ಲಕ್ಷ್ಮೇಶ್ವರದಲ್ಲಿ ಲಮಾಣಿ ಅಭಿಮಾನಿಗಳಿಂದ ಉಚಿತ ಬೇಸಿಗೆ ಶಿಬಿರ
Free summer camp organized by Lamani fans in Lakshmeshwaram
ಲಕ್ಷ್ಮೇಶ್ವರ 05 : ಉಮಾ ವಿದ್ಯಾಲಯ ಪ್ರೌಢಶಾಲೆ ಲಕ್ಷ್ಮೇಶ್ವರದಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಉಚಿತ ಬೇಸಿಗೆ ಶಿಬಿರ ನಡೆಯುತ್ತಿದ್ದು ಮಂಗಳವಾರ 5ರಂದು ಬೆಳಿಗ್ಗೆ 10 ಗಂಟೆಗೆ ಡಾ. ಚಂದ್ರು ಲಮಾಣಿ ಜನಪ್ರಿಯ ಶಾಸಕರು ಶಿರಹಟ್ಟಿ ಇವರು ಕ್ಲಾಸಿಗೆ ಬಂದು ಜೀವನ ಕ್ರಿಯೆ ಎಂಬ ಪಾಠದಲ್ಲಿ ಬರುವ ಅಂಶಗಳು ಸ್ನಾಯುವಿನಿಂದಾದ ಒಂದು ಅಂಗವಾಗಿದ್ದು ಹೃದಯ ಆಕ್ಸಿಜನ್ ಕಾರ್ಬನ್ ಡೈಆಕ್ಸೈಡ್ ಶ್ವಾಸಕೋಶ ಕವಾಟಗಳ ಅಪಧಮನಿ ಅಭಿಧಮನಿ ರಕ್ತ ನಾಳಗಳ ಹೃತ್ಕಕ್ಷಿ ಕೆಂಪು ರಕ್ತ ಬಿಳಿ ರಕ್ತದ ಕಣಗಳು ಕೊರತೆಯಾದರೆ ಹೇಗೆ ಅನಾರೋಗ್ಯ ಉಂಟಾಗುತ್ತದೆ.
ಎಂಬುದನ್ನು ಮತ್ತು ಅವುಗಳ ಕಾರ್ಯಕ್ಷೇಮತೆ ಬ್ಲಡ್ ಪ್ರೆಷರ್ ಹೇಗೆ ಉಂಟಾಗುತ್ತದೆ ಅವುಗಳನ್ನು ಹೇಗೆ ಮಾಪನ ಮಾಡುತ್ತಾರೆ ಅದಕ್ಕೆ ಪರಿಹಾರ ಏನು ಎಂಬುವುದನ್ನು ಸಹ ವಿಸ್ತಾರವಾಗಿ ಹೇಳಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಹೇಗೆ ಓದಬೇಕು ಬರೆಯಬೇಕು ಕಠಿಣವಾದ ಪ್ರಶ್ನೆಗಳಿಗೆ ಹೇಗೆ ಉತ್ತರವನ್ನು ತಯಾರಿ ಮಾಡಿಕೊಳ್ಳಬೇಕು. ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ಮಾನ್ಯ ಶಾಸಕರು ಬೆಳಿಗ್ಗೆ 10 ರಿಂದ 11:30ವರೆಗೆ ಪಾಠ ಬೋಧನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ನಾಣಕಿ ನಾಯಕ. ಮಂಜುನಾಥ ಸಂಗನಪೇಟ ಶಿಬಿರದ ವ್ಯವಸ್ಥಾಪಕರಾದ ಕೆ ಆರ್ ಲಮಾಣಿ ನಾಗರಾಜ್ ಶರಣಾರ್ಥಿ ಮಹಾಂತೇಶ್ ಕಳ್ಳಳ್ಳಿ ಮುಂತಾದವರು ಇದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 