ಆರ್ಥಿಕ ಸಂಕಷ್ಟದಲ್ಲಿ ಗದಗ ಬೆಟಗೇರಿ ವಾಲ್‌ಮನ್‌: ರಾಘವೇಂದ್ರ ಪಾಲನಕರ ವಿಷಾದ

ಆರ್ಥಿಕ ಸಂಕಷ್ಟದಲ್ಲಿ ಗದಗ ಬೆಟಗೇರಿ ವಾಲ್‌ಮನ್‌: ರಾಘವೇಂದ್ರ ಪಾಲನಕರ ವಿಷಾದ Gadag Betageri Walman in financial trouble: Raghavendra Palanakkar regrets

ಆರ್ಥಿಕ ಸಂಕಷ್ಟದಲ್ಲಿ ಗದಗ ಬೆಟಗೇರಿ ವಾಲ್‌ಮನ್‌: ರಾಘವೇಂದ್ರ ಪಾಲನಕರ ವಿಷಾದ

ಗದಗ 30: ಅವಳಿ ನಗರವಾದ ಗದಗ ಬೆಟಗೇರಿ ನಗರದಲ್ಲಿ ಸಮರ​‍್ಕ ನೀರಿನ ಪೂರೈಕೆಗೆ ಆದ್ಯತೆ ಇರಲಿ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಕೆ ಪಾಟೀಲ ಸೂಚನೆ ನೀಡಿರುವದು ಸಮಸ್ತ ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಸಂತಸದ ಸಂಗತಿಯಾಗಿರುತ್ತದೆ. ಪ್ರತಿ ಮೂರು ದಿನಕ್ಕೊಮ್ಮೆ ಪ್ರತಿ ಮನೆ ಮನೆಗೂ ನೀರು ಪೂರೈಕೆ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ಸೂಚನೆ ನೀಡಿರುವರು. ವಿನಾಕಾರಣ ನೀರಿನ ಅಪವ್ಯಯವನ್ನು ತಡೆದು ಅಗತ್ಯವಿರುವಲ್ಲಿ ನೀರು ಪೂರೈಕೆ ಮಾಡಲು ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು ಎಂದರು.                    

ಪ್ರತಿ ದಿನ ರಾತ್ರಿ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಟ್ಯಾಂಕುನಲ್ಲಿ ಸಂಗ್ರಹಿಸಿ, ಮುಂಜಾನೆ ವಾರ್ಡ್‌ ವಾರು ನೀರು ಪೂರೈಕೆಗೆ ವಾಲ್ ಮನ್‌ಗಳು ಮುಂದಾಗಬೇಕು. ನಗರಸಭೆಯಿಂದ ಸದ್ಯ ಕಾರ್ಯನಿರ್ವಹಿಸುತ್ತಿರುವ ವಾಲ್ಮಾನ್ ಗಳು ಸೂಪರ್ವೈಸರ್ಗಳನ್ನು ಬದಲಾವಣೆ ಮಾಡಬೇಕು. ಅವರಿಗೆ ಪ್ರತ್ಯೇಕ ಬೀದಿ, ವಾರ್ಡ್‌ ಗಳ ಮರುಹಂಚಿಕೆ ಮಾಡಿ ಸಮರ​‍್ಕ ನೀರು ಪೂರೈಕೆ ಇರುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಗರಸಭೆ ಪೌರಾಯುಕ್ತರು ಮುಂದಾಗಬೇಕು ಎಂದು ಸಚಿವರು ಸೂಚನೆ ನೀಡಿದರು.  

ಅಭದ್ರತೆಯ ಸುಳಿಯಲ್ಲಿ ವಾಲ್ ಮನ್‌ಗಳು:   ಆದರೆ ಕಳೆದ 15 ವರ್ಷಳಿಂದಲೂ ಹೆಚ್ಚಿನ ಅವಧಿಯಲ್ಲಿ ನಿರಂತರ ನಗರಸಭೆಯಲ್ಲಿ ಕುಡಿಯುವ ನೀರಿನ ವಿಭಾಗದಲ್ಲಿ ವಾಲ್ ಮನ್ ಗಳೆಂದು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಈ ಮೊದಲು 6000/- ನಿಗದಿತ ಮಾಸಿಕ ವೇತನ ನೀಡುತ್ತಿದ್ದರು ನಂತರ 9000/- ನೀಡಲು ಆರಂಭಸಿ ನಂತರ 13360/- ರೂಪಾಯಿ ಮಾಸಿಕವಾಗಿ ವೇತನ ನೀಡುತ್ತಿದ್ದರು ಆದರೆ ಇತ್ತೀಚಿಗೆ ಕಳೆದ 6 ತಿಂಗಳಿಂದ ವೇತನ ನೀಡದೇ ಇರುವುದು ಸಮಸ್ತ ಗುತ್ತಿಗೆ ಕಾರ್ಮಿಕರನ್ನು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ.  

