ಜುಮ್ಮಾ ಮಸೀದಿಗೆ ಶವ ಸಂರಕ್ಷಣಾ ಫ್ರೀಜರ್ ಪೆಟ್ಟಿಗೆ ವಿತರಣೆ
Freezer box for preserving bodies distributed to Jumma Masjid
ಕಂಪ್ಲಿ25 : ಸ್ಥಳೀಯ ಕಂಪ್ಲಿ ಕೋಟೆಯ ಜುಮ್ಮಾ ಮಸೀದಿಗೆ ಅಲ್ಪಸಂಖ್ಯಾತ ಹಾಗೂ ವಕ್ ಬೋರ್ಡ್ ಅಭಿವೃದ್ಧಿ ಅನುದಾನದ ಅಡಿಯಲ್ಲಿ ಶವ ಸಂರಕ್ಷಣಾ ಫ್ರೀಜರ್ ಪೆಟ್ಟಿಗೆಯನ್ನು ಶಾಸಕ ಜೆ.ಎನ್. ಗಣೇಶ್ ಮತ್ತು ಮಾಜಿ ಸಚಿವ ಹಾಗೂ ಶಾಸಕ ಬಿ. ಝೆಡ್ ಜಮೀರ್ ಅಹ್ಮದ್ದ ಆದೇಶ ಮೇರೆಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ. ಶ್ರೀನಿವಾಸರಾವ್ ಶವ ಸಂರಕ್ಷಣಾ ಫ್ರೀಜರ್ ಪೆಟ್ಟಿಗೆಯನ್ನು ಜುಮ್ಮಾ ಮಸೀದಿಗೆ ವಿತರಿಸಿದರು ನಂತರ ಮಾತನಾಡಿ, ಪ್ರತಿಯೊಬ್ಬರು ಸಮಾಜಕ್ಕೆ ಉನ್ನತ ಕೊಡುಗೆ ನೀಡುವ ಮೂಲಕ ಕ್ಷೇತ್ರದ ಸರ್ವಧರ್ಮ ಸಮನ್ವಯತೆ ಸಾಕ್ಷಿಯಾಗಲಿದೆ ಮುಸ್ಲಿಂ ಸಮುದಾಯಕ್ಕೆ ಫ್ರೀಜರ್ ಪೆಟ್ಟಿಗೆ ವರದಾನವಾಗಲಿದೆ ಎಂದರು ಎಪಿಎಂಸಿ ಅಧ್ಯಕ್ಷ ಎನ್. ಹಬೀಬಿ ರೆಹಮಾನ್ ಮಾತನಾಡಿ, ಫ್ರೀಜರ್ ಪೆಟ್ಟಿಗೆ ಸ್ವಚ್ಛತೆಯಿಂದ ಕಾಪಾಡಿ ಮುಸ್ಲಿಂ ಸಮುದಾಯದವರು ಸಂರಕ್ಷಣೆ ಮಾಡುವ ಮೂಲಕ ಬಡವರಿಗೆ ಫ್ರೀಜರ್ ಪೆಟ್ಟಿಗೆ ಉಚಿತ ನೆರವಾಗಲಿದೆ. ಇಂತಹ ಜನಪರ ಕಾರ್ಯವನ್ನು ಶಾಸಕರು ಮಾಜಿ ಸಚಿವರು, ನಿರ್ವಹಿಸಿದ್ದಾರೆ ಅವರಿಗೆ ಎಲ್ಲಾ ಮುಸ್ಲಿಂ ಸಮಾಜದ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು. ಮಸೀದಿಯ ಆಡಳಿತ ಮಂಡಳಿಯ ಉಸ್ತುವಾರಿಯಲ್ಲಿ ಈ ಫ್ರೀಜರ್ ಪೆಟ್ಟಿಗೆಯನ್ನು ಮುಸ್ಲಿಂ ಸಾರ್ವಜನಿಕರ ಬಳಕೆಗೆ ನೀಡಲಾಗುತ್ತದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 