ಜಪಾನ್ನ ನಾಗೊಯಾ ಪಟ್ಟಣದಲ್ಲಿ ಇಂದಿನಿಂದ ಜಿ 20 ವಿದೇಶಾಂಗ ಸಚಿವರ ಸಭೆ

ನಗೊಯಾ, .22 ಜಪಾನ್ನ ನಾಗೊಯಾ ನಗರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿ-20 ವಿದೇಶಾಂಗ ಸಚಿವರ ಸಭೆ ಆರಂಭಗೊಳ್ಳಲಿದೆ. ಮುಕ್ತ ವ್ಯಾಪಾರ ಮತ್ತು ಜಾಗತಿಕ ಆಡಳಿತದ , ಸುಸ್ಥಿರ ಅಭಿವೃದ್ಧಿಗಾಗಿ 2030 ರ ಕಾರ್ಯಸೂಚಿಯ ಅನುಷ್ಠಾನ (ಸುಸ್ಥಿರ ಅಭಿವೃದ್ಧಿ ಗುರಿಗಳು) ಮತ್ತು ಆಫ್ರಿಕಾದ ಅಭಿವೃದ್ಧಿಗೆ ಉತ್ತೇಜನ ಈ ಸಭೆಯ ಗುರಿಯಾಗಿದೆ. ಮಾತುಕತೆಯಲ್ಲಿ ಗ್ರೂಪ್ ಆಫ್ ಟ್ವೆಂಟಿಯ ರಾಷ್ಟ್ರಗಳ ಉನ್ನತ ರಾಜತಾಂತ್ರಿಕರು ಭಾಗವಹಿಸಲಿದ್ದಾರೆ, ಜೊತೆಗೆ ಸ್ಪೇನ್, ಚಿಲಿ, ಈಜಿಪ್ಟ್, ನೆದಾಲ್ರ್ಯಂಡ್ಸ್, ನ್ಯೂಜಿಲೆಂಡ್, ಸೆನೆಗಲ್, ಥೈಲ್ಯಾಂಡ್ ಸಿಂಗಾಪುರ್ ಮತ್ತು ವಿಯೆಟ್ನಾಂ ಸೇರಿದಂತೆ ಆಹ್ವಾನಿತ ರಾಷ್ಟ್ರಗಳು ಭಾಗವಹಿಸಲಿವೆ. ವಿದೇಶಾಂಗ ಸಚಿವರ ಸಭೆ ಜಪಾನಿನ ಜಿ 20 ಅಧ್ಯಕ್ಷತೆಯಲ್ಲಿ ನಡೆಯುವ ಮಂತ್ರಿಮಂಡಲದ ಕೊನೆಯ ಕಾರ್ಯಕ್ರಮವಾಗಿದೆ.