ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ -19ರಲ್ಲಿ ಜಿಐಟಿಗೆ ಪ್ರಥಮ ಸ್ಥಾನ

ಲೋಕದರ್ಶನ ವರದಿ

ಬೆಳಗಾವಿ, 15: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ವೈಷ್ಣವಿ ಹರಿಕಾಂತ, ಅಪಣರ್ಾ ಮನೋಹರ್, ಅಮಿತ್ ಹಣ್ಣಿಕೇರಿ, ರಾಹುಲ್ ಮಹೇಂದ್ರಕರ್, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕಣರ್ಿ ಒಳಗೊಂಡ "ಟೆಕ್ ಫನಾಟಿಕ್ ತಂಡವು ರಾಷ್ಟ್ರದಾದ್ಯಂತ ನಡೆದ ಪ್ರತಿಷ್ಠಿತ ವಿಶ್ವದ ಅತ್ಯಂತ ದೊಡ್ಡ ಹ್ಯಾಕಥಾನ್ ಸ್ಪರ್ಧೆ  "ಸ್ಮಾರ್ಟ್ ಇಂಡಿಯಾ ಹ್ಯಾಕಥನ್ -19"  ಪ್ರಥಮ ಸ್ಥಾನದ ಜೊತೆಗೆ 1,00,000 ರೂ ಗಳ ನಗದು ಬಹುಮಾನವನ್ನು ಪಡೆದುಕೊಂಡಿದೆ. ಈ ತಂಡವು ಹೆಸರಾಂತ ಸ್ಯಾಮ್ ಸಂಗ್ ಕಂಪನಿಯ ಆರ್ & ಡಿ ನೀಡಿದ್ದ ತಾಂತ್ರಿಕ ಯೋಜನೆ "ಈಕೋ  ಡ್ರೈವ್  ಗೋಲ್ -ರೆಡ್ಯೂಸ್  ಕಾರ್ಬನ್  ಫುಟ್ ಪ್ರಿಂಟ್ ಆಫ್ ದಿ  ಟ್ರಾವೆಲ್  ಪ್ರಪೋಸಲ್  ಬೈ  ಬಿಲ್ಡಿಂಗ್  ಎ ಸ್ಮಾಟರ್್ ಫೋನ್  ಆಪ್  ದ್ಯಾಟ್  ಹೆಲ್ಫ್ಸ್  ಯು  ಟು  ಕಾರ್, ಬೈಕ್  ಪೂಲ್ " ಅಡಿಯಲ್ಲಿ ಕೆಲಸ ಮಾಡಿದೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ -19 ಇದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಪ್ರತಿ ವರ್ಷ ಭಾರತ ಸರ್ಕಾ ರ ಆಯೋಜಿಸುವ ಒಂದು ದಿನದ ನಿರಂತರ ಸ್ಪರ್ಧೆ ಯಾಗಿದ್ದು ಇದರಲ್ಲಿ ತಂತ್ರಜ್ಞಾನ, ಎಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ನವೀನ, ಸ್ಮಾರ್ಟ್  ಪರಿಹಾರಗಳಿಗಾಗಿ ಸಮಸ್ಯೆಗಳನ್ನು ನೀಡಲಾಗುತ್ತದೆ. 2019 ರಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಥಾನ್ 2 ಉಪ ಆವೃತ್ತಿಗಳನ್ನು ಹೊಂದಿತ್ತು - ಸಾಫ್ಟ್ ವೆರ್ ಮತ್ತು ಯಂತ್ರಾಂಶ (ಹಾರ್ಡ್  ವೆರ್). ಸಾಫ್ಟ್ ವೆರ್ ಇಂಡಿಯಾ ಆವೃತ್ತಿಯು 36 ಗಂಟೆಗಳ ಸಾಫ್ಟ್ ವೆರ್ ಅಭಿವೃದ್ಧಿ ಸ್ಪರ್ಧೆ ಯಾಗಿದ್ದು, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2017 ಮತ್ತು 18 ರ ಪರಿಕಲ್ಪನೆಯಂತೆಯೇ ಆಯೋಜಿಸಲಾಗಿತ್ತು. 45 ಕ್ಕಿಂತ ಹೆಚ್ಚು  ಕೇಂದ್ರ ಸಕರ್ಾರದ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾ ರಗಳು ಮತ್ತು ಸರ್ಕಾ ರೀ ಸ್ವಾಮ್ಯದ ಹಲವು ಸಾರ್ವಜನಿಕ ವಲಯದ ಕಂಪನಿಗಳು ಹಾಗೂ ಹೆಸರಾಂತ ಬಹುರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿ ಗಳಿಗೆ ತಾಂತ್ರಿಕ ಸವಾಲು, ಸಮಸ್ಯೆ, ಯೋಜನೆಗಳನ್ನು ನೀಡಲಾಗಿತ್ತು. ಇದರಲ್ಲಿ ಹಿಂದಿನ ಆವೃತ್ತಿಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಈ ಬಾರಿ ಒಟ್ಟು   550ಕ್ಕಿಂತ ಹೆಚ್ಚು ತಾಂತ್ರಿಕ ಸವಾಲು, ಸಮಸ್ಯೆ, ಯೋಜನೆಗಳನ್ನು ವ್ಯಖ್ಯಾನ ಮಾಡಲಾಗಿತ್ತು, ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಿಂದ 34,000 ಕ್ಕಿಂತ ಹೆಚ್ಚಿನ ವಿದ್ಯಾಥರ್ಿಗಳ ತಂಡಗಳು ಭಾಗವಹಿಸಿ ತಾಂತ್ರಿಕ ಪರಿಹಾರಗಳನ್ನೂ ಸಾಫ್ಟ್ ವೆರ್ ರೂಪದಲ್ಲಿ   57000 ಕ್ಕಿಂತ ಹೆಚ್ಚು ಪರಿಹಾರಗಳನ್ನು ಆಯ್ಕೆ ಸುತ್ತಿನಲ್ಲಿ ನೀಡಿದ್ದರು. ಕಠಿಣ ಮೌಲ್ಯಮಾಪನದ ನಂತರ ರಾಷ್ಟ್ರದಾದ್ಯಂತ ಕೇವಲ 1500 ತಂಡಗಳನ್ನು ರಾಷ್ಟ್ರ ಮಟ್ಟದ ಪ್ರಶಸ್ತಿ ಸುತ್ತಿಗೆ ಆಯ್ಕೆ ಮಾಡಲಾಯಿತು. 

