಸಮಾವೇಶವನ್ನು ವಸತಿ ನಿಲಯದಲ್ಲಿ ಹಮ್ಮಿಕೊಂಡಿರುವುದರಿಂದ ವಿಧ್ಯಾರ್ಥಿಗಳ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪ್ರಯೋಜನವಾಗುತ್ತದೆ ಎಂದು ನುಡಿದರು.  ಭಾವ ಬಿಂದು ಕಾವ್ಯ ಸಿಂಧು"ಕವನ ಸಂಕಲನದ ಲೋಕಾರೆ​‍್ಣಯನ್ನು ಪರಿಷತ್ ಗೌರವ ಮಾರ್ಗದರ್ಶಕರಾದ ಶಾಂತಕುಮಾರ ಭಜಂತ್ರಿರವರು ನೆರವೇರಿಸಿದರು.  ಉಪನ್ಯಾಸಕರಾಗಿ  ಜಿ ಎಫ್ ಕಾಯಕದ ಅವರು ಮಹಿಳೆಯರು ಸಮಾಜದ ಬೆನ್ನೆಲುಬು, ಶಕ್ತಿ ಮತ್ತು ಪ್ರಗತಿಯ ಸಂಕೇತವಾಗಿದ್ದಾರೆ. ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ ಮತ್ತು ಕಾನೂನು ಅರಿವಿನ ಮೂಲಕ ಮಹಿಳಾ ಸಬಲೀಕರಣ ಸಾಧ್ಯ. ಬಾಲ್ಯವಿವಾಹ, ವರದಕ್ಷಿಣೆ, ಲೈಂಗಿಕ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಿ, ನಿರ್ಭಯವಾಗಿ ಬದುಕುವ ವಾತಾವರಣ ಸೃಷ್ಟಿಸುವುದು ಪ್ರತಿಯೊಬ್ಬ ಮಹಿಳೆಯರ ಕರ್ತವ್ಯವಾಗಿದೆ ಹೆಣ್ಣು ಮಕ್ಕಳು ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಎಂದು ಮಹಿಳೆಯರ ಕುರಿತು  ಉಪನ್ಯಾಸ  ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪರಿಷತ್ ಜಿಲ್ಲಾ ಅಧ್ಯಕ್ಷರು ಶ್ರೀಮತಿ ರತ್ನಾ ಗಿ ಬದಿ ಯವರು ಕರ್ನಾಟಕ ರಾಜ್ಯದ ಕಲೆ, ಸಾಹಿತ್ಯ , ಶಿಕ್ಷಣ ಮತ್ತು ಸಂಸ್ಕೃತಿಯನ್ನು ಪೋಷಿಸುವ, ಪ್ರಚಾರ ಮಾಡುವ ಮತ್ತು ಸಂರಕ್ಷಿಸುವ ಪ್ರಮುಖ ಕಾರ್ಯವನ್ನು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಪರಿಷತ್ ರಾಜ್ಯಾದ್ಯಂತ ಜನಪರ ಕೆಲಸಮಾಡುತ್ತಿದೆ ಎಂದು ಅಧ್ಯಕ್ಷತೆಯ ನುಡಿಗಳಾನ್ನಾಡಿದರು .  ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಡಾ ರಶ್ಮಿ ಅಂಗಡಿಯವರು ಸಾಹಿತ್ಯವನ್ನು ಉಳಿಸಿ ಬೆಳೆಸುವದಕ್ಕಾಗಿ ಕವಿಗೋಷ್ಠಿಗಳ ಕಾರ್ಯ ಉತ್ತಮವಾಗಿದೆಂದು ನುಡಿದರು. ಪರಿಷತ್ ಉಪಾಧ್ಯಕ್ಷರಾದ ಶ್ರೀಮತಿ ಕಲಾಶ್ರೀ ಹಾದಿಮನಿ ಅವರು  ವೇದಿಕೆಯಲ್ಲಿ  ಬಹುತೇಕ ಸಾಹಿತಿಗಳು, ಬರಹಗಾರರು, ಕವಿಗಳು  