ಇಂದಿನಿಂದ ಹಳೆ ಗುಡಗನಹಟ್ಟಿ ಬ್ರಹ್ಮದೇವರ ಜಾತ್ರೇ
From today onwards, the old Gudaganahati will be the Brahmadeva fair
ಲೋಕದರ್ಶನ ವರದಿ
ಯಮಕನಮರಡಿ 20 : ಧರ್ಮಗಳ ಬೀಡಾದ ನಮ್ಮ ಕನ್ನಡ ನಾಡು ಆಧ್ಯಾತ್ಮಿಕ ಬೀಡು ಅಪಾರ ಹಳ್ಳಿ ಪಟ್ಟಣಗಳಲ್ಲಿ ಅತಿ ಪೂರ್ವದಿಂದಲೂ ಸ್ಥಾಪನೆಗೊಂಡಿರುವ ದೇವಸ್ಥಾನಗಳು ಇಂದಿಗೂ ಗತವೈಭವದಿಂದ ರಾರಾಜಿಸುತ್ತ ಇರುವುದೊಂದು ಹೆಮ್ಮೆಪಡುವ ಸಂಗತಿ ಸನಾತನ ಧರ್ಮದಿಂದ ಕೂಡಿರುವ ನಮ್ಮ ದೇಶ ನಾಡು ಹಳ್ಳಿ ಪಟ್ಟಣಗಳು ಇಂದಿಗೂ ತಮ್ಮ ಆಚಾರ ವಿಚಾರ ಸಂಪ್ರದಾಯ ಚಾಚು ತಪ್ಪದೇ ಆಚರಿಸುತ್ತಾ ಬಂದಿರುವ ಈ ನಮ್ಮ ನಾಡಿನಲ್ಲಿ ಜಾಗೃತ ದೇವಸ್ಥಾನಗಳು ಇಂದಿಗೂ ತಮ್ಮ ವೈಭವದೊಂದಿಗೆ ನಂಬಿದ ಭಕ್ತರ ಕಾಮಧೇನು ಗಳಾಗಿ ಸಾಕ್ಷಾತ್ಕಾರ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಒಂದು ಧಾರ್ಮಿಕವಾದ ಗ್ರಾಮ ಅದೇ ಹಳೆ ಗುಡಗನಟ್ಟಿ ಗ್ರಾಮ ಈ ಗ್ರಾಮವು ಘಟಪ್ರಭಾ ನದಿ ತೀರದಲ್ಲಿ ಇರುವುದರಿಂದ ಇದಕ್ಕೆ ಪುಣ್ಯಕ್ಷೇತ್ರ ಎಂದು ಕರೆಯಲ್ಪಡುತ್ತಿದ್ದರು ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಬರಡು ಭೂಮಿಗಳನ್ನು ಹಸಿರನ್ನಾಗಿ ಮಾಡಲು ಸರ್ಕಾರ ಮುಂದೆ ಬಂದು ಅನೇಕ ನದಿಗಳಿಗೆ ಆಣೆಕಟ್ಟುಗಳನ್ನು ಕಟ್ಟಿ ರೈತರಿಗೆ ನೀರಿನ ಸೌಲಭ್ಯ ಒದಗಿಸಿ ಕೊಟ್ಟಿರುವದೊಂದು ಸಂತಸದ ಸಂಗತಿ ಆದರೆ ಅದರ ಜೊತೆಗೆ ನೋವಿನ ಸಂಗತಿಯು ಇರುತ್ತದೆ ಹುಕ್ಕೇರಿ ತಾಲೂಕಿನಲ್ಲಿ ಹರಿದಿರುವ ನದಿಗಳಲ್ಲಿ ಘಟಪ್ರಭಾ ನದಿಯು ಪವಿತ್ರವಾದ ನದಿಯು ಈ ನದಿಯ ದಡದಲ್ಲಿ ಅನೇಕ ದೇವಸ್ಥಾನಗಳು ಇದ್ದವು ಆದರೆ ಸದರಿ ನದಿಗೆ ಸರ್ಕಾರವು ಬೃಹತ್ ಗಾತ್ರದ ಆಣೆಕಟ್ಟನ್ನು ಕಟ್ಟಿ ಇಡಿ ಒಂಟಮೊರಿ ಸಂಸ್ತಾನವನ್ನು ಮುಳುಗಿಸಿ ಬಿಟ್ಟಿತು.
ಅದರಲ್ಲಿ ಒಂದಾದ ಹಳೆ ಗೂಡಗನಟ್ಟಿ ಗ್ರಾಮ ಈ ಗ್ರಾಮದ ಜಾಗ್ರತ ದೇವಸ್ಥಾನ ಶ್ರೀ ಬ್ರಹ್ಮದೇವರ ದೇವಸ್ಥಾನ ಅದು ಸಹಿತ ಹಿಡಕಲ್ ಜಲಾಶಯ ಹಿನ್ನಿರಿನಲ್ಲಿ ಮುಳುಗಡೆ ಹೊಂದಿ ಪಕ್ಕದ ಎತ್ತರ ಪ್ರದೇಶದಲ್ಲಿ ಹೊಸ ಗ್ರಾಮವು ನಿರ್ಮಾಣವಾಗಿ ಅದೇ ಗ್ರಾಮದಲ್ಲಿ ಮತ್ತೊಂದು ಬ್ರಹ್ಮದೇವರ ದೇವಸ್ಥಾನ ನಿರ್ಮಾಣಗೊಂಡಿತು ಆದರೂ ಸಹಿತ ಸದರಿ ಹಳೆ ಗೂಡಗನಟ್ಟಿ ಗ್ರಾಮದ ಜನರು ಅತಿ ಪೂರ್ವದಿಂದ ಸದರಿ ದೇವಸ್ಥಾನದ ಪ್ರತಿವರ್ಷದ ಹೊಸ ವರ್ಷದ ಮುಂಚಿತ ಜಾತ್ರೆ ಸಮಾರಂಭ ಮಹಾಪ್ರಸಾದ ಪಲ್ಲಕ್ಕಿ ಉತ್ಸವ ಆಚರಿಸುತ್ತ ಬಂದಿರುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿ ಇರುತ್ತದೆ.
ಅದರಂತೆ ಬರುವ ದಿನಾಂಕ್ 23 24 ವರೆಗೆ ಜರಗುವ ಬ್ರಹ್ಮದೇವರ ಜಾತ್ರೆಯು ಅತಿ ವಿಜ್ರಂಭಣೆಯಿಂದ ಜರುಗಲಿದೆ ಎಂದು ಯಾತ್ರಾ ಕಮಿಟಿ ತಿಳಿಸಿದೆ ಜಾತ್ರೆಯ ಅಂಗವಾಗಿ ವಿವಿಧ ಸ್ಪರ್ಧೆಗಳು ಪಲ್ಲಕ್ಕಿ ಉತ್ಸವ ಜರುಗಲಿದ್ದು ನಾಡಿನ ಉದ್ದಕ್ಕೂ ಅನೇಕ ದೇವಸ್ಥಾನಗಳು ನದಿಗಳಲ್ಲಿ ಮುಳುಗಿ ಹೋದರು ಸಹಿತ ಜನರಲ್ಲಿಯ ಭಕ್ತಿ ಮಾತ್ರ ಮುಳುಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಹಳೆ ಗೂಡಗನಟ್ಟಿ ಗ್ರಾಮದ ಶ್ರೀ ಬ್ರಹ್ಮದೇವರ ಜಾತ್ರೆಯು ಸಾಕ್ಷಿಯಾಗಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 