  ಸೃಷ್ಠಿ ಪಾಟೀಲ್, ಸಿಂಚನ ಶಾನಭಾಗ, ನಿಶಾ ಪುರಿ, ಮೇಘಾನಾ ಜಿ, ನಿತಿನ್ ಭೂಯ್ಯರ್, ಎಂ ಶೋಹೆಬ್ ಮೇಟಿ , ಸ್ಫೂತರ್ಿ ಕಾಳೆ, ಶಿವಾನಿ ಹಂದಿಗೋಲ್, ಶಾಹೀನ್ ಹವಾಲ್ದಾರ್, ಸಂಜೀದ ಗುಂಡಕ್ಕಲ್ಲಿ, ಚೈತ್ರಾಲಿ ಕುಲಕರ್ಣಿ, ಸುಧರಾಣಿ ಪಾಟೀಲ್, ಸುಧಾಂಶು ಶೇಖರ್, ಶುಭಮ ದೇಶಪಾಂಡೆ, ಶ್ರೀಲಕ್ಷ್ಮಿ ದೇಸಾಯಿ, ಸಿಂಚನ ಶೆಟ್ಟಿ, ಶಿವಾನಿ ಪಾಟೀಲ್, ಸ್ನೇಹ ಔದುಗೌಡರ್, ವೈಷ್ಣವಿ ಹರಿಕಾಂತ, ಅಪಣರ್ಾ ಮನೋಹರ್, ಅಮಿತ್ ಹಣ್ಣಿಕೇರಿ, ರಾಹುಲ್ ಮಹೇಂದ್ರಕರ್, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕಣರ್ಿ ಸೇರಿದಂತೆ 25 ಜಿ ಐ ಟಿ ವಿದ್ಯಾರ್ಥಿ ಗಳನ್ನ ಒಳಗೊಂಡ ನಾಲ್ಕು ತಂಡಗಳು ಫೈನಲ್ ಸುತ್ತಿಗೆ ಅರ್ಹತೆ ಪಡೆದು ಆಯ್ಕೆಯಾಗಿದ್ದವು. ಇದರಲ್ಲಿ ಒಂದು ತಂಡ ಪ್ರಥಮ ಸ್ಥಾನವನ್ನು ಪಡೆಯುದರ ಜೊತೆಗೆ ಒಂದು ಲಕ್ಷ ರೂ ಗಳ ನಗದು ಬಹುಮಾನವನ್ನು ಪಡೆದುಕೊಂಡಿತು. ಉಳಿದ ತಂಡಗಳು ನಿಣರ್ಾಯಕರ ವಿಶೇಷ ಪ್ರಶಂಸೆಗೆ ಒಳಪಟ್ಟವು. ಕಳೆದ ಬಾರಿ ಜಿ ಐ ಟಿ ಯ ಎರಡು ತಂಡಗಳು ಬೇರೆ ಕ್ಷೇತ್ರದಲ್ಲಿ ಪ್ರಥಮ ಸ್ಥಾನವನ್ನು ಪಡೆದೊಕೊಡಿದ್ದವು. ಈ ತಂಡಗಳಿಗೆ  ಡಾ. ಸಂತೋಷ್ ಸರಾಫ್, ಪ್ರೊ. ಗಜೇಂದ್ರ ದೇಶಪಾಂಡೆ, ಪ್ರೊ. ರಾಹುಲ ಕುಲಕಣರ್ಿ, ಆನಂದ್ ದೇಶಪಾಂಡೆ, ಡಾ.ವಿನೀತ್ ಕುಲಕಣರ್ಿ, ಪ್ರೊ. ಅಜಯ್ ಆಚಾರ್ಯ, ಆರ್. ತ್ಯಾಗಿ, ವೀಣಾ ಮಾವರ್ಕರ್, ಪ್ರೊ. ಮಂಜುಳ ರಾಮಣ್ಣವರ್ ಮತ್ತು ಪ್ರೊ.ವೈದೇಹಿ ದೇಶಪಾಂಡೆ ಮಾರ್ಗದರ್ಶನ ನೀಡಿದ್ದರು. 

