ನವದೆಹಲಿ, ಜೂನ್ 12, ಕೊರೊನಾ ಸೋಂಕು, ದೇಶಾದ್ಯಂತ ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಪೂರ್ಣ ವೇತನ ಪಾವತಿಸಬೇಕು ಎಂಬ ಕೇಂದ್ರದ ಆದೇಶ ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಕಳದೆ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು ಅಲ್ಲಿಂದ ಸುಮಾರು 54ಕ್ಕೂ ಅಧಿಕ ದಿನಗಳವರೆಗೂ ಅಗತ್ಯ ಸೇವೆ ಹೊರತುಪಡಿಸಿದರೆ ಬೇರೆ ಯಾವುದೆ ಚಟುವಟಿಕೆಯೂ ನಡೆದಿರಲಿಲ್ಲ .ಈ ವೇಳೆ ಲಾಕ್ಡೌನ್ ಅವಧಿಯಲ್ಲೂ ಕಾರ್ಮಿಕರಿಗೆ ಕಂಪನಿಗಳು ಪೂರ್ತಿ ಸಂಬಳ ನೀಡಬೇಕು ಎಂದು ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ಕೇಂದ್ರದ ಆದೇಶ ಪ್ರಶ್ನಿಸಿ, ಖಾಸಗಿ ಕಂಪನಿಗಳು ಕಾನೂನು ಹೋರಾಟಕ್ಕಾಗಿ ಸುಪ್ರೀಂಕೋರ್ಟ್ಗೆ ಮೆಟ್ಟಲೇರಿದ್ದವು.