ಕಾರವಾರ,೧೬: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳ ಹಳ್ಳಿಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಅಭಾವ ಮತ್ತು ಜಿ.ಪಂ. , ಜಿಲ್ಲಾಡಳಿತ ನೀಡುತ್ತಿರುವ ನೀರಿನ ಸೌಲಭ್ಯವನ್ನು ಪರಿಶೀಲಿಸುತ್ತಿದ್ದಾರೆ. ಅವಶ್ಯವಿದ್ದಡೆ ಬೋರ್ ವೆಲ್ ಸಹ ಹಾಕಲಾಗುತ್ತಿದೆ. ಗುರುವಾರ ಅವರು ಹಳಿಯಾಳ ತಾಲೂಕಿನ ಹತ್ತಾರು ಹಳ್ಳಿಗಳಿಗೆ ಅಧಿಕಾರಿಗಳ ತಂಡದ ಜೊತೆ ಭೇಟಿ ನೀಡಿ, ಜನರ ಜೊತೆ ನೇರವಾಗಿ ಮಾತುಕತೆ ನಡೆಸಿದರು. ಹಳಿಯಾಳದ ಮುರ್ಕವಾಡ, ಭಗವತಿ, ಕೆ.ಕೆ.ಹಳ್ಳಿ ಗಳಿಗೆ ಭೇಟಿ ನೀಡಿ ಜನರ ಜೊತೆ ಮಾತನಾಡಿದರು. ಬಿ.ಕೆ.ಹಳ್ಳಿಗೆ ಸಹ ಭೇಟಿ ನೀಡಿದರು. ಟಾಸ್ಕಪೋರ್ಸ ನಡಿ ಕೈಗೊಂಡ ಕಾಮಗಾರಿ ಅಥವಾ ಪಯರ್ಾಯ ನೀರಿನ ವ್ಯವಸ್ಥೆಯ ಬಿಲ್ ಗಳನ್ನು ತಕ್ಷಣ ಜಿಲ್ಲಾ ಪಂಚಾಯತ್ ಕಚೇರಿಗೆ ಕಳುಹಿಸಲು ಸೂಚಿಸಿದರು. ಜನರಿಗೆ ಕುಡಿಯುವ ನೀರನ್ನು ತೊಂದರೆಯಾಗದಂತೆ, ನಿಯತವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಮಹೇಶ್ ಕುರಿಯವರ, ಎ.ಸಿ.ಹಳೆಮನಿ, ಸಹಾಯಕ ಎಂಜಿನಿಯರ್ಗಳು, ಸಿಬ್ಬಂದಿ ಉಪಸ್ಥಿತರಿದ್ದರು.