ಮಾಸ್ಕೋ, ಅ 19: ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ಜಿ-8 ಸ್ವರೂಪ ಇನ್ನು ಮುಂದೆ ಸೂಕ್ತವಲ್ಲವಾದ್ದರಿಂದ ಕೇಂದ್ರೀಯ ಪಾತ್ರವನ್ನು ವಿಶ್ವಸಂಸ್ಥೆ ವಹಿಸಬೇಕು ಎಂದು ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ. ಮೆಡ್ವೆಡೆವ್ ಅವರು ಬೆಲ್ಗ್ರಡ್ಗೆ ಭೇಟಿ ನೀಡಿದ ಮುನ್ನಾದಿನ ಸೆರ್ಬಿಯಾದ ಪತ್ರಿಕೆ ವೆಸನ್ಜರ್ೆ ನೊವೊಸ್ಟಿ ಗೆ ನೀಡಿದ ಸಂದರ್ಶನದಲ್ಲಿ ಅವರು, ಇತ್ತೀಚೆಗೆ ರಷ್ಯಾ ಸಹ ಭಾಗವಹಿಸಿದ್ದ ಜಿ- 8 ಶೃಂಗಸಭೆಯಲ್ಲಿ ವಿಶ್ವದ ಸಮಸ್ಯೆಗಳ ಮಹತ್ವದ ಭಾಗವನ್ನು ಪರಿಹರಿಸಲಾಗಿದೆ ಎಂದು ಅವರು ಗಮನಿಸಿದರು. ' ಶೃಂಗಸಭೆ ನಂತರ, ಜಿ-8 ಒಕ್ಕೂಟದ ರಾಷ್ಟ್ರಗಳು ನೀವು ಹೊಂದಿಕೆಯಾಗುವುದಿಲ್ಲ ಎಂದು ಹೇಳಿ ನಮ್ಮನ್ನು ಹೊರಗೆ ಎಸೆದಿವೆ. ಆದರೆ ಈಗ ಅವರು ಇತರ ದೇಶಗಳ ಒತ್ತಾಯದ ಮೇಲೆ ಹಿಂತಿರುಗುವಂತೆ ಸಕ್ರಿಯವಾಗಿ ನಮ್ಮನ್ನು ಆಹ್ವಾನಿಸುತ್ತಿವೆ. ಆದರೆ ಶೃಂಗಸಭೆಯಲ್ಲಿ ನಮ್ಮನ್ನು ಹೇಗೆ ನೋಡಿಕೊಳ್ಳಲಾಯಿತು ಎಂಬುದು ಈಗ ವಿಷಯವಲ್ಲ. ಆದರೆ ಇಂದು ಜಿ- 8 ಸ್ವರೂಪದಲ್ಲಿ ವಿಶ್ವದ ಸಮಸ್ಯೆಗಳನ್ನು ಪರಿಹರಿಸಲು ಅಸಾಧ್ಯವಾಗಿದೆ.' ಎಂದು ಮೆಡ್ವೆಡೆವ್ ಹೇಳಿದ್ದಾರೆ. "ಆದ್ದರಿಂದ, ನಿಸ್ಸಂದೇಹವಾಗಿ ವಿಶ್ವಸಂಸ್ಥೆ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಇವು ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳಾಗಿವೆ. ಇವು ಇನ್ನೂ ದಣಿಯದೆ ತಮ್ಮ ಸಾಮಥ್ರ್ಯವನ್ನು ಹೊಂದಿವೆ.' ಎಂದು ರಷ್ಯಾ ಪ್ರಧಾನಿ ಪ್ರತಿಪಾದಿಸಿದ್ದಾರೆ.