ಕಂಪ್ಲಿಯಲ್ಲಿ ಕೇರಳ ಸ್ಟೋರಿ-2 ಚಲನಚಿತ್ರ ಉಚಿತ ಪ್ರದರ್ಶನ
Free screening of the movie 'The Kerala Story 2' in Kampli.
ಲೋಕದರ್ಶನ ವರದಿ
ಕಂಪ್ಲಿ 17: ಪಟ್ಟಣದ ಚಂದ್ರಕಲಾ ಟಾಕೀಸ್ನಲ್ಲಿ ಜುಲೈ 24ರಿಂದ 30ರವರೆಗೆ ‘ಕೇರಳ ಸ್ಟೋರಿ-2’ ಚಲನಚಿತ್ರದ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಕಂಪ್ಲಿ ಯುವಶಕ್ತಿ ಸಂಘದ ಅಧ್ಯಕ್ಷ ಎನ್.ಎಂ. ಪತ್ರಯ್ಯಸ್ವಾಮಿ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಂಪ್ಲಿ ಯುವಶಕ್ತಿ ಸಂಘ ಹಾಗೂ ಗೆಳೆಯರ ಬಳಗದ ವತಿಯಿಂದ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕೇರಳ ಸ್ಟೋರಿ-2’ ಚಲನಚಿತ್ರವು ಲವ್ ಜಿಹಾದ್, ಧಾರ್ಮಿಕ ಅತಿರೇಕ, ಮಾನವ ಕಳ್ಳ ಸಾಗಣೆ, ಮಹಿಳೆಯರ ಶೋಷಣೆ ಹಾಗೂ ಉಗ್ರಗಾಮಿ ನೇಮಕಾತಿಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಇಂತಹ ಘಟನೆಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು, ಹಿಂದೂ ಯುವತಿಯರು, ಯುವ ಸಮುದಾಯ ಹಾಗೂ ಕುಟುಂಬಗಳಲ್ಲಿ ಮುನ್ನೆಚ್ಚರಿಕೆ ಮೂಡಿಸುವ ಉದ್ದೇಶದಿಂದ ಕಂಪ್ಲಿ ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ಏಳು ದಿನಗಳ ಕಾಲ ಉಚಿತ ಪ್ರದರ್ಶನ ಏರಿ್ಡಸಲಾಗಿದೆ ಎಂದರು.
ಜುಲೈ 24ರಿಂದ 30ರವರೆಗೆ ಪ್ರತಿದಿನ ನಾಲ್ಕು ಪ್ರದರ್ಶನಗಳು ನಡೆಯಲಿದ್ದು, ಬೆಳಗ್ಗೆ ಮತ್ತು ರಾತ್ರಿ ಸಮಯ ಸೇರಿದಂತೆ ಒಟ್ಟು ನಾಲ್ಕು ಶೋಗಳಿಗೆ ವ್ಯವಸ್ಥೆ ಮಾಡಲಾಗಿದೆ. ಚಿತ್ರ ವೀಕ್ಷಿಸಲು ಚಿತ್ರಮಂದಿರದ ಆವರಣದಲ್ಲಿಯೇ ಉಚಿತ ಟಿಕೆಟ್ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಚಿತ್ರ ವೀಕ್ಷಿಸಿ ಜಾಗೃತಿ ಪಡೆಯಬೇಕು. ಮಕ್ಕಳ ಸುರಕ್ಷತೆ ಹಾಗೂ ಮಹಿಳೆಯರ ರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವಶಕ್ತಿ ಸಂಘ ಹಾಗೂ ಗೆಳೆಯರ ಬಳಗದ ಪದಾಧಿಕಾರಿಗಳಾದ ಶ್ರೀನಿವಾಸರೆಡ್ಡಿ, ಗೋತಿ ಶ್ರೀನಿವಾಸಲು, ಗೋವಿಂದ, ಡಾ. ರಾಮಾಂಜನೇಯಲು, ಟಿ. ಸುರೇಶ್ಗೌಡ, ಟಿ. ಕೃಷ್ಣ, ಎಸ್. ಚಂದ್ರಶೇಖರ್ಗೌಡ, ರಾಯ್ಕರ್ ಕಿಶೋರ್, ಚೇತನ್ ಗೋಂದಿ, ಸತ್ಯನಾರಾಯಣ, ಮಹಿಳಾ ಮುಖಂಡರಾದ ಅರವೀ ಅನೂಪಮಾ, ನಾಗರಾಜಗೌಡ, ಟಿ. ಅನ್ನಪೂರ್ಣ, ಸುರೇಶ್ಗೌಡ, ಸಿಂಧು ಚಂದ್ರಶೇಖರ್ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 