ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ತರಬೇತಿ ಶಿಬಿರ-ಉಮಾ ತಂಬ್ರಳ್ಳಿ

Free sewing training camp for women empowerment-Uma Tambralli

ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ತರಬೇತಿ ಶಿಬಿರ-ಉಮಾ ತಂಬ್ರಳ್ಳಿ 

ಕೊಪ್ಪಳ 21: ಬಡ ಹಿಂದುಳಿದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅವರಲ್ಲಿ ಕೌಶಲ್ಯ ಅಭಿವೃದ್ಧಿ ಉತ್ತೇಜಿಸಲು ಉಚಿತವಾಗಿ ಹೊಲಿಗೆ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು ಅವರು ನಗರದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ವತಿಯಿಂದ ಬಡ ಹಿಂದುಳಿದ ಮಹಿಳೆಯರಿಗಾಗಿ ಏರಿ​‍್ಡಸಿದ ಉಚಿತ ಹೊಲಿಗೆ ತರಬೇತಿ ಶಿಬಿರದ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹೊಲಿಗೆ ಮತ್ತು ಟೈಲರಿಂಗ್ ತಂತ್ರಗಳನ್ನು ಕಲಿಯುವ ಮೂಲಕ ಸ್ವಯಂ ಉದ್ಯೋಗ ಅವಕಾಶಗಳನ್ನು ಪಡೆದುಕೊಂಡು ತನ್ನ ಕುಟುಂಬದ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸಿ ಕುಟುಂಬದ ನಿರ್ವಹಣೆ ಮಾಡಿಕೊಳ್ಳಬೇಕು ಎಂದ ಅವರು ಬಡ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನಮ್ಮ ಕೊಪ್ಪಳ ಇನ್ನರ್ ವಿಲ್ ಕ್ಲಬ್ ಸಂಸ್ಥೆ ಸದಾ ಸಿದ್ಧವಾಗಿ ಶ್ರಮಿಸುತ್ತಿದೆ ಎಂದು ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಹೇಳಿದರು,ಮಹಿಳೆಯರಿಗೆ ಟೈಲರಿಂಗ್ ತರಬೇತಿ ಬಗ್ಗೆ ಸಂಸ್ಥೆಯ ಸದಸ್ಯ ಪದಾಧಿಕಾರಿಗಳಾದ ಮಾಜಿ ಅಧ್ಯಕ್ಷರಾದ ಶರಣಮ್ಮ ಪಾಟೀಲ್, ರೇಖಾ ಕಡ್ಲಿ ಮತ್ತು ಅನಿತಾ ಬಜಾರ್ ಮಠ ರವರು ಮಹಿಳೆಯರಲ್ಲಿ ಕೌಶಲ್ಯ ಅಭಿವೃದ್ಧಿ ಬೆಳೆಸಲು ಮತ್ತು ಸಮುದಾಯದ ಉನ್ನತಿ ಗಾಗಿ ಟೈಲರಿಂಗ್ ತರಬೇತಿ ಯಂತ್ರಗಳ ಬಗ್ಗೆ ತರಬೇತಿ ಮತ್ತು ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್, ಸಂಪಾದಕಿ ನಾಗವೇಣಿ ಗರೋರ್, ಮತ್ತು ಮಮತಾ ಶೆಟ್ಟರ್ ,ಅಲ್ಲದೆ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ ರಾಧಾ ಕುಲಕರ್ಣಿ ಸೇರಿದಂತೆ ಟೈಲರಿಂಗ್ ತರಬೇತಿ ಪಡೆಯುವ ಮಹಿಳಾ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.