ಭಾರತ ಸಕರ್ಾರವು  ಭಾರತದ ಅನೇಕ ಕ್ಷೇತ್ರಗಳ ಯೋಜನೆಗಳಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಇರುವ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಈ ಮಹತ್ವದ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಇದರಲ್ಲಿ ಅರ್ಥಪೂರ್ಣ ಮತ್ತು ಗೆದ್ದ ಕಲ್ಪನೆಗಳು ಭಾರತ ಸಕರ್ಾರದ ವಿವಿಧ ಮಂತ್ರಾಲಯಗಳ ಜೊತೆ ಮತ್ತು ಖಾಸಗಿ ಕಂಪನಿಗಳ ಜೊತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸೇವೆಸಲ್ಲಿಸಲು ಅವಕಾಶವಿದೆ ಮತ್ತು ಅದರ ಮೇಲೆಯೇ ತಮ್ಮದೇ ಆದ ಒಂದು ಸ್ಟಾಟರ್್ ಅಪ್ ಸಂಸ್ಥೆಯನ್ನು ಪ್ರಾರಂಭಿಸಲು ಸಹಾಯವಾಗುತ್ತದೆ. 

ಈ ಸಾಧನೆಗೆ ಕೆಎಲ್ಎಸ್  ಸಂಸ್ಥೆಯ  ಕಾರ್ಯಧ್ಯಕ್ಷರಾದ  ಎಂ. ಆರ್. ಕುಲಕರ್ಣಿ , ಯು. ಏನ್. ಕಾಲಕುಂದ್ರಿಕರ್ ಅಧ್ಯಕ್ಷರು, ಜಿ ಐ ಟಿ ಆಡಳಿತ ಮಂಡಳಿ , ಪ್ರಾಂಶುಪಾಲರಾದ ಡಾ.ಎ. ಎಸ. ದೇಶಪಾಂಡೆ. ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ  ವರ್ಗ  ವಿದ್ಯಾಥರ್ಿಗಳನ್ನು ಅಭಿನಂದಿಸಿದ್ದಾರೆ.