ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಯಾಗಿ ಜಿ. ಸುರೇಶ ಅಧಿಕಾರ ಸ್ವೀಕಾರ

ಕೊಪ್ಪಳ 11: ಕೊಪ್ಪಳ ಜಿಲ್ಲಾ ಪ್ರಭಾರಿ ವಾತರ್ಾಧಿಕಾರಿಯಾಗಿ ಜಿ. ಸುರೇಶ ಅವರು ಬುಧವಾರದಂದು ಅಧಿಕಾರ ವಹಿಸಿಕೊಂಡರು. ಕೊಪ್ಪಳ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಹೆಚ್ಚುವರಿ ಪ್ರಭಾರ ವಾರ್ತಾ ಧಿಕಾರಿಯಾಗಿದ್ದ ಬಿ. ಧನಂಜಯಪ್ಪ ಅವರು ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ರಾಯಚೂರು ಜಿಲ್ಲೆಯ ವಾರ್ತಾ ಸಹಾಯಕರಾದ ಜಿ. ಸುರೇಶ ಅವರು ಕೊಪ್ಪಳ ವಾರ್ತಾಧಿಕಾರಿಯ ಪ್ರಭಾರವನ್ನು ವಹಿಸಿಕೊಂಡರು.  ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಪತ್ರಕರ್ತರು ಅವರನ್ನು ಸ್ವಾಗತಿಸಿ ಆತ್ಮೀಯವಾಗಿ ಬರ ಮಾಡಿಕೊಂಡರು.