ಲಂಡನ್, ಆ 24 ಜಿ 7 ಶೃಂಸಭೆ ಹಿನ್ನೆಲೆಯಲ್ಲಿ ವಿದೇಶಿ ನೀತಿ ಮತ್ತು ಜಾಗತಿಕ ವ್ಯಾಪಾರ ವಿಷಯಗಳ ಕುರಿತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಫ್ರಾನ್ಸ್ ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಹೆಚ್ಚಿನ ಚರ್ಚೆ ನಿರೀಕ್ಷಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ. ಜಾನ್ಸ್ ನ್ ಬ್ರಿಟನ್ ಪ್ರಧಾನಿ ಆದ ನಂತರ ಇದು ಅವರ ಮೊದಲ ಸಭೆ. ಅಕ್ಟೋಬರ್ 31 ರ ಬ್ರೆಕ್ಸಿಟ್ ಗಡುವಿಗೆ ಎರಡು ತಿಂಗಳು ಇರುವಂತೆ ಜಿ 7 ಶೃಂಗಸಭೆ ನಡೆಯಲಿದೆ. ಬ್ರುಸೆಲ್ಸ್ ನೊಂದಿಗೆ ಹೊಸ ಬ್ರೆಕ್ಸಿಟ್ ಒಪ್ಪಂದ ನಡೆಯುವುದೋ, ಇಲ್ಲವೋ ಗಡುವಿನೊಳಗೆ ಯೂರೋಪಿಯನ್ ಒಕ್ಕೂಟ ತೊರೆಯಲಾಗುವುದು ಎಂದು ಜಾನ್ಸನ್ ತಿಳಿಸಿದ್ದಾರೆ.