ಕೇಪ್ ಟೌನ್, ಏ.22 ,ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಕಾರಣದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ (ಕೋವಿಡ್ -19) ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ."ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನರಲ್ಲಿ ಸೋಂಕಿನ ಸಂಭವವು ಬಹಳ ವೇಗವಾಗಿ ಹೆಚ್ಚಾಗಿದೆ ಎಂದು ನಾವು ನೋಡಿದ್ದೇವೆ, ಇದು ಕಳವಳಕಾರಿ ಸಂಗತಿಯಾಗಿದೆ" ಎಂದು ಆರೋಗ್ಯ ಸಚಿವ ಜ್ವೆಲಿ ಮಖಿಜೆ ಮಂಗಳವಾರ ಹೇಳಿದ್ದಾರೆ.ಕೊರೊನಾ ವೈರಸ್ ಪರೀಕ್ಷೆಗೆ ಮೊದಲು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಜನರಲ್ಲಿ ಸೋಂಕು ಧೃಡಪಟ್ಟಿದೆ ಎಂದು ಮಖಿಜೆ ತಿಳಿಸಿದ್ದಾರೆ.ಮಾರ್ಚ್ 27 ರಿಂದ ದಕ್ಷಿಣ ಆಫ್ರಿಕಾ ಲಾಕ್‌ಡೌನ್ ಆಗಿದೆ. ಲಾಕ್‌ಡೌನ್ ನಿಯಮಗಳ ಪ್ರಕಾರ ಅಂತ್ಯಕ್ರಿಯೆಗಳನ್ನು ಹೊರತುಪಡಿಸಿ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ 100 ಕ್ಕೂ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಪೂರ್ವ ಕೇಪ್ ಪ್ರಾಂತ್ಯದಲ್ಲಿ ಮಂಗಳವಾರದವರೆಗೆ 345 ಕರೋನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪರಿಣಾಮವಾಗಿ ಸೋಂಕಿತರ ಸಂಖ್ಯೆಯಲ್ಲಿ ಶೀಘ್ರ ಏರಿಕೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.ಮಂಗಳವಾರದವರೆಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3465 ಕ್ಕೆ ಏರಿದ್ದು, ಸಾವಿನ ಸಂಖ್ಯೆ 58 ಆಗಿದೆ ಎಂದು ತಿಳಿಸಿದ್ದಾರೆ. ಈವರೆಗೆ ಒಟ್ಟು 1,26,937 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಪೈಕಿ 5,427 ಪರೀಕ್ಷೆಗಳನ್ನು ಕಳೆದ 24 ಗಂಟೆಗಳಲ್ಲಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.