ಹೋರಾಟಕ್ಕೆ ತನು ಮನ ಧನದ ಸಹಕಾರ: ಡಾ.ಪ್ರಭುಗೌಡ
Full support for the struggle: Dr. Prabhugowda
ತಾಳಿಕೋಟಿ 19: ನಾನು ಕೂಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದವನಾಗಿರುವುದರಿಂದ ರೈತರ ಸಂಕಷ್ಟದ ಅರಿವು ನನಗಿದೆ. ಶುಕ್ರವಾರ ನಮ್ಮ ಪಕ್ಷದ ಈ ಭಾಗದ ಮುಖಂಡರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರನ್ನು ಭೇಟಿಯಾಗಿ ಈ ಸಮಸ್ಯೆ ಕುರಿತು ಮಾತನಾಡಿದ್ದು ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕಾರಿಗಳಿಂದ ವರದಿ ಪಡೆದು ಇನ್ನೆರಡು ದಿನಗಳಲ್ಲಿ ಧರಣಿ ನಿರತಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ.
ರೈತರ ಕುರಿತು ಅವರಿಗೆ ಅಪಾರ ಕಾಳಜಿ ಇದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ತಾಳಿಕೋಟಿ ತಾಲೂಕಿನ ಕೊಡಗನೂರ ಕ್ರಾಸ್ ಹತ್ತಿರ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಹೊಲಗಾವಲು ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ 38 ಗ್ರಾಮಗಳ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ 8 ನೇ ದಿನದ ಧರಣಿಗೆ ಬೆಂಬಲಿಸಿ ಅವರು ಮಾತನಾಡಿದರು. ಎಂ.ಬಿ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಇಂದಿಗೂ ಜನ ಅವರನ್ನು ನೆನೆಸುತ್ತಾರೆ ಈ ಕೆಲಸವನ್ನೂ ಅವರು ಮಾಡಿಕೊಡುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ ಇದರ ಹೊರತಾಗಿ ನೀವು ಸಿದ್ಧರಿದ್ದರೆ ನಿಮ್ಮನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ನೀರಾವರಿ ಸಚಿವರು ಹಾಗೂ ಉಸ್ತುವಾರಿ ಸಚಿವರಿಗೆ ಭೇಟಿ ಮಾಡಿಸುತ್ತೇನೆ ಎಂದರು.
ಅವರು ನನಗೆ ರೈತರ ಹಿತಾಸಕ್ತಿ ಮುಖ್ಯ ಇದಕ್ಕಾಗಿ ನಾನು ಸರ್ವ ತ್ಯಾಗಕ್ಕೂ ಸಿದ್ಧ ನ್ಯಾಯಯುತವಾದ ಈ ಬೇಡಿಕೆ ಈಡೇರಿಸದೆ ಹೋದಲ್ಲಿ ನಾನು ಸಹ ಹಗಲು ರಾತ್ರಿ ನಿಮ್ಮ ಜೊತೆಯಲ್ಲಿದ್ದು ಹೋರಾಟದಲ್ಲಿ ತನು ಮನ ಧನ ದೊಂದಿಗೆ ಭಾಗವಹಿಸುತ್ತೇನೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಈ ಭಾಗದ 38 ಹಳ್ಳಿಗಳ ರೈತರ ಬದುಕು ಹಸನಗೊಳಿಸುವ ಈ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಆದಷ್ಟು ಬೇಗ ಕ್ರಮ ವಹಿಸಬೇಕು ಇವರ ಬೇಡಿಕೆಯಲ್ಲಿ ಯಾವ ಸ್ವಾರ್ಥವೂ ಇಲ್ಲ ನಮ್ಮ ರೈತರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡವರು ಅವರಿಗೆ ಮೋಸ ಎಂಬುದು ಗೊತ್ತಿಲ್ಲ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಸರ್ಕಾರಗಳು ಮಾಡಬೇಕು ಈ ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ನಾನು ಕೂಡ ಉಸ್ತುವಾರಿ ಸಚಿವರೊಂದಿಗೆ ಮಾತನಾಡುತ್ತೇನೆ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ರೈತ ಮುಖಂಡರಾದ ಸುರೇಶಬಾಬುಗೌಡ ಬಿರಾದಾರ(ಪೀರಾಪೂರ),ತಾಪಂ ಮಾಜಿ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ಪಕ್ಕದ ಇಂಡಿ ತಾಲೂಕಿಗೆ ರೂ.4 ಸಾವಿರ ಕೋಟಿ ಗಿಂತಲೂ ಹೆಚ್ಚು ಅನುದಾನವನ್ನು ನೀಡಿ ಸ್ವತಃ ತಾವೇ ಬಂದು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೀಡುವ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಿಗೆ ಕೇವಲ 200 ಕೋಟಿ ಬೇಡಿಕೆಯ ಈ ನಮ್ಮ ಹೋರಾಟ ಕಾಣುವುದಿಲ್ಲ. ಇದು ಹೃದಯಹೀನ ಸರ್ಕಾರ ಈ ಕೆಟ್ಟ ಧೋರಣೆಯನ್ನು ಖಂಡಿಸಿ ಜುಲೈ 21ರಂದು ತಾಳಿಕೋಟಿ ಪಟ್ಟಣದಲ್ಲಿ ಎತ್ತಿನ ಬಂಡಿ ಚಳುವಳಿ ಹಮ್ಮಿಕೊಂಡಿದ್ದೇವೆ ಇದಕ್ಕೆ ಎಲ್ಲ ರೈತ ಬಾಂಧವರು ಸಹಕರಿಸಬೇಕು ಎಂದರು.
ಧರಣಿಯಲ್ಲಿ ಪ್ರಗತಿಪರ ರೈತರಾದ ಪ್ರಭುಗೌಡ ಬಿರಾದಾರ ಅಸ್ಕಿ,ಸುರೇಶಕುಮಾರ ಇಂಗಳಗೇರಿ,ಡಾ.ಪ್ರಭುಗೌಡ ಬಿರಾದಾರ, ಶಿವಪುತ್ರ ಚೌಧರಿ, ರಾಯಪ್ಪಗೌಡ ಪಾಟೀಲ, ಎಚ್.ಎನ್.ಬಿರಾದಾರ, ಕಲಕೇರಿ ಗ್ರಾಪಂ ಅಧ್ಯಕ್ಷ ರಾಜ ಅಹಮದ್ ಸಿರಸಗಿ, ಕಿರಣ ಕುಮಾರ ದೇಸಾಯಿ, ರಾಜು ಅಡಕಿ, ಹಣಮಂತ ವಡ್ಡರ, ಮಹಿಬೂಬ ಬಾಷಾ ಮನಗೂಳಿ, ಶಿವನಗೌಡ ಬಿರಾದಾರ ಅಸ್ಕಿ, ಗುರುರಾಜ್ ಪಡಶೆಟ್ಟಿ ಹಾಗೂ ವಿವಿಧ ಗ್ರಾಮಗಳ ರೈತರು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 