ಕಾರಣ ಕೇಳಿದರೆ ಚಕ್ ಕೊಟ್ಟಿಲ್ಲ ಫೇಲ್ ಸಹಿ ಆಗಿಲ್ಲ ಎಂಬೆಲ್ಲ ಸಬೂಬು ಹೇಳುತ್ತಾ ದಿನ ಮೇಕ್ ಮಾಡುತ್ತಿರುವರು ಕಳೆದ ಆರು ತಿಂಗಳಿನಲ್ಲಿ ಕೇವಲ ಎರಡು ತಿಂಗಳು ವೇತನ ಮಾತ್ರ ಜಮಾ ಮಾಡಿರುವರು ಇದಲ್ಲದೇ ಬಿಸಿಲು ಮಳೆ ಎನ್ನದೇ ನಿರಂತರ ಕಾರ್ಯನಿರ್ವಹಿಸುವ ವಾಲ್ ಮನ್ ಗಳಿಗೆ ಅಗತ್ಯವಾದ ಹ್ಯಾಂಡ್ ಗೌಸ್, ಬೂಟು, ಪಾನಾ, ಪಕ್ಕಡ ಹಾಗೂ ಅಗತ್ಯ ಸುರಕ್ಷಾ ಸಾಮಗ್ರಿಗಳನ್ನು ಕೂಡಾ ಪೂರೈಸದೇ ನಿರಂತರ ದುಡಿಸಿಕೊಳ್ಳುವರು ಮೇಲಾಗಿ ಹೆಚ್ಚಾನು ಹೆಚ್ಚು ವಾಲ್ ಮನ್ ಕೆಲಸ ನಿರ್ವಹಣೆ ಮಾಡುವವರು ತಮ್ಮ ಕೆಲಸ ನಿರ್ವಹಿಸಿದ ಕುರಿತು ಜಿಪಿಎಸ್ ಫೋಟೋ ಸಹಿತವಾಗಿ ಮೇಲಾಧಿಕಾರಿಗಳಿಗೆ ಕಳಿಸಿದರೂ ಮತ್ತೇ ಡೈರಿ ಬರೆದು ಕೊಟ್ಟರೆ ಮಾತ್ರ ಹಾಜರಿ ನೀಡುತ್ತೇವೆ ಎನ್ನುವರು ಮೊದಲೇ ಅನಕ್ಷರಸ್ತರಾಗಿದ್ದು ಅವರಿಗೆ ತಾವು ಕೆಲಸ ನಿರ್ವಹಿಸಿದ ಕುರಿತು ದಿನಚರಿ ಡೈರಿ ಬರೆಯಿರಿ ಎಂದು ಕೇಳಿ ಅವರ ಕೆಲಸ ನಿರ್ವಹಿಸಿದರೂ ಗೈರ್ ಹಾಜರು ಬರೆದು ಕೊಳ್ಳುವುದರಿಂದ ಅವರಿಗೆ ಬರುವ ಸಂಬಳದಲ್ಲಿ ಕಡಿತ ಉಂಟಾಗುತ್ತದೆ. 

ವಾಲ್ ಮನ್ ಗಳ ಮೇಲಾಧಿಕಾರಿಗಳಾದ ಎಮ್ ಆರ್ ಎಮ್ ಎಜೇನ್ಸಿ ಹಾಗೂ ನಗರಸಭೆಯ ಮೇಲಾಧಿಕಾರಿ ಸಿದ್ದು ಹುಣಸಮರದ ರವರು ಈ ಒಂದು ವಾಲ್ ಮನ್ ಗುತ್ತಿಗೆ ಕಾರ್ಮಿಕರ ಕುರಿತು ತುಂಬಾ ದೌರ್ಜನ್ಯಕರವಾಗಿ ವರ್ತನೆ ಮಾಡಿರುವುದರಿಂದ ತುಂಬಾ ಆರ್ಥಿಕವಾಗಿ, ಸಾಮಾಜಿಕವಾಗಿ ಹಿನ್ನೆಡೆಯನ್ನು ಅನುಭವಿಸುವಂತಾಗಿರುತ್ತದೆ.