ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಶಿವರಾತ್ರಿ ಹಬ್ಬದಂದು ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆಗೆ ವ್ಯಾಪಕ ಸಿದ್ಥತೆ

ಬೆಂಗಳೂರು, ಫೆ 19, ಮಹಾ ಶಿವರಾತ್ರಿಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಫೆ. 21 ರಂದು ರಾಜ್ಯದ ಎಲ್ಲಾ ಶಿವನ ದೇವಾಲಯಗಳಲ್ಲಿಗಂಗಾಜಲ ವಿತರಣೆಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ.  ಹನುಮಂತನಗರದ ಗವಿ ಗಂಗಾಧರೇಶ್ವರ ದೇವಸ್ಥಾನದಬಳಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಹಷರ್ಿ ಆನಂದ್ ಗುರೂಜಿ ಗಂಗಾಜಲ ಹೊತ್ತ ವಾಹನಗಳಿಗೆ ಗಂಗಾ ಪೂಜೆಮಾಡುವ ಮೂಲಕ ವಿಧ್ಯುಕ್ತವಾಗಿ ಬೀಳ್ಕೊಟ್ಟರು.  ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ  12ನೇ ವರ್ಷದ ಕಾರ್ಯಕ್ರಮದಡಿ 40 ಸಾವಿರ ಲೀಟರ್ ಪವಿತ್ರ ಗಂಗಾಜಲವನ್ನು ರಾಜ್ಯದ ಎಲ್ಲಾಜಿಲ್ಲೆಗಳ ಮುಜರಾಯಿದೇವಸ್ಥಾನಗಳಿಗೆ  ವಿತರಣೆ ಮಾಡಲಾಗುತ್ತಿದೆ.  ರಾಜ್ಯದ ಪ್ರಮುಖ 3 ಸಾವಿರ ಪುರಾತನ ಈಶ್ವರ ದೇವಸ್ಥಾನಗಳಲ್ಲಿಶಿವರಾತ್ರಿಯಂದು ಆಗಮಿಸುವ ಭಕ್ತಾಧಿಗಳಿಗೆ ಗಂಗಾಜಲ ವಿತರಿಸಲಾಗುತ್ತಿದೆ. ಹತ್ತು ಲೀಟರ್ ಗಂಗಾಜಲ ಹೊಂದಿರುವ ಎರಡು ಸಾವಿರ ಕ್ಯಾನ್ ಗಳು ಮತ್ತು ಸುಮಾರು 1.25 ಲಕ್ಷ ಸಣ್ಣ ಸಣ್ಣ ಬಾಟೆಲ್ ಗಳಲ್ಲಿ ಗಂಗಾಜಲ ತುಂಬಿ ದೇವಸ್ಥಾನಗಳಿಗೆಹಸ್ತಾಂತರ ಮಾಡಲಾಗತ್ತಿದೆ.  

 ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಯ್ಯ ಶೆಟ್ಟಿ, ಇಲ್ಲಿಂದ ಹೊರಡುವ ವಾಹನಗಳು ನೇರವಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಕಚೇರಿಗೆ ತಲುಪುತ್ತವೆ. ಅಲ್ಲಿಂದ ಮುಜರಾಯಿ ದೇವಸ್ಥಾನಗಳಿಗೆ ಗಂಗಾಜಕಲ ವಿತರಣೆಯಾಗಲಿದೆ.ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.  ಹರಿದ್ವಾರದ ಬ್ರಹ್ಮ ಕುಂಡ ಬಳಿಯಿಂದಗಂಗಾ ಜಲ ತರಲಾಗಿದೆ. 30 ರಿಂದ 40 ಜನರ ತಂಡ ಗಂಗಾ ಜಲವನ್ನು ಟ್ಯಾಂಕರ್ ಗಳ ಮೂಲಕ ತಂದಿದೆ. ಮೂರುದಿನಗಳ ಪ್ರಯಾಣದ ನಂತರ ಗಂಗಾಜಲ ಹರಿದ್ವಾರದಿಂದ ನಗರಕ್ಕೆ ಬಂದಿದೆ. ಇದಕ್ಕಾಗಿ ಕಳೆದ ಹತ್ತು ದಿನಗಳಿಂದತಯಾರಿ ನಡೆಯುತ್ತಿದೆ ಎಂದರು. ತಾವು ಮಂತ್ರಿಯಾಗಿದ್ದಾಗ 12 ವರ್ಷಗಳಹಿಂದೆ ಆರಂಭಿಸಿದ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಗಂಗಾಜಲ ಶಿವನಿಗೆಪ್ರಿಯವಾಗಿದ್ದು,ಇದರಿಂದ ನಾಡಿನ ಜನರಿಗೆ ಒಳ್ಳೆಯದಾಗಲಿ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮ ವನ್ನುಯಶಸ್ವಿಯಾಗಿ ನಡೆಸುತ್ತಿದ್ದೇನೆ. ಇದರ ಜತೆಗೆ ವೈಕುಂಠ ಏಕಾದಶಿಗೆ ಲಾಡು ಹಂಚುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಎರಡು ಧಾಮರ್ಿಕ ಕಾರ್ಯಕ್ರಮಗಳುತಮಗೆ ಅತೀವ ಆತ್ಮ ತೃಪ್ತಿ ನೀಡಿವೆ ಎಂದರು.