ಒಂದೆಡೆ ಸೇರಿ ಕವಿತೆ ಲೇಖನಿ ಮೂಲಕ ತಮ್ಮ ಅಭಿಪ್ರಾಯ ವಿಚಾರ ವ್ಯಕ್ತಪಡಿಸುವುದರಿಂದ ಸಾಹಿತ್ಯ  ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಆಶಯ ನುಡಿಗಳನ್ನಾಡಿದರು. ಕವಿಗಳಾದ   ನೀಲಮ್ಮ ಅಂಗಡಿ,  ಮಂಗಳಗೌರಿ ಹಿರೇಮಠ, ಆನಂದಕುಮಾರ್ ಟಿ ಮೇಗಡಿ, ಎಂ ಎಂ ನಿಂಬನಾಯ್ಕರ,  ಜ್ಯೋತಿ ಜವಳಿ,  ರೇಣುಕಾ ಬ ಜಗಂಡಭಾವಿ,  ರತ್ನವ್ವ ಯ ಬಬಲಿ ಕವನಗಳನ್ನು ವಾಚಿಸಿದರು. ರಾಜ್ಯ ಮಟ್ಟದ ಮಹಿಳಾ ಸಾಧಕ ರತ್ನ  ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಾದ ನಂದಾ ಹನಬರಟ್ಟಿ, ಶರಣಮ್ಮ ಕವಲೂರು, ಹುಲಿಗೆಮ್ಮ  ಜೋಗೇರ, ರಾಣಿ ಚೆಂದಾವರಿ, ಜಿ ಎಫ್ ಕಾಯಕದ, ಜಯದೇವಿ ಕವಲೂರು, ಇವರಿಗೆ ಹಾಗೂ ರಾಜ್ಯಮಟ್ಟದ ಸಾಂಸ್ಕೃತಿಕ ಸಿರಿ ಪ್ರಶಸ್ತಿಯನ್ನು  , ಸಾಹಿತ್ಯ, ಜಾನಪದ, ಸೇವೆ, ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆಗೈದ ಅಪ್ರತಿಮ ಸಾಧಕರಾದ ಪಾರ್ವತಿ ಸಜ್ಜನ್, ಪುಷ್ಪಾ ಬಿಸನಳ್ಳಿ, ಬಸವರಾಜ್ ಪೂಜಾರ, ಎಚ್  ಏಮ್ ದೇವಗಿರಿ, ಶಂಕರ ಲಮಾಣಿ, ಕೆ ಸಿ ನಬಾಪುರ, ವೆಂಕಟೇಶ್ ರಾಠೋಡ, ರತ್ನಾ ಬದಿ ಯವರೆಗೆ ಪ್ರಧಾನ ಮಾಡಿ ಗೌರವಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.  

ಕಾರ್ಯಕ್ರಮದ ನಿರೂಪಣೆಯನ್ನು ಎ.ವಿ ಪ್ರಭು, ಪ್ರಾರ್ಥನೆಯನ್ನು ಪದ್ಮಾ ಕಬಾಡಿ, ಸ್ವಾಗತವನ್ನು ವಿಶ್ವನಾಥ್ ಬೇಂದ್ರೆ,  ನುಡಿನಮನವನ್ನು ನಯನಾ ಚವ್ಹಾಣ, ಭರತನಾಟ್ಯ  ನೃತ್ಯವನ್ನು ವೈಷ್ಣವಿ ರಾಠೋಡ, ವಂದನಾರೆ​‍್ಣಯನ್ನು ಮಂಗಳಗೌರಿ ಹಿರೇಮಠ ರವರು ನೆರವೇರಿಸಿದರು. 

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಬಸವರಾಜ ಕಡೆಮನಿ ಮುಖಂಡರಾದ ಪ್ರೊ. ನೀಲು ರಾಠೋಡ, ಡಿ ಏಮ್ ಮ್ಯಾಗೇರಿ, ಸುಜಾತಾ ಪಾಟೀಲ, ಗೀತಾ ಸುಂಕದ,  ಸುನೀಲ್ ಸಾತಿ, ಹೊನ್ನಪ್ಪ ಪೂಜಾರ,   ಸುನೀಲ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.