ಗದಗ: ಆ.೨೬ರಂದು ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ಧೂರಿ ಮೆರವಣಿಗೆ

ಗದಗ: ಆ.೨೬ರಂದು ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ಧೂರಿ ಮೆರವಣಿಗೆ Gadag: Grand procession of Goddesses Dyamavva and Sri Durgavva on August 26.

ಗದಗ, ಆ.೨೪: ಗದಗ-ಬೆಟಗೇರಿ ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ಧೂರಿ ಮೆರವಣಿಗೆ ಆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಿ ರಾತ್ರಿ ೮ರವರೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಓಕ್ಕಲಗೇರಿ ಓಣಿಯಿಂದ ಮೆರವಣಿಗೆಗೆ ಚಾಲನೆ ದೊರೆಯಲಿದೆ. ತವರಿನ ಮನೆಯಿಂದ ಗಂಡನ ಮನೆಗೆ ದೇವಿಯರನ್ನು ಬೀಳ್ಕೊಡುವ ಅದ್ಧೂರಿ ಕಾರ್ಯಕ್ರಮದ ಅಂಗವಾಗಿ ಗಂಜಿ ಬಸವೇಶ್ವರ ಸರ್ಕಲ್, ರಾಚೋಟೇಶ್ವರ ದೇವಸ್ಥಾನ, ಹನುಮಾನ್ ಗರಡಿ, ಚೌಡಿ ಕೂಟ, ಮಾಬುಸಬಾನಿ ಕಟ್ಟಿಮಾರ್ಗವಾಗಿ ಕಿಲ್ಲಾ ಓಣಿಯವರೆಗೆ ಮೆರವಣಿಗೆ ಸಾಗಲಿದೆ ಎಂದರು. 

ವ್ಯಾಪಾರಸ್ಥರ ಸಹಕಾರಕ್ಕೆ ಮನವಿ 

ಆ.೨೬ರಂದು ಕಿರಾಣಿ ಅಂಗಡಿಗಳು, ಹೋಟೆಲ್ಗಳು, ಸಲೂನ್ಗಳು ಸೇರಿದಂತೆ ಎಲ್ಲ ವ್ಯಾಪಾರಸ್ಥರು ತಮ್ಮ ದೈನಂದಿನ ವ್ಯಾಪಾರ-ವಹಿವಾಟನ್ನು ಬದಿಗಿಟ್ಟು ದೇವಿಯರ ಮೆರವಣಿಗೆ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. 

ಮೆರವಣಿಗೆಯಲ್ಲಿ ದೇವಿಯರನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಇದು ಸುವರ್ಣಾವಕಾಶವಾಗಿದ್ದು, ಯಾವುದೇ ಒತ್ತಾಯವಿಲ್ಲದೆ ಸ್ವಯಂಪ್ರೇರಿತವಾಗಿ ಹಾಗೂ ಭಕ್ತಿಪೂರ್ವಕವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು. 

ಬಂಡಾರದ ಜಾತ್ರೆಗೆ ವಿಶೇಷ ಮೆರುಗು 

ಈ ಬಾರಿ ವಿಶೇಷವಾಗಿ ಬಂಡಾರದ ಜಾತ್ರೆ ನಡೆಯಲಿದ್ದು, ಭಕ್ತರು ನೀಡಿರುವ ೧೫ ಟನ್ ಬಂಡಾರದಿAದ ಸಂಭ್ರಮ ಹೆಚ್ಚಲಿದೆ. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. 

ಅವಳಿ ನಗರದ ವಿವಿಧ ದೇವಸ್ಥಾನಗಳ ಅರ್ಚಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯಲ್ಲಿ ೧೦೮ ಡೊಳ್ಳುಗಳು, ೫ರಿಂದ ೬ ಸಮ್ಮೇಳನ ತಂಡಗಳು, ಆನೆ, ಒಂಟೆ, ಕುದುರೆ, ವಿವಿಧ ವೇಷಧಾರಿಗಳು ಹಾಗೂ ಚಂಡಿ ವಾದ್ಯಗಳ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು. 

ಆ.೨೮ರಂದು ಸಾಂಸ್ಕöÈತಿಕ ಕಾರ್ಯಕ್ರಮಗಳು 

ಕಿಲ್ಲಾ ಓಣಿಯಲ್ಲಿ ಆ.೨೮ರಂದು ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ಓಕ್ಕಲಗೇರಿ ಹಾಗೂ ಕಿಲ್ಲಾ ಓಣಿಯ ಬೀಗರೆಲ್ಲರ ಸಮಾಗಮ ನಡೆಯಲಿದ್ದು, ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವೂ ನೆರವೇರಲಿದೆ. 

ನಾಡಿನಾದ್ಯಂತದಿAದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ರಾಜು ಖಾನಪ್ಪನವರ ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಶ್ರೀಧರ ವಜ್ರಬಂಡಿ, ವೀರಣ್ಣ ಮೇಟಿ, ನವೀನ ನಾಲವಾಡ, ನರಸಪ್ಪ ತುಕ್ಕಪ್ಪನವರ, ಗಂಗಾಧರ ಮೇಲಗೇರಿ, ಹೇಮಂತ್ ಗಿಡ್ಡಹನುಮಣ್ಣನವರ, ನಾಗರಾಜ ಮೇಣಸಗಿ, ಕಿರಣ್ ಕಮತರ, ಮಹೇಶ್ ಪಡಗದ, ಬಸವರಾಜ ಮಡಿವಾಳರ, ಮಲ್ಲು ಮಹಾಂತಶೆಟ್ಟರ ಸೇರಿದಂತೆ ಹಲವರು ಉಪಸ್ಥಿತರಿದ್ದರು.