ಬಾಲಕಿಯರ ಬಾಲಮಂದಿರಕ್ಕೆ ಜಿ.ಪಂ ಅಧ್ಯಕ್ಷೆ ಭೇಟಿ

ಬಾಗಲಕೋಟೆ: ನವನಗರದ ಬಾಲಕಿಯರ ಬಾಲಮಂದಿರಕ್ಕೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಮಂಗಳವಾರ ಬೇಟಿ ನೀಡಿ ಪರಿಶೀಲನೆ ಮಾಡಿದರು.

ಬಾಲಮಂದಿರದ ಮಕ್ಕಳಿರುವ ಕೋಣೆಗೆ ಹೋಗಿ ಅವರ ಕ್ಷೇಮವನ್ನು ಆಲಿಸಿ ಸರಿಯಾಗಿ ಊಟ ನೀಡುತ್ತಿರುವ ಬಗ್ಗೆ ವಿಚಾರಿಸಿದರು. ಅಲ್ಲದೇ ಅಲ್ಲಿರುವ ಅಧಿಕಾರಿಗಳನ್ನು ಕರೆದು ಮಕ್ಕಳಿಗೆ ಉತ್ತಮ ಆಹಾರ ನೀಡಬೇಕು. ಈ ಮಂದಿರದಲ್ಲಿ ಅನಾಥ ಮಕ್ಕಳು ಇರುವದರಿಂದ ಅವರನ್ನು ತಮ್ಮ ಮಕ್ಕಳಂತೆ ಕಾಣಬೇಕು. ಅವರಿಗೆ ಸರಿಯಾದ ಊಟೋಪಚಾರ, ಅವರ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಅಲ್ಲಿರುವ ಅನಾಥ ಓರ್ವ ಬಾಲಕಿಯ ಅಳಲನ್ನು ಆಲಿಸಿ ಸ್ವತಃ ಆ ಬಾಲಕಿಗೆ ತಮ್ಮ ಕೈ ತುತ್ತನ್ನು ಉಣಿಸಿದರು. ಅಲ್ಲದೇ ಮಕ್ಕಳನ್ನು ಎತ್ತಿಕೊಂಡರು. 

ಅಲ್ಲದೇ ಊಟದ ಕೋಣೆಗೆ ತೆರಳಿ ಅಲ್ಲಿರುವ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಆಹಾರಧಾನ್ಯ ಇರುವ ಕೋಣೆಗೆ ತೆರೆಳಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸುವಂತೆ ಸೂಚಿಸಿದರು. ಸರಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇಂತಹ ಅನಾಥ ಮಕ್ಕಳಿಗಾಗಿಯೇ ಬಾಲ ಮಂದಿರಗಳನ್ನು ತೆರೆಯಲಾಗಿದ್ದು, ಅಲ್ಲಿರುವ ಮಕ್ಕಳು ಅನಾಥ ಎಂಬುದನ್ನು ಮರೆಯುವಂತೆ ಮಾಡಬೇಕು ಎಂದರು.