ಕಾಗವಾಡ 09: ತಾಲೂಕಿನ ಮೋಳೆ ಗ್ರಾಮದ ಯುವ ಪೋಲಿಸ ಪದೇ ವಿದ್ಯಾಸಾಗರ ಮದಪ್ಪ ಯರಂಡೋಲಿ (37) ಅನಾರೋಗ್ಯದಿಂದ ಗುರುವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ , ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಪೋಲಿಸ್ ಗೌರವಗಳೊಂದಿಗೆ ಸ್ವಗ್ರಾಮದ ಸ್ಮಶಾನದಲ್ಲಿ ನಡೆಯಿತು.
ವಿದ್ಯಾಸಾಗರ ಕಳೆದ ಸುಮಾರು ಹನ್ನೊಂದು ವರ್ಷಗಳಿಂದ ಕರ್ನಾಟಕ ರಾಜ್ಯದ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೇದೆಯಾಗಿ ವಿವಿಧ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ಬೆಂಗಳೂರು ಕೇಂದ್ರ ಕಚೇರಿ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಸ್ವಗ್ರಾಮಕ್ಕೆ ಆಗಮಿಸಿ, ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಲಿಸದೆ ಗುರುವಾರ ಕೊನೆಯುಸಿರೆಳೆದರು ಅವರು ತಾಯಿ,ಹಾಗೂ ಇಬ್ಬರು ಅಕ್ಕಂದಿರು ಬಿಟ್ಟು ಅಗಲಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಪೋಲಿಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ. ಗೌರವ ಸಲ್ಲಿಸಿದರು. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಡಿವೈಎಸ್ಪಿ ಗಜಾನನ ಖೋತ ಇನ್ಸ್ಪೆಕ್ಟರಗಳಾದ ಮಹಾಂತೇಶ ಮುದವಿ, ಮಾರುತಿ ಡೋನಿ, ಕಾಗವಾಡ ಠಾಣೆಯ ಪಿಎಸ್‌ಐ ಗಂಗಾ ಬಿರಾದರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಗೌರವ ವಂದನೆ ಸಲ್ಲಿಸಿದರು.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮುಖಂಡರುಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.