ಬೆಳಗಾವಿ: ಇತ್ತೀಚೆಗೆ ಬೆಳಗಾವಿಯ ಸೈರಾಜ್ ಬಿಲ್ಡಸರ್್ ಮತ್ತು ಡೆವಲಪಸರ್್ ಅವರು ಆಯೋಜಿಸಿದ್ದ ಫುಟ್ಬಾಲ್ ಸರಣಿಯ ಫೈನಲ್ ಪಂದ್ಯದಲ್ಲಿ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು 3-1 ಗೋಲುಗಳಿಂದ ಬೆಳಗಾವಿಯ ಪೀಪಲ್ಸ್ ಟ್ರೀ ಕಾಲೇಜನ್ನು ಸೋಲಿಸಿ ಸೈರಾಜ್ ಇಂಟರ್ ಕಾಲೇಜಿಯೇಟ್ ಫುಟ್ಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರಂಭದ ಸುತ್ತುಗಳಲ್ಲಿ ಜೈನ್ ಹೆರಿಟೇಜ್ ಅನ್ನು 1-0 ಗೋಲುಗಳಿಂದ, ಎಸ್ ಜಿ ಬಿ ಐ ಟಿ ಯನ್ನು 4-2 ಗೋಲುಗಳಿಂದ ಮತ್ತು ಜೈನ್ ಇಂಜಿನಿಯರಿಂಗ್ ಕಾಲೇಜನ್ನು 4-2 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಜಿ ಐ ಟಿ ವಿದ್ಯಾಥರ್ಿ ಕು. ಡ್ಯಾನಿಷ್ ಸಾವಂತ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಮತ್ತು ಕು. ಜೋತಿಬಾ ಪಾಟೀಲ್ ಫೈನಲ್ನಲ್ಲಿ 2 ಗೋಲು ಗಳಿಸುವ ಮೂಲಕ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಜಿ.ಐ.ಟಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ.ಎಂ.ಆರ್.ಕುಲಕಣರ್ಿ, ಪ್ರಾಂಶುಪಾಲರಾದ ಪ್ರೊ.ಡಿ.ಎ.ಕುಲಕಣರ್ಿ, ಜಿಮಖಾನ ಅಧ್ಯಕ್ಷ ಶ್ರೀ ರಮೇಶ್ ಮೇದಾರ್, ದೈಹಿಕ ಶಿಕ್ಷಣ ನಿದರ್ೆಶಕ ಡಾ.ಪಿ.ವಿ. ಕಡಗಡ್ಕೈ,ಸಹಾಯಕ ದೈಹಿಕ ಶಿಕ್ಷಣ ನಿದರ್ೆಶಕಿ ಶ್ರೀಮತಿ. ಕ್ರಾಂತಿ ಕುರಣಕರ್ ವಿಜೇತರನ್ನು ಅಭಿನಂದಿಸಿದರು.