ಜಿ 7 ಶೃಂಗಸಭೆ ಆರಂಭಿಕ ಮಾತುಕತೆ: ಟ್ರಂಪ್ ಸಂತಸ

ವಾಷಿಂಗ್ಟನ್, ಆಗಸ್ಟ್ 25     ಫ್ರೆಂಚ್ ನಗರ ಬಿಯರಿಟ್ಜ್ನಲ್ಲಿ ನಡೆಯುತ್ತಿರುವ  ಜಿ 7 ಶೃಂಗಸಭೆಯ ಮೊದಲ ದಿನದ ಮಾತುಕತೆಯಲ್ಲಿ  ಉತ್ತಮ ಪ್ರಗತಿ ಕಂಡು ಬಂದಿದೆ ಎಂದು  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಸಂತಸ ವ್ಯಕ್ತಪಡಿಸಿದ್ದಾರೆ.  ಫ್ರಾನ್ಸ್  ಅಧ್ಯಕ್ಷ-ಎಮ್ಯಾನುಯೆಲ್ ಮ್ಯಾಕ್ರೋನ್ ಅವರು  ಜಿ -7 ಸಭೆ ಆಯೋಜನೆ ಕುರಿತು  ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ವಿಶ್ವ ನಾಯಕರೊಂದಿಗೂ ಸಭೆ ಬಹಳ ಚೆನ್ನಾಗಿ ನಡೆದಿದ್ದು  ಪ್ರಗತಿ ಸಾಧಿಸಲಾಗುತ್ತಿದೆ ಎಂದು  ಟ್ರಂಪ್ ಟ್ವಿಟ್ ಮಾಡಿದ್ದಾರೆ .  ಶೃಂಗಸಭೆಯ ಮೊದಲು, ಫ್ರೆಂಚ್ ಅಧ್ಯಕ್ಷರು ಟ್ರಂಪ್ರನ್ನು ಬೋಜನ ಕೂಟಕ್ಕೆ ಆಹ್ವಾನಿಸಿದರು, ಈ ಸಂದರ್ಭದಲ್ಲಿ ಪಕ್ಷಗಳು ವ್ಯಾಪಾರ, ಪರ್ಷಿಯನ್ ಕೊಲ್ಲಿಯಲ್ಲಿ ಉದ್ವಿಗ್ನತೆ, ಲಿಬಿಯಾ ಮತ್ತು ಇರಾನ್ನ ಪರಿಸ್ಥಿತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿರುವುದಾಗಿ ಅವರು ಹೇಳಿದರು.  ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆ ನೈರುತ್ಯ  ಫ್ರಾನ್ಸ್ನ ಬಿಯರಿಟ್ಜ್ ನಗರದಲ್ಲಿ ಆರಂಭವಾಗಿದೆ. ಈ ಸಭೆಗೆ  ಭದ್ರತೆ ಒದಗಿಸಲು  13,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.