ಜವುಳ ಗಲ್ಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ಜವುಳ ಗಲ್ಲಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ From the Chairman of the Five Guarantee Schemes Implementation Authority

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಂದ 

ಗದಗ 23:-  ಇತ್ತೀಚಿಗಷ್ಟೇ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 17 ಮತ್ತು 18 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಕಡು ಬಡವರನ್ನು ಹೊಂದಿರುವ ಬಡಾವಣೆಯ ಪ್ರದೇಶದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರ ಮಹತ್ವಾಕಾಂಕ್ಷಿ ಯೋಜನೆಯಾದ ಜವುಳ ಗಲ್ಲಿಯ ರಾಜಕಾಲುವೆಗೆ ಹೊಂದಿಕೊಂಡಿರುವ ಪ್ರದೇಶವನ್ನು ಬಡಾವಣೆಯ ನಿವಾಸಿಗಳಾದ ಮಹಿಳೆಯರ ಮಕ್ಕಳಿಗೆ, ಯುವಕರಿಗೆ ಹಾಗೂ ಹಿರಿಯ ನಾಗರಿಕರಿಗೆ ನೈತಿಕವಾಗಿ ಆರೋಗ್ಯದಾಯಕವಾಗಿ ನವ ಉತ್ಸಾಹವನ್ನೂದಗಿಸಲು ರಾಜ್ಯದಲ್ಲಿಯೇ ​‍್ರ​‍್ರಥಮಬಾರಿಗೆ ವಿನೂತನವಾಗಿ ವೈಶಿಷ್ಟೇತೆಯೊಂದಿಗೆ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳುವ ಮೂಲಕ ನಿರ್ಮಾಣಮಾಡಲಾಗುತ್ತಿರುವ ಮ್ಯೂಜೀಕಲ್ ಪೌಠೇನ್, ಹಿರಿಯ ನಾಗರಿಕರಿಗಾಗಿ  ಗ್ರಂಥಾಲಯ, ಚಿಕ್ಕ ಮಕ್ಕಳಿಗಾಗಿ ಈಜುಕೊಳ, ಉಧ್ಯಾನವನ ಯುವಕರ ಆರೋಗ್ಯದಾಯಕ ಜಿಮ್, ಹಾಗೂ ಇನ್ನಿತರೇ ಹಲವಾರು ಪ್ರಗತಿಪರ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವದು. 

ಆ ಪ್ರಯುಕ್ತ ಇತ್ತೀಚಿಗೆ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರು ಕಾಮಗಾರಿ ನಡೆದ ಸ್ಥಾನಿಕ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರೀಶೀಲನೆಯನ್ನು ಮಾಡಿದರು. ಇದರಲ್ಲಿ ತೀವ್ರಗತಿಯಲ್ಲಿ ಸಾಗಿರುವ ಉದ್ಯಾನವನ, ಮಕ್ಕಳ ಈಜುಕೋಳ, ಯುವಕರ ಜೀಮ್, ಹಿರಿಯ ನಾಗರಿಕರಿಗಾಗಿ ಗ್ರಂಥಾಲಯ ವೈವಿಧ್ಯಮಯವಾಗಿ ನಿರ್ಮಾಣವಾಗುತ್ತಿರುವುದನ್ನು ಕಂಡು ಸಂತಸಗೊಂಡರು. 

ಈ ಸಂಧರ್ಭದಲ್ಲಿ ಬಡಾವಣೆಯ ಮುಖಂಡರಾದ ಜೂನಸಾಬ್ ನಮಾಜೀ, ಮುನ್ನಾ ರಶ್ಮಿ, ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ, ಸದಸ್ಯರಾದ ಈಶ್ವರ ಹುಣಸಿಕಟ್ಟಿ, ಗದಗ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ, ಸದಸ್ಯರಾದ ಶ್ರೀಮತಿ ಸಾವಿತ್ರಿ ಹೂಗಾರ, ಪ್ರೋ, ಸಂಗಮೇಶ ಹಾದಿಮನಿ, ಪ್ರಮುಖರಾದ ಮೋಹನ ದೊಡ್ಡಕುಂಡಿ, ಅನಿಲ ಗರಗ, ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಹಾಗೂ ನಗರಸಭೆ ಸದಸ್ಯರಾದ ಬರಕತ ಅಲಿ ಮುಲ್ಲಾ  ಚನ್ನಬಸಪ್ಪ ಅಕ್ಕಿ, ಸಮೀರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.