ಉತ್ತರಪ್ರದೇಶ: ನಾಳೆ ಜನಿಸುವ ಹೆಣ್ಣು ಶಿಶುವಿಗೆ ವಸ್ತ್ರ ವಿತರಣೆ

ಲಖನೌ, ಮಾ 07, ಉತ್ತರ ಪ್ರದೇಶ ಸರ್ಕಾರವು ಮಹಿಳಾ ದಿನದ ಅಂಗವಾಗಿ ರಾಜ್ಯದ ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಮುಖ್ಯಮಂತ್ರಿ ಆರೋಗ್ಯ ಮೇಳನವ್ನು ಮಹಿಳೆಯರಿಗೆ ಅರ್ಪಿಸುವುದಾಗಿ ಘೋಷಿಸಿದೆ.  ನಾಳೆ ನಡೆಯುವ ಅರೋಗ್ಯ ಮೇಳಗಳಲ್ಲಿ ರಾಜ್ಯದ ಸಚಿವರು ಹಾಗೂ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ನಾಳೆ ಮಾರ್ಚ್ 8ರಂದು ಜನಿಸುವ ಹೆಣ್ಣು ಶಿಶುವಿಗೆ ವಸ್ತ ಹಾಗೂ ಆಹಾರ ಪೂರಕಗಳನ್ನು ವಿತರಿಸಲಾಗುವುದು. ಅಂದು  ಹೆಣ್ಣು ಶಿಶುವಿಗೆ ಜನ್ಮವಿತ್ತ ತಾಯಂದಿರನ್ನೂ ಸನ್ಮಾನಿಸಲಾಗುವುದು ಎಂದು ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.  ಮಹಿಳೆಯರ ಆರೋಗ್ಯಕ್ಕ ಒತ್ತು ನೀಡಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಂದ ಮಹಿಳಾ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.