ಕೊಪ್ಪಳ 07: ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿಗೆ ಮಾ. 07ರಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ರಘುನಂದನ್ ರವರು ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಲ್ಲಿ ಇನ್ನೂ ನಿರ್ಮಾಣ ಮಾಡಬೇಕಾಗಿರುವ ವೈಯಕ್ತಿಕ ಶೌಚಾಲಯದ ಪ್ರಗತಿಯನ್ನು ಗ್ರಾಮಗಳಲ್ಲಿ ವಿವಿಧ ಬಡಾವಣೆಯಲ್ಲಿ ಸಂಚರಿಸಿ ಪ್ರಗತಿಯನ್ನು ವೀಕ್ಷಿಸಿದರು. ಎನ್ಒಎಲ್ಬಿ ಅಡಿಯಲ್ಲಿ ಇನ್ನೂ ನಿಮರ್ಿಸಿಕೊಳ್ಳಬೇಕಾದ ವೈಯಕ್ತಿಕ ಶೌಚಾಲಯಗಳನ್ನು ಶೀಘ್ರವಾಗಿ ನಿರ್ಮಿಸಿ ಪ್ರಗತಿ ಸಾಧಿಸಲು ಸೂಚಿಸಿದರು. ಸಂಚರಿಸಿದ ಬಡಾವಣೆಯಲ್ಲಿ ಪ್ರಗತಿಯಾಗಿರುವ ಹಾಗೂ ಉಪಯೋಗದಲ್ಲಿರುವ ವೈಯಕ್ತಿಕ ಶೌಚಾಲಯಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಕೊಪ್ಪಳ ತಾಲೂಕಿನಲ್ಲಿ ಎನ್ಒಎಲ್ಬಿ ಗುರಿ 1746 ಇದ್ದು, ಈಗಾಗಲೇ 191 ವೈಯಕ್ತಿಕ ಶೌಚಾಲಯ ನಿರ್ಮಾಣವಾಗಿದ್ದು ಇನ್ನೂಳಿದ ಶೌಚಾಲಯಗಳು ಪ್ರಗತಿಯಲ್ಲಿದ್ದು, ಶೌಚಾಲಯ ಕಾಮಗಾರಿಗಳನ್ನು ಮಾರ್ಚ್ 10 ರೊಳಗೆ ಮುಕ್ತಾಯಗೊಳಿಸಲು ಸೂಚಿಸಿದರು. ಹಾಗೂ ವಸತಿ ಯೋಜನೆಯ ವಿಜಿಲ್ ಆಪ್ ಮೂಲಕ ಜಿಪಿಎಸ್ ಮಾಡುವ ಪ್ರಗತಿಯನ್ನು ಫಲಾನುಭವಿಯ ಮನೆಗೆ ಬೇಟಿ ನೀಡಿ ಪರಿಶೀಲಿಸಿದರು, ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಇನ್ನೂ ಬಾಕಿ ಇರುವ ಜಿಪಿಎಸ್ ಪೋಟೋಗಳನ್ನು ತಕ್ಷಣವೇ ಮುಕ್ತಾಯ ಮಾಡಲು ಸೂಚಿಸಿದರು. ಹಾಗೂ ಇನ್ನಿತರ ಯೋಜನೆಗಳ ಕಾಮಗಾರಿಗಳನ್ನು ಸಹ ವೀಕ್ಷಿಸಿ ಚುನಾಯಿತ ಪ್ರತಿನಿಧಿಗಳು ಸಲ್ಲಿಸಿದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ಕೆ. ತೊರವಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ ಸೇರಿದಂತೆ ಬೆಟಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಗ್ರಾಪಂ ಸದಸ್ಯರು ಮತ್ತು ತಾ.ಪಂ. ಸಹಾಯಕ ನಿರ್ದೇಶಕರು (ಗ್ರಾಉ), ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.