ಇಂಧನ ಸಹಕಾರ: ರಷ್ಯಾ ಸಚಿವರೊಂದಿಗೆ ಮಾತುಕತೆ: ಕೇಂದ್ರ ಸಚಿವ ಧರ್ಮೆರೇಂದ್ರ ಪ್ರಧಾನ್

ಮಾಸ್ಕೋ 4: ತೈಲ ಮಾರುಕಟ್ಟೆಯ ಪರಿಸ್ಥಿತಿ ಮತ್ತು ದ್ವಿ ಪಕ್ಷೀಯ ಇಂಧನ ಸಹಕಾರವನ್ನು ಹೆಚ್ಚಿಸುವ ಮಾಗರ್ೊಪಾಯಗಳ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮರೇಂದ್ರ ಪ್ರಧಾನ್ ಮತ್ತು ರಷ್ಯಾದ ಇಂಧನ ಸಚಿವ ಅಲೆಕ್ಸಾಂಡರ್ ನೊವಾಕ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. 

 "ಭಾರತ-ರಷ್ಯಾ ಇಂಧನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಹೈಡ್ರೋಕಾರ್ಬನ್ ವಲಯವನ್ನು ಭಾರತ-ರಷ್ಯಾ, ವಿಶೇಷ ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವದ ಪ್ರಮುಖ ಆಧಾರ ಸ್ತಂಭವನ್ನಾಗಿ ಮಾಡುವಲ್ಲಿ ಉಭಯ ಸಚಿವರು ಚರ್ಚಸಿದ್ದಾರೆ" ಎಂದು ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. 

  ಮಾತುಕತೆಯ ವೇಳೆ,  ಕಳೆದ ಕೆಲವು ವಾರಗಳಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ಏರಿಳಿತದ ಬಗ್ಗೆ ಪ್ರಧಾನ್ ಕಳವಳ ವ್ಯಕ್ತಪಡಿಸಿದರು. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯೊಂದಿಗೆ  ತನ್ನ ಮಾತುಕತೆಯಲ್ಲಿ ಸಮತೋಲನ ಕಾಪಾಡುವ ಪ್ರಯತ್ನವನ್ನು ಮುಂದುವರಿಸಬೇಕು ಹಾಗೂ ಗ್ರಾಹಕ ದೇಶಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಸಚಿವ ಪ್ರಧಾನ್ ಮಾಸ್ಕೋವನ್ನು ಒತ್ತಾಯಿಸಿದರು. ರಷ್ಯಾದಲ್ಲಿ ಹೊಸ ಅನ್ವೇಷಣೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಭಾರತದ ಆಸಕ್ತಿಯನ್ನು ಪ್ರಧಾನ್ ಎತ್ತಿ ತೋರಿಸಿದರು. 

   ರಷ್ಯಾದ ತೈಲ ಮತ್ತು ಅನಿಲ ಕಂಪನಿಗಳಿಗೆ ಅನಿಲ ಮೂಲಸೌಕರ್ಯಗಳನ್ನು ಒದಗಿಸಲು ಮತ್ತು ಭಾರತದಲ್ಲಿ ನಗರ ಅನಿಲ ಪೂರೈಕೆ ಜಾಲಗಳನ್ನು ವಿಸ್ತರಿಸಲು ಹೂಡಿಕೆ ಮಾಡಲು ಅವರು ರಷ್ಯಾವನ್ನು ಆಹ್ವಾನಿಸಿದರು.